ICC World Cup 2019: ವಿಶ್ವಕಪ್ ಮಿಸ್ ಮಾಡಿಕೊಳ್ಳಲಿದ್ದಾರೆ ಈ ಪ್ರಮುಖ ಆಟಗಾರರು

ICC World Cup 2019: ವಿಶ್ವಕಪ್​ನಲ್ಲಿ ಆಟವಾಡುವ ಅವಕಾಶ ಎಲ್ಲರಿಗೂ ಸಿಗದು. ಈ ಬಾರಿಯೂ ಇಂಜುರಿ ಸಮಸ್ಯೆಯಿಂದಾಗಿ ಕೆಲ ಆಟಗಾರರು ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ.

Rajesh Duggumane | news18
Updated:May 18, 2019, 2:53 PM IST
ICC World Cup 2019: ವಿಶ್ವಕಪ್ ಮಿಸ್ ಮಾಡಿಕೊಳ್ಳಲಿದ್ದಾರೆ ಈ ಪ್ರಮುಖ ಆಟಗಾರರು
ಕೇದಾರ್​ ಜಾಧವ್​
  • News18
  • Last Updated: May 18, 2019, 2:53 PM IST
  • Share this:
ಕ್ರಿಕೆಟ್​ ವಿಶ್ವಕಪ್​ಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ತಂಡ ಪ್ರಕಟ ಮಾಡಿವೆ. ವಿಶ್ವಕಪ್​ನಲ್ಲಿ ಆಟವಾಡುವ ಅವಕಾಶ ಎಲ್ಲರಿಗೂ ಸಿಗದು. ಇಂಥ ಅವಕಾಶ ಸಿಕ್ಕರೂ ಅದನ್ನು ಬಳಕೆ ಮಾಡಿಕೊಳ್ಳದ ಅನೇಕರಿದ್ದಾರೆ. ಈ ಬಾರಿಯ ಇಂಜುರಿ ಸಮಸ್ಯೆಯಿಂದಾಗಿ ಕೆಲ ಆಟಗಾರರು ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ.

ಕೇದಾರ್​​​ ಜಾಧವ್​:

ಕೇದಾರ್​ ಜಾಧವ್​ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ವಿಶ್ವಕಪ್​ನಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಆದರೆ, ಐಪಿಎಲ್​ನಲ್ಲಿ ಅವರು ಗಾಯಗೊಂಡಿದ್ದಾರೆ. ಹಾಗಾಗಿ ಜಾಧವ್ ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಜಾಧವ್ ಆಡದೆ ಇದ್ದರೆ, ಅಂಬಟಿ ರಾಯಡು ಅಥವಾ ಅಕ್ಸರ್​ ಪಟೇಲ್​ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಟಾಮ್​ ಲ್ಯಾಥಮ್​:

ನ್ಯೂಜಿಲೆಂಡ್​ ವಿಕೆಟ್​ ಕೀಪರ್​ ಟಾಮ್​ ಲ್ಯಾಥಮ್​ ಈ ಬಾರಿ ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಜೊತೆಗಿನ ಅಭ್ಯಾಸ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಹಾಗಾಗಿ ಅವರು ಈ ಬಾರಿಯ ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ತನ್ನ ಸಾಮರ್ಥ್ಯ ತಿಳಿಸಿದ ಕನ್ನಡಿಗ ರಾಹುಲ್

ಡೇಲ್​ ಸ್ಟೈನ್​ ಹಾಗೂ ಕಾಗಿಸೊ ರಾಬಾಡಾ:ದಕ್ಷಿಣ ಆಫ್ರಿಕಾದ ಡೇಲ್​ ಸ್ಟೈನ್​ ಹಾಗೂ ಕಾಗಿಸೊ ರಾಬಾಡಾ ವಿಶ್ವದ ಅತ್ಯುತ್ತಮ ವೇಗಿಗಳು. ಆದರೆ, ಇವರು ವಿಶ್ವಕಪ್​ನಲ್ಲಿ ಆಡುವುದೇ ಅನುಮಾನ ಎನ್ನಲಾಗುತ್ತಿದೆ. ಇವರಿಗೆ ಇಂಜುರಿ ಕಾಡಿದ್ದರಿಂದ ಈ ಬಾರಿಯ ಐಪಿಎಲ್​ ಸೀಸನ್​ನಿಂದ ಅರ್ಧಕ್ಕೆ ಸ್ವದೇಶಕ್ಕೆ ಮರಳಿದ್ದರು. ವಿಶ್ವಕಪ್​ಗೂ ಮೊದಲು ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂದು ತಂಡ ಹೇಳಿದೆ.

ಮೊಹ್ಮದ್​ ಅಮೀರ್​:

ಪಾಕ್​ನ ಈ ಆಟಗಾರ ಕಳಪೆ ಪ್ರದರ್ಶನ ನೀಡುತ್ತಿರುವುದರ ಜೊತೆಗೆ ಗಾಯದ ಸಮಸ್ಯೆಯಿಂದಲೂ ಬಳಲುತ್ತಿದ್ದಾನೆ. ಹಾಗಾಗಿ ಪಾಕ್​ ತಂಡ ಪ್ರತಿನಿಧಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ICC World Cup 2019: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ