News18 India World Cup 2019

ICC World Cup 2019: ಪಾಕ್ ವಿರುದ್ಧದ ಕ್ರಿಕೆಟ್ ಕದನದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ವಿಶ್ವಕಪ್​ನಲ್ಲಿ ಇದುವರೆಗೂ ಭಾರತ ತಂಡ ಪಾಕ್​ ವಿರುದ್ಧ  ಸೋಲು ಕಂಡಿಲ್ಲ. ಈ ಹಿಂದೆ ಆರು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ.

zahir | news18
Updated:May 23, 2019, 11:24 AM IST
ICC World Cup 2019: ಪಾಕ್ ವಿರುದ್ಧದ ಕ್ರಿಕೆಟ್ ಕದನದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
ಕೊಹ್ಲಿ
zahir | news18
Updated: May 23, 2019, 11:24 AM IST
ಐಸಿಸಿ ಕ್ರಿಕೆಟ್​ ವಿಶ್ವಕಪ್ ದಿನಗಣನೆ ಆರಂಭವಾಗಿದೆ. ಮೂರನೇ ಬಾರಿ ಟೀಂ ಇಂಡಿಯಾಗೆ ವಿಶ್ವಕಪ್ ಕಿರೀಟ ತಂದುಕೊಡಲು ಭಾರತ ತಂಡ ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಿದೆ. ಮೇ.30 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಜೂನ್ 16 ರಂದು ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿ ಆಗಲಿದ್ದು, ಈಗಾಗಲೇ ಈ ಪಂದ್ಯಕ್ಕಾಗಿ ವಿಶ್ವ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ, 2019ರ ವಿಶ್ವಕಪ್ ಅತ್ಯಂತ ಸವಾಲಿನಿಂದ ಕೂಡಿರಲಿದೆ. ಇನ್ನು ಪಾಕ್ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ ಕೊಹ್ಲಿ, ಈ ವಿಶ್ವಕಪ್​ನಲ್ಲಿ ಭಾರತ ತಂಡವು ಎಲ್ಲಾ ತಂಡವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ತಂಡಗಳ ವಿರುದ್ಧದ ತಂತ್ರಗಾರಿಕೆ ವಿಭಿನ್ನವಾಗಿರುವುದಿಲ್ಲ. ಪ್ರತಿಯೊಂದು ಪಂದ್ಯವನ್ನು ಸಮಾನ ಬಲದೊಂದಿಗೆ ಎದುರಿಸಲು ನಾವು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಹೀಗಾಗಿ ಪಾಕ್ ವಿರುದ್ಧ ವಿಶೇಷ ಯೋಜನೆಗಳೊಂದಿಗೆ ಕಣಕ್ಕಿಳಿಯುತ್ತೇವೆ ಎನ್ನಲಾಗುವುದಿಲ್ಲ ಎಂದು ತಿಳಿಸಿದರು.

ನಮಗೆ ಇಲ್ಲಿ ಎಲ್ಲರೂ ಎದುರಾಳಿಗಳು, ಹೀಗಾಗಿ ಒಂದು ತಂಡಕ್ಕಾಗಿ ನಾವು ಪ್ರತ್ಯೇಕ ಯೋಜನೆಗಳನ್ನು ರೂಪಿಸುತ್ತಿಲ್ಲ. ಪ್ರತಿ ತಂಡಕ್ಕೊಂದು ವಿಭಿನ್ನ ಯೋಜನೆಗಳನ್ನು ಮಾಡಿಕೊಂಡರೆ, ವಿಶ್ವಕಪ್​ ಟ್ರೋಫಿಯ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಇದರಿಂದ ತಂಡದಲ್ಲಿ ಸಮತೋಲನ ತಪ್ಪುವ ಸಾಧ್ಯತೆಯಿರುತ್ತದೆ ಎಂದು ಕೊಹ್ಲಿ ಹೇಳಿದರು.

ವಿಶ್ವಕಪ್​ನಲ್ಲಿ ಇದುವರೆಗೂ ಭಾರತ ತಂಡ ಪಾಕ್​ ವಿರುದ್ಧ  ಸೋಲು ಕಂಡಿಲ್ಲ. ಈ ಹಿಂದೆ ಆರು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಈ ಎಲ್ಲ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಹಾಗೆಯೇ ಈ ಬಾರಿ ಸಹ ನಮ್ಮ ತಂಡ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ICC Cricket World Cup 2019: ವಿರಾಟ್ vs ಅಮೀರ್: ವಿಶ್ವಕಪ್​ಗಾಗಿ ಬಲಿಷ್ಠ ಪಾಕ್ ತಂಡ ಪ್ರಕಟ

ಈ ವಿಶ್ವಕಪ್​ನಲ್ಲಿ ಪಾಕ್ ಸೇರಿದಂತೆ ಯಾವುದೇ ತಂಡವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ ಕೊಹ್ಲಿ, ನಮ್ಮ ಆಟಗಾರರು ಒತ್ತಡವನ್ನು ನಿಭಾಯಿಸಿದರೆ ಗೆಲುವು ಸುಲಭವಾಗಲಿದೆ ಎಂದು ತಿಳಿಸಿದರು. ಉನ್ನತ ಫುಟ್​ಬಾಲ್​ ಕ್ಲಬ್​ಗಳಲ್ಲಿ ಆಟಗಾರರು ಟ್ರೋಫಿಗಾಗಿ ಐದು ತಿಂಗಳುಗಳ ಕಾಲ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅದೇ ರೀತಿಯಲ್ಲೇ ಟೀಂ ಇಂಡಿಯಾ ಆಟಗಾರರು ಪ್ರತಿ ಪಂದ್ಯದಲ್ಲೂ ತನ್ನ ಸಾಮರ್ಥ್ಯವನ್ನು ಧಾರೆಯೆರೆಬೇಕಿದೆ ಎಂದು ನಾಯಕ ಕೊಹ್ಲಿ ಅಭಿಪ್ರಾಯಪಟ್ಟರು.
Loading...

First published:May 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...