ICC World Cup: ಸಚಿನ್, ಧೋನಿ, ಕೊಹ್ಲಿಯಿಂದ ನಿರ್ಮಿಸಲಾಗದಂತಹ ವಿಶ್ವದಾಖಲೆ ಬರೆದ ಬಾಂಗ್ಲಾ ಕ್ರಿಕೆಟಿಗ..!

ICC World cup: ಇಷ್ಟೇ ಅಲ್ಲದೆ ಬಾಂಗ್ಲಾ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಸಾವಿರ ರನ್​ ಪೂರೈಸಿದ ನಾಲ್ಕನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೂ ಶಕೀಬ್ ಪಾತ್ರರಾಗಿದ್ದಾರೆ.

zahir | news18
Updated:July 4, 2019, 2:42 PM IST
ICC World Cup: ಸಚಿನ್, ಧೋನಿ, ಕೊಹ್ಲಿಯಿಂದ ನಿರ್ಮಿಸಲಾಗದಂತಹ ವಿಶ್ವದಾಖಲೆ ಬರೆದ ಬಾಂಗ್ಲಾ ಕ್ರಿಕೆಟಿಗ..!
@Gulf News
  • News18
  • Last Updated: July 4, 2019, 2:42 PM IST
  • Share this:
ವಿಶ್ವಕಪ್​ 2019 ಹಲವು ದಾಖಲೆಗಳಿಗೆ ಸಾಕ್ಷಿಯಾಗಿವೆ. ರೋಹಿತ್ ಶರ್ಮಾ ಶತಕಗಳ ದಾಖಲೆ ಬರೆದರೆ, ವಿರಾಟ್​ ಕೊಹ್ಲಿ ರನ್​ಗಳ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್​ ಉರುಳಿಸಿ ಸಾಧನೆಗೈದರೆ, ಇಂಗ್ಲೆಂಡ್​ ಆಟಗಾರ ಬೈರ್​ಸ್ಟೋ ಶತಕಗಳೊಂದಿಗೆ ಸಂಚಲನ ಸೃಷ್ಟಿಸಿದ್ದಾರೆ. ಇಂತಹ ಹಲವು ರೋಚಕತೆಗಳಿಗೆ ಸಾಕ್ಷಿಯಾಗಿರುವ ವಿಶ್ವಕಪ್​ನಲ್ಲಿ ಇದುವರೆಗೂ ಯಾರೂ ಮಾಡದಂತಹ ಹೊಸ ವಿಶ್ವದಾಖಲೆಯನ್ನು ಬಾಂಗ್ಲಾದೇಶ ತಂಡದ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಬರೆದಿದ್ದಾರೆ.

ಮಂಗಳವಾರ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ತಮ್ಮ ಆಲ್​ರೌಂಡರ್ ಆಟದ ಕಾಣಿಕೆಯಿಟ್ಟ ಶಕೀಬ್ ವಿಶ್ವಕಪ್​ ಇತಿಹಾಸದಲ್ಲೇ 500 ರನ್​ ಹಾಗೂ 10 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007 ರ ವರ್ಲ್ಡ್​ಕಪ್ ವೇಳೆ ನ್ಯೂಜಿಲೆಂಡ್ ಆಲ್​ರೌಂಡರ್ ಸ್ಕಾಟ್ ಸ್ಟೈರಿಸ್ 499 ರನ್ ಹಾಗೂ 9 ವಿಕೆಟ್ ಕಬಳಿಸಿರುವುದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಭಾರತದ ವಿರುದ್ದದ ಪಂದ್ಯದಲ್ಲಿ 66 ರನ್ ಸಿಡಿಸುವ ಮೂಲಕ ಈ ದಾಖಲೆಯನ್ನು ಮೆಟ್ಟಿನಿಂತ ಬಾಂಗ್ಲಾ ಹುಲಿ ಸದ್ಯ 542 ರನ್​ಗಳಿಸಿ ಈ ಬಾರಿಯ ವಿಶ್ವಕಪ್​ನ​ ರನ್​​ ರೇಸ್​ನಲ್ಲಿದ್ದಾರೆ.

ಶಕೀಬ್​ ಅಲ್ ಹಸನ್ ಈ ಬಾರಿಯ ವಿಶ್ವಕಪ್​ನಲ್ಲಿ ಏಳು ಇನಿಂಗ್ಸ್​ನಲ್ಲಿ ಎರಡು ಭರ್ಜರಿ ಶತಕ ಮತ್ತು ನಾಲ್ಕು ಅರ್ಧಶತಕ ಹಾಗೂ 10 ವಿಕೆಟ್​ಗಳನ್ನು ಪಡೆದಿದ್ದರು. ಇದರಲ್ಲಿ ಅಫ್ಘಾನಿಸ್ತಾನದ ವಿರುದ್ದ 29ಕ್ಕೆ 5 ವಿಕೆಟ್ ಉರುಳಿಸಿ ಮಿಂಚಿದ್ದರು. ಇಷ್ಟೇ ಅಲ್ಲದೆ ಬಾಂಗ್ಲಾ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಸಾವಿರ ರನ್​ ಪೂರೈಸಿದ ನಾಲ್ಕನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೂ ಶಕೀಬ್ ಪಾತ್ರರಾಗಿದ್ದಾರೆ. ಇನ್ನು 202 ಏಕದಿನ ಪಂದ್ಯಗಳಲ್ಲಿ 6000 ಸಾವಿರ ರನ್ ಹಾಗೂ 250ಕ್ಕೂ ಹೆಚ್ಚಿನ ವಿಕೆಟ್​ ಪಡೆದ ಆಟಗಾರರ ಪಟ್ಟಿಯಲ್ಲಿ ಶಕೀಬ್ ಅಗ್ರಸ್ಥಾನದಲ್ಲಿದ್ದಾರೆ.

ಶಕೀಬ್ ಅಲ್ ಹಸನ್ ಸದ್ಯ ವಿಶ್ವಕಪ್​ನಲ್ಲಿ ನಿರ್ಮಿಸಿರುವಂತಹ ಆಲ್​ರೌಂಡರ್​ ದಾಖಲೆಯನ್ನು ಇನ್ನು ಐದು ವರ್ಷ ಯಾರಿಂದಲೂ ಅಳಿಸಲಾಗುವುದಿಲ್ಲ. ಸದ್ಯ ಶಕೀಬ್ ಮುಂದಿರುವುದು ಸಚಿನ್ ತೆಂಡೂಲ್ಕರ್ ದಾಖಲೆ ಎಂಬುದು ವಿಶೇಷ.

ವಿಶ್ವಕಪ್​ ಟೂರ್ನಿಯಲ್ಲಿ ಮೂರು ಬಾರಿ ಮಾಸ್ಟರ್ ಬ್ಲಾಸ್ಟರ್ 450ಕ್ಕಿಂತ ಹೆಚ್ಚು ರನ್ ಸಿಡಿಸಿ ಮಿಂಚಿದ್ದಾರೆ. ಅದರಲ್ಲೂ 2003ರ ವಿಶ್ವಕಪ್​ ವೇಳೆ ತೆಂಡೂಲ್ಕರ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 673 ರನ್​ಗಳು. ಇನ್ನು 1996 ರ ವರ್ಲ್ಡ್​ ಕಪ್ ವೇಳೆ 523 ಹಾಗೂ 2011 ರ ವಿಶ್ವಕಪ್​ನಲ್ಲಿ ಸಚಿನ್ 482 ರನ್​ಗಳಿಸಿದ್ದರು. ಇದು ಕೂಡ ವಿಶ್ವಕಪ್ ದಾಖಲೆಯಾಗಿ ಉಳಿದಿದೆ.

ಇನ್ನು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಕೀಬ್ ಬ್ಯಾಟ್​ನಿಂದ 131 ರನ್ ಸಿಡಿದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ 673 ರನ್​ಗಳ ವಿಶ್ವದಾಖಲೆ ಕೂಡ ಅಳಿಸಿ ಹೋಗಲಿದೆ.

First published: July 4, 2019, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading