ICC World Cup 2019: ಸಿಂಪ್ಲಿ ಸೂಪರ್​ ಆಗಿ ಮೂಡಿ ಬಂದಿದೆ ವಿಶ್ವಕಪ್ ಕ್ರಿಕೆಟ್ ಗೀತೆ

ICC Cricket World Cup 2019: ಮೇ 30ರಿಂದ ಇಂಗ್ಲೆಂಡ್‌ ಮತ್ತು ವೇಲ್ಸ್​ ವಿಶ್ವಕಪ್‌ ಕ್ರಿಕೆಟ್ ಅರಂಭಗೊಳ್ಳಲಿದ್ದು, 11 ಕ್ರೀಡಾಂಗಣಗಳಲ್ಲಿ 10 ತಂಡಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.

zahir | news18
Updated:May 18, 2019, 8:06 PM IST
ICC World Cup 2019: ಸಿಂಪ್ಲಿ ಸೂಪರ್​ ಆಗಿ ಮೂಡಿ ಬಂದಿದೆ ವಿಶ್ವಕಪ್ ಕ್ರಿಕೆಟ್ ಗೀತೆ
ವರ್ಲ್ಡ್​ಕಪ್
  • News18
  • Last Updated: May 18, 2019, 8:06 PM IST
  • Share this:
ವಿಶ್ವದಾದ್ಯಂತ ವಿಶ್ವಕಪ್ ಕ್ರಿಕೆಟ್ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ವರ್ಲ್ಡ್​ಕಪ್-2019 ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಿದೆ. ಲೊರಿನ್ ಹಾಗೂ ರುಡಿಮೆಂಟಲ್ ಸಹಯೋಗದಲ್ಲಿ ಮೂಡಿಬಂದಿರುವ 'ಸ್ಟ್ಯಾಂಡ್'​ ಬೈ ಗೀತೆಯನ್ನು ಬ್ಯಾಂಡ್​ ಸಂಗಿತ ಸಂಯೋಜನೆಯಲ್ಲಿ ರಚಿಸಲಾಗಿದೆ.

ಕೇಳಲು ಇಂಪಾಗಿರುವ ಈ ಗೀತೆಯನ್ನು ನಿರ್ದೇಶಕ ಡ್ಯಾನ್​ ಹೆನ್​ಶಾವ್ ಕ್ರೀಡಾ ಥೀಮ್ ಬಳಸಿ ವಿಶೇಷವಾಗಿ ಚಿತ್ರೀಕರಿಸಿದ್ದಾರೆ. ಈ ಹಾಡನ್ನು ಕ್ರಿಕೆಟ್ ವರ್ಲ್ಡ್​ಕಪ್ ತನ್ನ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡಿದ್ದು, ಗೀತೆಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಮೇ 30ರಿಂದ ಇಂಗ್ಲೆಂಡ್‌ ಮತ್ತು ವೇಲ್ಸ್​ ವಿಶ್ವಕಪ್‌ ಕ್ರಿಕೆಟ್ ಅರಂಭಗೊಳ್ಳಲಿದ್ದು, 11 ಕ್ರೀಡಾಂಗಣಗಳಲ್ಲಿ 10 ತಂಡಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ. ಹಾಗೆಯೇ ಎಲ್ಲಾ ಕ್ರೀಡಾಂಗಣದಲ್ಲೂ ಪಂದ್ಯಾರಂಭದ ಮುನ್ನ ಈ ಥೀಮ್ ಸಾಂಗ್​ ಅನ್ನು ಪ್ರಸಾರ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಪಂದ್ಯದೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ