'ಟಾಸ್​​ ಗೆದ್ದ ಶ್ರೀಲಂಕಾದಿಂದ ಸ್ವಿಮ್ಮಿಂಗ್​ ಆಯ್ಕೆ'!; ಏನಿದು ಕ್ರಿಕೆಟ್​ ವಿಶ್ವಕಪ್​ನ ಹೊಸ ಸ್ಪರ್ಧೆ?

Cricket World Cup 2019: ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಪಂದ್ಯ ಕೂಡ ಆರಂಭವಾಗಿ ಕೆಲ ಹೊತ್ತಿನಲ್ಲಿ ಮಳೆ ಆರಂಭವಾಗಿ ಪಂದ್ಯ ರದ್ದು ಮಾಡಲಾಯಿತು. ಅಲ್ಲದೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು.

ಟ್ರೋಲ್​ ಆದ ಚಿತ್ರ

ಟ್ರೋಲ್​ ಆದ ಚಿತ್ರ

  • News18
  • Last Updated :
  • Share this:
ಈ ಬಾರಿಯ ವಿಶ್ವಕಪ್​ಲ್ಲಿ ಅನೇಕ ಪಂದ್ಯಗಳು ಮಳೆಗೆ ಆಹುತಿಯಾಗುತ್ತಿವೆ. ನಡೆದ 16 ಪಂದ್ಯಗಳ ಪೈಕಿ 3 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಇದಕ್ಕೆ ಟ್ವಿಟ್ಟರ್​ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಜೊತೆಗೆ ಅನೇಕರು ಟ್ವಿಟ್ಟರ್​ನಲ್ಲಿ ಭಾರೀ ಟ್ರೋಲ್​ ಮಾಡುತ್ತಿದ್ದಾರೆ.

ಇಂಗ್ಲೆಂಡ್​​ನಲ್ಲಿ ಈಗಷ್ಟೆ ಮಳೆಗಾಲ ಆರಂಭವಾಗಿದ್ದು, ಹೀಗಾಗಿ ವಿಶ್ವಕಪ್ ಅಂತ್ಯವಾಗುವ ವರೆಗೂ ಮಳೆರಾಯನ ಕಾಟ ಮುಂದುವರಿಯಲಿದೆ.

ಈ ಹಿಂದೆ ಪಾಕಿಸ್ತಾನ-ಶ್ರೀಲಂಕಾ ಮತ್ತು ಬಾಂಗ್ಲಾದೇಶ-ಶ್ರೀಲಂಕಾ ನಡುವಣ ಪಂದ್ಯ ಟಾಸ್ ಪ್ರಕ್ರಿಯೆಯೂ ಕಾಣದೆ ಮಳೆಗೆ ಆಹುತಿಯಾಗಿತ್ತು. ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಪಂದ್ಯ ಕೂಡ ಆರಂಭವಾಗಿ ಕೆಲ ಹೊತ್ತಿನಲ್ಲಿ ಮಳೆ ಆರಂಭವಾಗಿ ಪಂದ್ಯ ರದ್ದು ಮಾಡಲಾಯಿತು. ಅಲ್ಲದೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಡಕ್ವರ್ತ್​ ನಿಮಯದ ಪ್ರಕಾರ ಪಂದ್ಯವನ್ನು ಅಂತ್ಯಗೊಳಿಸಲಾಯಿತು. ಇದಾದ ಬೆನ್ನಲ್ಲೇ ಅನೇಕರು ಟ್ವೀಟ್ಟರ್​ನಲ್ಲಿ ಟ್ರೋಲ್​ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:  ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ನಡೆಯೋದೆ ಡೌಟ್!; ಯಾಕೆ ಗೊತ್ತಾ?ಇನ್ನು ಜೂನ್ 16 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೂ ಮಳೆರಾಯನ ಆಗಮನವಾಗಲಿದೆಯಂತೆ. ಈ ಪಂದ್ಯ ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದ್ದು, ವರುಣ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಶ್ವಕಪ್ ಮಹಾಸಮರಕ್ಕೆ ಮಳೆಯ ಕಾಟ ಇರಬಾರದೆಂದು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಪ್ರಾರಂಭಿಸಿ ಏಪ್ರಿಲ್​ಗೆ ಅಂತ್ಯವಾಗುವ ಮುನ್ನ ಕೊನೆಗೊಳಿಸಲಾಗುತ್ತದೆ. 2003ರ ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್​​ನಲ್ಲಿ ಅಂತ್ಯಕಂಡಿತ್ತು. ಇನ್ನು 2007ರ ವಿಶ್ವಕಪ್ ಮಾರ್ಚ್​​ನಿಂದ ಏಪ್ರಿಲ್​ವರೆಗೆ ನಡೆದಿತ್ತು. ಅಂತೆಯೆ ಫೆಬ್ರವರಿಯಲ್ಲಿ ಆರಂಭವಾದ 2011ರ ವಿಶ್ವಕಪ್ ಮಾರ್ಚ್​ 2ಕ್ಕೆ ಪೂರ್ಣಗೊಂಡಿತ್ತು. ಕಳೆದ 2015ರ ವಿಶ್ವಕಪ್ ಕೂಡ ಫೆಬ್ರವರಿಯಿಂದ ಮಾರ್ಚ್​​ವರೆಗೆ ನಡೆದಿತ್ತು.ಈ ಬಾರಿಯ ವಿಶ್ವಕಪ್ ಮಾತ್ರ ಆರಂಭವಾಗಿದ್ದೇ ಮೇ ಅಂತ್ಯದಲ್ಲಿ. ಇದಕ್ಕೆ ಪ್ರಮುಖ ಕಾರಣ ಐಪಿಎಲ್. ಐಪಿಎಲ್ ಮುಗಿದ ನಂತರವೆ ವಿಶ್ವಕಪ್ ಆರಂಭಿಸಬೇಕಾಗಿ ಬಂದಿದ್ದರಿಂದ ಐಸಿಸಿ ಹಾಗೂ ಇಂಗ್ಲೆಂಡ್​ಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಹೀಗಾಗಿ ಬೇರೆ ದಾರಿಗಳಿಲ್ಲದೆ ಮಳೆಗಾಲದಲ್ಲೇ ಈ ಬಾರಿಯ ವಿಶ್ವಕಪ್ ಮುಂದುವರಿಯುತ್ತಿದೆ.First published: