Shikhar Dhawan Injury: ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ!

ICC World Cup 2019: ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ವರೆಗೆ ಧವನ್ ಮೇಲೆ ನಿಗಾ ಇಟ್ಟಿದ್ದು, ಇಂಗ್ಲೆಂಡ್​ನಲ್ಲೇ ತಂಡದ ಜೊತೆ ಉಳಿದುಕೊಳ್ಳಲು ಸೂಚಿಸಿದೆ.

news18
Updated:June 11, 2019, 10:51 PM IST
Shikhar Dhawan Injury: ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ!
ಇಂಜುರಿಗೆ ತುತ್ತಾದ ಶಿಖರ್ ಧವನ್
news18
Updated: June 11, 2019, 10:51 PM IST

ಬೆಂಗಳೂರು (ಜೂ. 11): ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳನ್ನ ಗೆದ್ದು ಬೀಗಿರುವ ಟೀಂ ಇಂಡಿಯಾ ಮುಂದಿನ ಹೆಜ್ಜೆ ಇಡುವ ಮೊದಲೇ ಆಘಾತ ಕಂಡಿದೆ. ಶಿಖರ್ ಧವನ್ ಹೆಬ್ಬೆರಳಿನ ಮುರಿತಕ್ಕೊಳಗಾಗಿ ತಂಡದಿಂದ ಹೊರಬಿದ್ದಿದ್ದಾರೆ. ಮೂಲಕ ಕೊಹ್ಲಿ ಪಡೆ ಆತಂಕಕ್ಕೊಳಗಾಗಿದೆ.


ಈ ಮಧ್ಯೆ ಧವನ್ ಜಾಗಕ್ಕೆ ರಿಷಭ್ ಪಂತ್, ಶ್ರೇಯಸ್ ಐಯರ್ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂದಿಸಿದಂತೆ ಬಿಸಿಸಿಐ ಅಂತಿಮ ನಿರ್ಧಾರ ಪ್ರಕಟಿಸಿದೆ.


ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಧವನ್ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.



ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!

ಸದ್ಯ ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ವರೆಗೆ ಧವನ್ ಮೇಲೆ ನಿಗಾ ಇಟ್ಟಿದ್ದು, ಇಂಗ್ಲೆಂಡ್​ನಲ್ಲೇ ತಂಡದ ಜೊತೆ ಉಳಿದುಕೊಳ್ಳಲು ಸೂಚಿಸಿದೆ. ಹೀಗಾಗಿ ಸದ್ಯಕ್ಕೆ ಧವನ್ ಬದಲು ಯಾವುದೇ ಬದಲಿ ಆಟಗಾರ ತಂಡ ಸೇರುವುದಿಲ್ಲ ಎಂದು ಖಚಿತ ಪಡಿಸಿದೆ.


 


ಬಿಸಿಸಿಐ ಮೂಲಗಳ ಪ್ರಕಾರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಂದ ಧವನ್ ಹೊರಗುಳಿಯಲಿದ್ದಾರೆ. ಈ ನಡುವೆ ಅವರು ಗುಣಮುಖರಾಗಿಲ್ಲ ಎಂದಾದರೆ ಮಾತ್ರ ತವರಿಗೆ ಮರಳಲಿದ್ದಾರೆ. ಬಳಿಕ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.


ಭಾರತ ತನ್ನ ಮುಂದಿನ ಪಂದ್ಯವನ್ನು ಜೂ. 13 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಕಣಕ್ಕಿಳಿಯಲಿದ್ದು, 4ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಆಡುವ ಸಾಧ್ಯತೆಯಿದೆ.


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್, ನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.


 
First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...