ಸೆಮಿಫೈನಲ್ ಸೋಲು: ಧೋನಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೊನೆಗೂ ಮೌನ ಮುರಿದ ಕೋಚ್

ICC World Cup: ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಪ್ರಮುಖ ವಿಕೆಟ್​ 3 ವಿಕೆಟ್ ಕೇವಲ 5 ರನ್​ಗಳಿಗೆ ಬಿದ್ದಾಗ, ಅನುಭವಿ ಮಹೇಂದ್ರ ಸಿಂಗ್ ಧೋನಿಯನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಬೇಕಿತ್ತು. ಇದರಿಂದ ಯುವ ಆಟಗಾರರು ಆತ್ಮಿ ವಿಶ್ವಾಸದಿಂದ ಇಂಗ್ಲೆಂಡ್ ಪಿಚ್​ನಲ್ಲಿ ಬ್ಯಾಟಿಂಗ್​ ಮಾಡಲು ಸಹಕಾರಿಯಾಗುತ್ತಿತ್ತು.

zahir | news18
Updated:July 13, 2019, 6:02 PM IST
ಸೆಮಿಫೈನಲ್ ಸೋಲು: ಧೋನಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೊನೆಗೂ ಮೌನ ಮುರಿದ ಕೋಚ್
Dhoni-Ravi shastri
  • News18
  • Last Updated: July 13, 2019, 6:02 PM IST
  • Share this:
ವಿಶ್ವಕಪ್ ಸೆಮಿಫೈನಲ್ ಸೋಲಿನ ತೀವ್ರ ಚರ್ಚೆಗೆ ಕಾರಣವಾಗಿರುವ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೊನೆಗೂ ಕೋಚ್ ರವಿ ಶಾಸ್ತ್ರಿ ಮೌನ ಮುರಿದಿದ್ದಾರೆ. ಕೋಚ್ ನಿರ್ಧಾರದಂತೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಲಾಗಿತ್ತು. ಇದರಿಂದ ಭಾರತ ಟೂರ್ನಿಯಿಂದ ಹೊರ ಬೀಳಬೇಕಾಯಿತು ಎನ್ನಲಾಗಿತ್ತು.

ಅಷ್ಟೇ ಅಲ್ಲದೆ ಸೆಮಿ ಸೋಲಿಗೆ ಅನುಭವಿ ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಆಡಿಸಿದ್ದು ಪ್ರಮುಖ ಕಾರಣ ಎಂದು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಲಕ್ಷ್ಮಣ್ ಸೇರಿದಂತೆ ಅನೇಕರು ವಿಶ್ಲೇಷಿಸಿದ್ದರು. ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಮಹೇಂದ್ರ ಸಿಂಗ್ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸುವುದು ತಂಡದ ನಿರ್ಣಯವಾಗಿತ್ತು ಎಂದಿದ್ದಾರೆ.

ಧೋನಿಯನ್ನು ಮೊದಲೇ ಬ್ಯಾಟಿಂಗ್​ಗೆ ಕಳುಹಿಸಿದ್ರೆ ಕೊನೆಯ ಹಂತದಲ್ಲಿ ರನ್​ ಚೇಸ್​ ಮಾಡುವ ಅವಕಾಶವೇ ಇಲ್ಲದಂತಾಗುತ್ತಿತ್ತು. ಹೀಗಾಗಿ ಇದು ಎಲ್ಲರಿಗೂ ತಿಳಿದಿರುವಂತಹ ಸರಳ ನಿರ್ಣಯವಾಗಿತ್ತು ಎಂದು ಶಾಸ್ತ್ರಿ ತಿಳಿಸಿದ್ದಾರೆ. ಏಕೆಂದರೆ ಧೋನಿ ಕ್ರಿಕೆಟ್​ ಜಗತ್ತಿನ ಶ್ರೇಷ್ಠ ಫಿನಿಶರ್. ಅವರ ಅನುಭವನ್ನು ಅದೇ ರೀತಿ ಬಳಕೆ ಮಾಡುವುದು ಇಡೀ ತಂಡದ ನಿರ್ಧಾರವಾಗಿತ್ತು ಎಂದಿದ್ದಾರೆ.

ಕಳೆದೆರೆಡು ವರ್ಷಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ ಶಾಸ್ತ್ರಿ, ವಿಶ್ವಕಪ್​ನ ಕೇವಲ 30 ನಿಮಿಷಗಳ ಕಳಪೆ ಪ್ರದರ್ಶನದಿಂದ ಒಟ್ಟು ಸಾಧನೆಯನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಸೋಲು-ಗೆಲುವು ಆಟದ ಭಾಗ ಎಂದು ಹೇಳಿದ್ದಾರೆ.

ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಪ್ರಮುಖ ವಿಕೆಟ್​ 3 ವಿಕೆಟ್ ಕೇವಲ 5 ರನ್​ಗಳಿಗೆ ಬಿದ್ದಾಗ, ಅನುಭವಿ ಮಹೇಂದ್ರ ಸಿಂಗ್ ಧೋನಿಯನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಬೇಕಿತ್ತು. ಇದರಿಂದ ಯುವ ಆಟಗಾರರಿಗೆ ಇಂಗ್ಲೆಂಡ್ ಪಿಚ್​ನಲ್ಲಿ ಬ್ಯಾಟಿಂಗ್​ ಮಾಡಲು ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ಕೊನೆಯ ಹಂತದಲ್ಲಿ ಧೋನಿಯ ಅನುಭವ ಹಾಗೂ ಸಲಹೆಯಿಂದ ರವೀಂದ್ರ ಜಡೇಜ ಅದ್ಭುತ ಇನಿಂಗ್ಸ್ ಆಡಿದ್ದರು. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೋಚ್ ತಪ್ಪು ಮಾಡಿದ್ದರಿಂದ ಟೀಂ ಇಂಡಿಯಾ ಸೋಲಬೇಕಾಯಿತು ಎಂದು ಈ ಹಿಂದೆ ವಿಮರ್ಶಿಸಲಾಗಿತ್ತು.
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading