ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ವಿಶ್ವಕಪ್​ನಿಂದ ಔಟ್; ಕನ್ನಡಿಗನಿಗೆ ಸಿಕ್ಕಿತು ಅವಕಾಶ!

ವಿಶ್ವಕಪ್ ಆರಂಭವಾದಾಗಿನಿಂದ ಭಾರತಕ್ಕೆ ಇಂಜುರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಶಿಖರ್ ಧವನ್ ಹೆಬ್ಬರಳಿನ ಗಾಯದಿಂದಾಗಿ ವಿಶ್ವಕಪ್​​ನಿಂದ ಹೊರ ಬಿದ್ದಿದ್ದರು.

Vinay Bhat | news18
Updated:July 1, 2019, 2:15 PM IST
ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ವಿಶ್ವಕಪ್​ನಿಂದ ಔಟ್; ಕನ್ನಡಿಗನಿಗೆ ಸಿಕ್ಕಿತು ಅವಕಾಶ!
ವಿಜಯ್ ಶಂಕರ್, ಟೀಂ ಇಂಡಿಯಾ ಆಟಗಾರ
  • News18
  • Last Updated: July 1, 2019, 2:15 PM IST
  • Share this:
ಬೆಂಗಳೂರು (ಜು. 01): ಟೀಂ ಇಂಡಿಯಾ ವಿಶ್ವಕಪ್​ನಲ್ಲಿ ನಿನ್ನೆ ಇಂಗ್ಲೆಂಡ್ ವಿರುದ್ಧ ಮೊದಲ ಸೋಲುಂಡ ಬೆನ್ನಲ್ಲೆ ಮತ್ತೊಂದು ಆಘಾತ ಉಂಟಾಗಿದೆ. ಆಲ್ರೌಂಡರ್ ವಿಜಯ್ ಶಂಕರ್ ಇಂಜುರಿಯಿಂದಾಗಿ ವಿಶ್ವಕಪ್​ನಿಂದ ಹೊರ ಬಿದ್ದಿದ್ದಾರೆ.

ವಿಜಯ್ ಶಂಕರ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್​​ರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಅಗರ್ವಾಲ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಕಾಲಿಟ್ಟಿದ್ದಾರೆ.

ಅಭ್ಯಾಸದಲ್ಲಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಮಾಡುವಾಗ ಚೆಂಡು ಶಂಕರ್​ರ ಕಾಲಿಗೆ ಬಡಿದಿದೆ. ಗಾಯದ ಪ್ರಮಾಣ ದೊಡ್ಡದಾಗಿರುವುದರಿಂದ ಶಂಕರ್ ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಮುಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಈ ಮಹತ್ವದ ಬದಲಾವಣೆ ಮಾಡದಿದ್ದರೆ ಕಾದಿದೆ ಸಂಕಷ್ಟ

ICC World Cup 2019 | Vijay Shankar Out of World Cup, Mayank Agarwal Set to Join Squad
ಮಯಾಂಕ್ ಅಗರ್ವಾಲ್


ಸದ್ಯ 4ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡುತ್ತಿದ್ದು, ಇವರು ಮುಂದಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದರೆ ಪಂತ್ ಜಾಗದಲ್ಲಿ ಕೆ ಎಲ್ ರಾಹುಲ್​ರನ್ನು ಆಡಲಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯಲಿದ್ದಾರೆ.

ವಿಶ್ವಕಪ್ ಆರಂಭವಾದಾಗಿನಿಂದ ಭಾರತಕ್ಕೆ ಇಂಜುರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಶಿಖರ್ ಧವನ್ ಹೆಬ್ಬರಳಿನ ಗಾಯದಿಂದಾಗಿ ವಿಶ್ವಕಪ್​​ನಿಂದ ಹೊರ ಬಿದ್ದಿದ್ದರು.ಅಲ್ಲದೆ ಭುವನೇಶ್ವರ್ ಕುಮಾರ್ ಕೂಡ ವಿಶ್ರಾಂತಿಯಲ್ಲಿದ್ದಾರೆ. ಸದ್ಯ ವಿಜಯ್ ಶಂಕರ್ ಕೂಡ ವಿಶ್ವಕಪ್​ನಿಂದ ಹೊರಬಿದ್ದಿರುವುದು ಭಾರತಕ್ಕೆ ಮತ್ತೊಂದು ಆಘಾತವನ್ನುಂಟು ಮಾಡಿದೆ.
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ