ICC World Cup 2019: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ನ 11 ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಮರ ಏರ್ಪಡಲಿದ್ದು, 46 ದಿನಗಳ ಕಾಲ ಬಲಿಷ್ಠ ತಂಡಗಳ ನಡುವೆ ಕದನ ನಡೆಯಲಿದೆ.

zahir | news18
Updated:May 23, 2019, 11:31 AM IST
ICC World Cup 2019: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
@ICC
zahir | news18
Updated: May 23, 2019, 11:31 AM IST
ವಿಶ್ವಕಪ್ ಕ್ರಿಕೆಟ್​ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಬೆನ್ನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ ಈ ಬಾರಿಯ ವಿಶ್ವಕಪ್ ವಿಜೇತರರಿಗೆ ನೀಡುವ ಬಹುಮಾನ ಮೊತ್ತವನ್ನು ಪ್ರಕಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೇ.30 ರಂದು ವಿಶ್ವಕಪ್ ಆರಂಭವಾಗಲಿದ್ದು, ಈ ಪಂದ್ಯಾವಳಿಯಲ್ಲಿ ಸುಮಾರು 70 ಕೋಟಿ 20 ಲಕ್ಷ 40 ಸಾವಿರವನ್ನು ಬಹುಮಾನವಾಗಿ ನೀಡುವುದಾಗಿ ಐಸಿಸಿ ಘೋಷಿಸಿದೆ. ಈ ಹಿಂದಿನ ವಿಶ್ವಕಪ್​ ಹೋಲಿಸಿದರೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನ ಮೊತ್ತವನ್ನು ಏರಿಸಲಾಗಿದೆ.

ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ನ 11 ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಮರ ಏರ್ಪಡಲಿದ್ದು, 46 ದಿನಗಳ ಕಾಲ ಬಲಿಷ್ಠ ತಂಡಗಳ ನಡುವೆ ಕದನ ನಡೆಯಲಿದೆ. ಸೆಮಿಫೈನಲ್​ನಲ್ಲಿ ಪ್ರವೇಶಿಸುವ ತಂಡಗಳಿಗೆ ತಲಾ 5 ಕೋಟಿ, 61 ಲಕ್ಷ, 46 ಸಾವಿರ ಬಹುಮಾನ ನಿಗದಿಪಡಿಸಲಾಗಿದ್ದು, ಲೀಗ್ ಸ್ಟೇಜ್​ನ ಪ್ರತಿ ಪಂದ್ಯಗನ್ನು ಗೆಲ್ಲುವ ತಂಡಗಳಿಗೆ ಸುಮಾರು 28 ಲಕ್ಷ ರೂ. ದೊರೆಯಲಿದೆ. ಹಾಗೆಯೇ ಮುಂದಿನ ಹಂತ ಪ್ರವೇಶಿಸುವ ತಂಡಗಳಿಗೆ ಸುಮಾರು 70 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ.

ಇನ್ನು ಜುಲೈ 14 ರಂದು ನಡೆಯುವ ಫೈನಲ್​ನಲ್ಲಿ ರನ್ನರ್ ಅಪ್ ಆಗುವ ತಂಡವು ಸುಮಾರು 14 ಕೋಟಿ ರೂ. ಮೊತ್ತದ ಪ್ರಶಸ್ತಿ ಪಡೆಯಲಿದೆ. ಹಾಗೆಯೇ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯುವ ತಂಡಕ್ಕೆ ಸುಮಾರು 28 ಕೋಟಿ, 8 ಲಕ್ಷ ರೂ. ದೊರೆಯಲಿದೆ. ಈ ಮೊತ್ತವು ಇಂಡಿಯನ್ ಪ್ರೀಮಿಯರ್ ಲೀಗ್​ನ ಚಾಂಪಿಯನ್ ತಂಡಕ್ಕೆ ನೀಡಲಾದ ಪ್ರಶಸ್ತಿಗಿಂತ ಅಧಿಕ.

ಮೇ 30 ರಿಂದ ವಿಶ್ವಕಪ್ ಕ್ರಿಕೆಟ್​ ಆರಂಭವಾಗಲಿದ್ದು ಜುಲೈ 14 ರವರೆಗೆ ನಡೆಯಲಿದೆ. ಮೊದಲ ಹಂತದಲ್ಲಿ 45 ಪಂದ್ಯಗಳು ನಡೆಯಲಿದ್ದು, ಜೂನ್​ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಬೇಟೆಯನ್ನು ಆರಂಭಿಸಲಿದೆ.

ಇದನ್ನೂ ಓದಿ: ವಿದೇಶಿ ಲೀಗ್​ನತ್ತ ಭಾರತದ ಆಲ್​ರೌಂಡರ್: ಇತಿಹಾಸ ಬರೆಯಲಿದ್ದಾರಾ ಇರ್ಫಾನ್ ಪಠಾಣ್

ಐಸಿಸಿ ವಿಶ್ವಕಪ್ 2019 - ಪ್ರಶಸ್ತಿ ಮೊತ್ತವಿಜೇತರಿಗೆ - 4,000,000 ಡಾಲರ್ ( ಸುಮಾರು 28 ಕೋಟಿ ರೂ)

ರನ್ನರ್-ಅಪ್ - 2,000,000 ಡಾಲರ್ ( ಸುಮಾರು 14 ಕೋಟಿ ರೂ.)

ಸೆಮಿ ಫೈನಲಿಸ್ಟ್ (2 ತಂಡ) - 800,000 ಡಾಲರ್ ( ತಲಾ ಸುಮಾರು 5 ಕೋಟಿ)

ಪ್ರತಿ ಲೀಗ್ ಸ್ಟೇಜ್ ಪಂದ್ಯದ ವಿಜೇತ (45 ಪಂದ್ಯ) - 40,000 ಡಾಲರ್ ( ಸುಮಾರು 28 ಲಕ್ಷ ರೂ)

ಮುಂದಿನ ಹಂತ ಪ್ರವೇಶಿಸಿ ಗೆಲ್ಲುವ ತಂಡಗಳಿಗೆ - 100,000 ಡಾಲರ್ ( ಸುಮಾರು 70 ಲಕ್ಷ ರೂ)

ಒಟ್ಟು - 10,000,000 ಡಾಲರ್ ( ಸುಮಾರು 70 ಕೋಟಿ ರೂ)

ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿಯ 'ರಹಸ್ಯ' ವಿಡಿಯೋ ವೈರಲ್; ರಿಷಬ್​ ಪಂತ್ ಹೀಗಾ ಮಾಡೋದು?

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ