News18 India World Cup 2019

ICC World Cup 2019: 27 ವರ್ಷಗಳ ಬಳಿಕ ತಮ್ಮ ಹಿಂದಿನ ಜೆರ್ಸಿಗೆ ಮರಳಿದ ಇಂಗ್ಲೆಂಡ್

ಸದ್ಯ ಏಕದಿನ ಕ್ರಿಕೆಟ್ ರ್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಆಂಗ್ಲರ ಬಳಗ ಈ ವಿಶ್ವಕಪ್​ನ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ.

zahir | news18
Updated:May 23, 2019, 11:22 AM IST
ICC World Cup 2019: 27 ವರ್ಷಗಳ ಬಳಿಕ ತಮ್ಮ ಹಿಂದಿನ ಜೆರ್ಸಿಗೆ ಮರಳಿದ ಇಂಗ್ಲೆಂಡ್
@Cricket Australia
zahir | news18
Updated: May 23, 2019, 11:22 AM IST
2019 ರ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ತವರಿನಲ್ಲಿ ನಡೆಯಲಿರುವ ಪ್ರತಿಸ್ಠಿತ ವಿಶ್ವಕಪ್​ಗಾಗಿ ಇಂಗ್ಲೆಂಡ್ ಸಕಲ ಸಿದ್ಧತೆಯಲ್ಲಿದ್ದು, ಇದೀಗ ತಂಡ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಿ ಗಮನ ಸೆಳೆದಿದೆ. 1992 ರ ವರ್ಲ್ಡ್​​ಕಪ್​ ನಲ್ಲಿ ಆಂಗ್ಲರು ತೊಟ್ಟಿದ್ದ ಉಡುಗೆಯಿಂದ ಸ್ಪೂರ್ತಿ ಪಡೆದು ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಹಿಂದೆ ಗಾಢ ನೀಲಿ ಬಣ್ಣದೊಂದಿಗೆ ಕಣಕ್ಕಿಳಿಯುತ್ತಿದ್ದ ಇಂಗ್ಲೆಂಡ್ ತಂಡ ಈ ಬಾರಿ ತೆಲು ನೀಲಿ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದೆ.

ಹೊಸ ಜೆರ್ಸಿಯಲ್ಲಿ ನಾಯಕ ಇಯಾನ್ ಮೋರ್ಗನ್, ವಿಕೆಟ್​ ಕೀಪರ್ ಜಾನಿ ಬೇರ್​ಸ್ಟೊ ಮತ್ತು ಆದಿಲ್ ರಶೀದ್ ಕಾಣಿಸಿಕೊಂಡಿದ್ದು, ನೂತನ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ.

ಮೋರ್ಗನ್- ಜಾನಿ ಬೇರ್​ಸ್ಟೊ


1992 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಪಾಕ್ ವಿರುದ್ಧ ಸೋಲು ಕಾಣುವ ಮೂಲಕ ಚೊಚ್ಚಲ ವಿಶ್ವಕಪ್ ಕಿರೀಟದಿಂದ ವಂಚಿತರಾದರು. ಇದೀಗ ಅಂದು ತಂಡ ತೊಟ್ಟಿದ್ದ ಜೆರ್ಸಿಯನ್ನು ಹೋಲುವ ಉಡುಗೆಯೊಂದಿಗೆ ಇಂಗ್ಲೆಂಡ್ ಮರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಯಾನ್ ಮೋರ್ಗನ್- ಆದಿಲ್ ರಶೀದ್- ಜಾನಿ ಬೇರ್​ಸ್ಟೊ


ಸದ್ಯ ಏಕದಿನ ಕ್ರಿಕೆಟ್ ರ್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಆಂಗ್ಲರ ಬಳಗ ಈ ವಿಶ್ವಕಪ್​ನ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ. 1992ರ ಬಳಿಕ ಹಲವು ಜೆರ್ಸಿಗಳನ್ನು ಇಂಗ್ಲೆಂಡ್ ಬದಲಿಸಿದೆ. ಆದರೆ ಆ ಬಳಿಕ ನಡೆದ ಯಾವುದೇ ವಿಶ್ವಕಪ್​ನಲ್ಲೂ ಆಂಗ್ಲರು ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಖದರಿಗೆ ಇಯಾನ್ ಮೋರ್ಗನ್ ಪಡೆ ಮರಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Loading...



1979, 1987 ಮತ್ತು 1992 ರಲ್ಲಿ ಮೂರು ಬಾರಿ ವಿಶ್ವಕಪ್ ಫೈನಲ್ ಪಂದ್ಯವಾಡಿರುವ ಕ್ರಿಕೆಟ್​ ಜನಕ ಇಂಗ್ಲೆಂಡ್ ತಂಡ ಇದುವರೆಗೂ ವರ್ಲ್ಡ್​ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿಲ್ಲ. ಪ್ರಸ್ತುತ ಇಂಗ್ಲೆಂಡ್ ತಂಡವು ಅತ್ಯುತ್ತಮ ಸಮತೋಲನ ಹಾಗೂ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಹಾಗೆಯೇ ತವರಿನಲ್ಲೇ ವಿಶ್ವಕಪ್ ನಡೆಯುತ್ತಿರುವುದು ಆಂಗ್ಲರಿಗೆ ಪ್ಲಸ್​ ಪಾಯಿಂಟ್ ಆಗಲಿದೆ. ಹೀಗಾಗಿ ಈ ಬಾರಿ ವಿಶ್ವಕಪ್ ಕಿರೀಟದ ಕೊರತೆಯನ್ನು ಇಂಗ್ಲೆಂಡ್ ಆಟಗಾರರು ನೀಗಿಸಲಿದ್ದಾರೆಂಬ ಆಶಾಭಾವನೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

First published:May 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...