ICC World Cup 2019 | ಐಪಿಎಲ್ ಮುಗಿಸಿ ಬಂದಿರುವೆವು, ಸಮಸ್ಯೆಗಳನ್ನು ಸರಿ ಪಡಿಸುತ್ತೇವೆ; ಜಡ್ಡು

India vs New Zealand: ನಾವು ಭಾರತದಿಂದ ಇಂಗ್ಲೆಂಡ್​ಗೆ ಬಂದಾಗ ಅದರಲ್ಲು ಐಪಿಎಲ್ ಮುಗಿಸಿ ಬಂದಾಗ ಇಲ್ಲಿನ ಕಂಡೀಷನ್​ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ- ಜಡೇಜಾ

Vinay Bhat | news18
Updated:May 26, 2019, 3:14 PM IST
ICC World Cup 2019 | ಐಪಿಎಲ್ ಮುಗಿಸಿ ಬಂದಿರುವೆವು, ಸಮಸ್ಯೆಗಳನ್ನು ಸರಿ ಪಡಿಸುತ್ತೇವೆ; ಜಡ್ಡು
ಜಡೇಜಾ
Vinay Bhat | news18
Updated: May 26, 2019, 3:14 PM IST
ಬೆಂಗಳೂರು (ಮೇ. 26): ವಿಶ್ವಕಪ್​​ ಆರಂಭಕ್ಕೂ ಮುನ್ನ ಸನ್ನದ್ದವಾಗುತ್ತಿರುವ ಟೀಂ ಇಂಡಿಯಾ, ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ. ಲಂಡನ್​ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ ದಾಳಿಗೆ ತತ್ತರಿಸಿ ಹೋಗಿದ್ದಲ್ಲದೆ, ಬೌಲಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿದೆ.

ಆದರೆ ಟೀಂ ಇಂಡಿಯಾದ ವಿಕೆಟ್ ಉರುಳುತ್ತಿದ್ದರು ಏಕಾಂಗಿಯಾಗಿ ಬ್ಯಾಟ್​ ಬೀಸಿದ್ದು ರವೀಂದ್ರ ಜಡೇಜಾ. ಬೊಂಬಾಟ್ ಆಟ ಪ್ರದರ್ಶಿಸಿದ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಲ್ಲದೆ ಅರ್ಧಶತಕ ಸಿಡಿಸಿ ಪ್ಲೇಯಿಂಗ್​​​ ಇಲೆವೆನ್​​​ನಲ್ಲಿ ಸ್ಥಾನಗಿಟ್ಟಿಸುವ ಮುನ್ಸೂಚನೆ ನೀಡಿದ್ದಾರೆ.

ಪಂದ್ಯ ಮುಗಿದ ಬಳಿಕ ತನ್ನ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಜಡ್ಡು, 'ನಾನು ಕ್ರೀಸ್​ಗೆ ಬಂದಾಗ ಸಾಕಷ್ಟು ಓವರ್​ಗಳು ಬಾಕಿ ಇದ್ದವು. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ತೀರ್ಮಾನಿಸಿದೆ. ಅದರಂತೆ ಐಪಿಎಲ್​​ನಲ್ಲಿ ಹಾಗೂ ಅಭ್ಯಾಸ ಮಾಡುವ ವೇಳೆ ಕಲಿತ ಅನೇಕ ಸಂಗತಿಗಳು ನನಗಿಲ್ಲಿ ಸಹಕಾರಿ ಆಯಿತು' ಎಂದಿದ್ದಾರೆ.

ಇದನ್ನೂ ಓದಿ: 1999 World Cup​​: ಇತಿಹಾಸದಲ್ಲೇ ಮೊದಲ ಟೈ ಪಂದ್ಯ, ಭಾರತ ಸೋತಿದ್ದು ವಿಪರ್ಯಾಸ, ಟ್ರೋಫಿ ಕಾಂಗರೂಗಳ ಪಾಲಾಗಿದ್ದು ಹೇಗೆ?

ಇನ್ನು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಜಡೇಜಾ, 'ಇಂಗ್ಲೆಂಡ್​ನ ವಾತಾವರಣದಲ್ಲಿ ಬ್ಯಾಟ್ ಬೀಸುವುದು ತುಂಬಾನೆ ಕಷ್ಟಕರ. ಮೊದಲ ಅಭ್ಯಾಸ ಪಂದ್ಯದಲ್ಲಿ ನಾವು ಸೋತಿರಬಹುದು. ಆದರೆ, ಬ್ಯಾಟಿಂಗ್ ವೈಫಲ್ಯದ ಬಗ್ಗೆ ಭಯ ಪಡಬೇಕಿಲ್ಲ. ವಿಶ್ವಕಪ್ ಆರಂಭಕ್ಕು ಮೊದಲು ನಮ್ಮೊಳಗಿನ ಕೆಲ ಸಮಸ್ಯೆಗಳು ಸರಿ ಪಡಿಸಿಕೊಳ್ಳುತ್ತೇವೆ'.

'ನಾವು ಭಾರತದಿಂದ ಇಂಗ್ಲೆಂಡ್​ಗೆ ಬಂದಾಗ ಅದರಲ್ಲು ಐಪಿಎಲ್ ಮುಗಿಸಿ ಬಂದಾಗ ಇಲ್ಲಿನ ಕಂಡೀಷನ್​ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ನಮ್ಮ ಮೊದಲ ಪಂದ್ಯ, ಕೇವಲ ಒಂದು ಪಂದ್ಯದಿಂದ ಆಟಗಾರರನ್ನು ಜಡ್ಜ್ ಮಾಡಬಾರದು. ಹಾಗಾಗಿ ಆತಂಕಪಡುವ ಅಗತ್ಯವಿಲ್ಲ. ಇದು ವಿಶ್ವಕಪ್ ಆಗಿರುವುದರಿಂದ ಎಚ್ಚರಿಯ ಹೆಜ್ಜೆ ಇಡುತ್ತೇವೆ' ಎಂದಿದ್ದಾರೆ.

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...