Vinay BhatVinay Bhat
|
news18 Updated:May 23, 2019, 1:01 PM IST
ಟೀಂ ಇಂಡಿಯಾ
- News18
- Last Updated:
May 23, 2019, 1:01 PM IST
ಬೆಂಗಳೂರು (ಮೇ. 23): ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಮಹಾಸಮರಕ್ಕೆ ಭಾರತ ಕ್ರಿಕೆಟ್ ತಂಡ ಬುಧವಾರ ರಾತ್ರಿ ಆಂಗ್ಲರ ನಾಡಿಗೆ ಬಂದಿಳಿದಿದೆ. ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಫೋಟೋ ಒಂದನ್ನು ಹಂಚಿಕೊಂಡಿದ್ದು ಟಚ್ ಡೌನ್ ಲಂಡನ್ ಟೀಂ ಇಂಡಿಯಾ ಎಂದು ಬರೆದುಕೊಂಡಿದೆ.
ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ಗೆ ಬಂದಿಳಿದಿದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೇ. 30 ರಂದು ವಿಶ್ವಕಪ್ ಮಹಾಸಂಗ್ರಾಮಕ್ಕೆ ಚಾಲನೆ ದೊರಕಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದ. ಆಫ್ರಿಕಾ ವಿರುದ್ಧ ಆಡಲಿದೆ.
ಇದಕ್ಕೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯವನ್ನು ಆಡಲಿದೆ. ಮೇ. 25 ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಮೇ. 29 ರಂದು ಬಾಂಗ್ಲಾದೇಶ ವಿರುದ್ಧ ವಾರ್ಮ್ಅಪ್ ಪಂದ್ಯವನ್ನಾಡಲಿದೆ.
ವಿಶ್ವಕಪ್ ಮಹಾಸಮರದಲ್ಲಿ ಎಷ್ಟು ತಂಡಗಳು?, ಯಾವ ಆಟಗಾರರು?, ಸಂಪೂರ್ಣ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ
ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ,ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡ ಈ ಬಾರಿಯ ವಲ್ಡ್ ಕಪ್ನಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ ವಿಶ್ವಕಪ್ಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ.
ಪ್ರತಿ ತಂಡಗಳು ಲೀಗ್ ಹಂತದಲ್ಲಿ ತಲಾ ಒಂಬತ್ತು ಪಂದ್ಯಗಳನ್ನು ಆಡಲಿದೆ. ಬಳಿಕ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಗೆ ತೇರ್ಗಡೆಯನ್ನು ಹೊಂದಲಿದೆ.
First published:
May 23, 2019, 1:01 PM IST