HOME » NEWS » Sports » CRICKET ICC WORLD CUP 2019 TEAM INDIA DITCHES NETS FOR WOODS IN BONDING SESSION

IND vs SA: ಹರಿಣಗಳ ಬೇಟೆಗೆ ಸಜ್ಜಾದ ವಿರಾಟ್​ ಸೈನ್ಯ; ಮೋಜು ಮಸ್ತಿ ಜೊತೆ ಕಠಿಣ ಅಭ್ಯಾಸ

ICC World Cup 2019, India vs South Africa: ಸೋಲಿನ ಆರಂಭ ಪಡೆದಿರುವ ಹರಿಣಗಳು ಭರ್ಜರಿಯಾಗಿ ಕಂಬ್ಯಾಕ್ ಮಾಡಬೇಕೆಂದು ಕಠಿಣ ತರಬೇತಿ ಪಡೆಯುತ್ತಿದ್ದು, ಇತ್ತ ಟೀಂ ಇಂಡಿಯಾ ಪಾಳಯದಲ್ಲೂ ಪ್ರಾಕ್ಟೀಸ್ ಜೋರಾಗಿದೆ.

Vinay Bhat | news18
Updated:June 1, 2019, 4:52 PM IST
IND vs SA: ಹರಿಣಗಳ ಬೇಟೆಗೆ ಸಜ್ಜಾದ ವಿರಾಟ್​ ಸೈನ್ಯ; ಮೋಜು ಮಸ್ತಿ ಜೊತೆ ಕಠಿಣ ಅಭ್ಯಾಸ
ಟೀಂ ಇಂಡಿಯಾ ಆಟಗಾರರು
  • News18
  • Last Updated: June 1, 2019, 4:52 PM IST
  • Share this:
ವಿಶ್ವಕಪ್ ಟೂರ್ನಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಪ್ರಮುಖ ತಂಡಗಳೇ ಸೋತು ಹಿನ್ನಡೆ ಅನುಭವಿಸಿದೆ. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಟೀಂ ಇಂಡಿಯಾ ಹುಡುಗರು ಭರ್ಜಿ ಅಭ್ಯಾಸ ಜೊತೆಗೆ ಬಿಂದಾಸ್ ಆಗಿ ಇಂಗ್ಲೆಂಡ್ ಸುತ್ತುತ್ತಿದ್ದಾರೆ.

ಅಭ್ಯಾಸ ಪಂದ್ಯಗಳಲ್ಲಿ ಸೋಲು-ಗೆಲುವಿನ ಮುಖ ನೋಡಿರುವ ಟೀಂ ಇಂಡಿಯಾ ಮುಂಬರುವ ಬೃಹತ್ ಸವಾಲಿಗೆ ಸಜ್ಜಾಗಿ ನಿಂತಿದೆ. ಜೂನ್ 5ರಂದು ಭಾರತ ವಿಶ್ವಕಪ್​ನ ಅಭಿಯಾನ ಆರಂಭಿಸಲಿದೆ. ವಿಶ್ವಕಪ್​​ನ ಮೊದಲ ಪಂದ್ಯದಲ್ಲೇ ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಕಾದಾಟ ನಡೆಸಲಿದೆ.

ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಮುಗ್ಗರಿಸಿದೆ. ಸೋಲಿನ ಆರಂಭ ಪಡೆದಿರುವ ಹರಿಣಗಳು ಭರ್ಜರಿಯಾಗಿ ಕಂಬ್ಯಾಕ್ ಮಾಡಬೇಕೆಂದು ಕಠಿಣ ತರಬೇತಿ ಪಡೆಯುತ್ತಿದ್ದು, ಇತ್ತ ಟೀಂ ಇಂಡಿಯಾ ಪಾಳಯದಲ್ಲೂ ಪ್ರಾಕ್ಟೀಸ್ ಜೋರಾಗಿದೆ.

ಇದನ್ನೂ ಓದಿ: ICC Cricket World Cup 2019: ಪಾಕಿಸ್ತಾನಕ್ಕಿಂತ ಆರ್​​ಸಿಬಿ ತಂಡವೇ ಬಲಿಷ್ಠ!

 ಸೌತಾಂಪ್ಟನ್​​ನಲ್ಲಿ ನಡೆಯಲಿರುವ ಈ ಪಂದ್ಯ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗಲಿದೆ. ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಬೌಲ್ಡ್​ ಆಗಿದ್ದರು. ಹೀಗಾಗೆ ನೆಟ್ಸ್​​ನಲ್ಲಿ ವೇಗದ ಬೌಲರ್​ಗಳ ನೆರವು ಪಡೆದರು.

ಇದನ್ನೂ ಓದಿ: ICC Cricket World Cup 2019: ಶಾಯ್ ಹೋಪ್ ಸೂಪರ್ ಕ್ಯಾಚ್: ವಿಡಿಯೋ ಭಾರೀ ವೈರಲ್

ಇನ್ನು ಬಾಂಗ್ಲಾ ವಿರುದ್ಧ ಸೆಂಚುರಿ ಸಿಡಿಸಿದ ಧೋನಿ ಕೂಡ ನೆಟ್ಸ್​ನಲ್ಲಿ ಅಭ್ಯಾಸ ಮಡುತ್ತಿದ್ದಾರೆ. ಇದೆಲ್ಲಾ ಪ್ರಾಕ್ಟೀಸ್​​​​ನ ನಡುವೆಯೂ ಬಿಡುವು ಮಾಡಿಕೊಂಡ ಟೀಂ ಇಂಡಿಯಾ ಆಟಗಾರರು ಸೌತಾಂಪ್ಟನ್ ಸುತ್ತಮುತ್ತಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದಾರೆ. First published: June 1, 2019, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading