ICC World Cup - ಶಿಖರ್ ಧವನ್ ಗಾಯ ಹಿನ್ನೆಲೆ, ರಿಷಬ್ ಪಂತ್​ಗೆ ಬುಲಾವ್

ರಿಷಬ್ ಪಂತ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸಲಾಗುತ್ತಿದೆಯಾದರೂ 15 ಆಟಗಾರರ ಪಟ್ಟಿಯಲ್ಲಿ ಸದ್ಯಕ್ಕೆ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರವಾಗಿಲ್ಲ. ಅಲ್ಲಯವರೆಗೂ ಭಾರತ ತಂಡದೊಂದಿಗೆ ಪ್ರವಾಸ ಮಾಡುವುದಕ್ಕಷ್ಟೇ ಪಂತ್ ಸೀಮಿತವಾಗಲಿದ್ದಾರೆ.

news18
Updated:June 12, 2019, 4:59 PM IST
ICC World Cup - ಶಿಖರ್ ಧವನ್ ಗಾಯ ಹಿನ್ನೆಲೆ, ರಿಷಬ್ ಪಂತ್​ಗೆ ಬುಲಾವ್
ರಿಷಬ್ ಪಂತ್
news18
Updated: June 12, 2019, 4:59 PM IST
ನವದೆಹಲಿ(ಜೂನ್ 12): ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಿಷಬ್ ಪಂತ್ ಅವರನ್ನು ಬ್ಯಾಕಪ್ ಆಟಗಾರನಾಗಿ ಇಂಗ್ಲೆಂಡ್​ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಆಡುವ ವೇಳೆ ಶಿಖರ್ ಧವನ್ ಗಾಯಗೊಂಡಿದ್ದರು. ಕೈ ಬೆರಳಿಗೆ ಗಾಯವಾಗಿದ್ದು ಕನಿಷ್ಠ 3 ಪಂದ್ಯಗಳಲ್ಲಿ ಧವನ್ ಅಲಭ್ಯರಾಗಿದ್ಧಾರೆ. ಧವನ್ ಅವರಿಗೆ ಬದಲೀ ಆಟಗಾರನಿಲ್ಲ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದ ಬಿಸಿಸಿಐ ಇದೀಗ ರಿಷಬ್ ಪಂತ್ ಅವರನ್ನು ಬ್ಯಾಕಪ್ ಆಗಿ ಇಂಗ್ಲೆಂಡ್​ಗೆ ಕಳುಹಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದರೆ, ಟೀಮ್ ಇಂಡಿಯಾದ 15 ಆಟಗಾರರ ಪಟ್ಟಿಯಲ್ಲಿ ಸದ್ಯಕ್ಕಂತೂ ರಿಷಬ್ ಪಂತ್​ಗೆ ಸ್ಥಾನ ನೀಡಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಂದು ವೇಳೆ, ಧವನ್ ಅವರ ಗಾಯದ ಸಮಸ್ಯೆ ಉಲ್ಭನಿಸಿದರೆ, ಅಥವಾ ಗಾಯ ಸರಿಯಾದ ಸಮಯಕ್ಕೆ ಮಾಯದಿದ್ದರೆ ಅವರಿಗೆ ಬದಲೀ ಆಟಗಾರನಾಗಿ ಯಾರನ್ನಾದರೂ ಘೋಷಿಸುವ ಸಾಧ್ಯತೆ ಇದೆ. ಅಂಬಾಟಿ ರಾಯುಡು, ಖಲೀಲ್ ಅಹ್ಮದ್, ನವದೀಪ್ ಸೈನಿ, ಇಶಾಂತ್ ಶರ್ಮಾ ಮತ್ತು ಇದೀಗ ರಿಷಭ್ ಪಂತ್ ಅವರು ಸದ್ಯಕ್ಕೆ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ಜೊತೆಗೆ ತಂಡದ 15 ಆಟಗಾರರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಅವರೂ ಇದ್ದಾರೆ. ಧವನ್​ಗೆ ಬದಲೀ ಆಟಗಾರರಾಗಲು ರಾಯುಡು, ದಿನೇಶ್ ಕಾರ್ತಿಕ, ವಿಜಯ್ ಶಂಕರ್ ಮತ್ತು ರಿಷಭ್ ಪಂತ್ ಮಧ್ಯೆ ಪೈಪೋಟಿ ಇರಲಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಪ್ರಧಾನಿ ಮೋದಿಯ ಕ್ರಿಕೆಟ್​ ರಾಜತಾಂತ್ರಿಕ ನಡೆ; ಮೆಚ್ಚುಗೆ ಸೂಚಿಸಿದ ದಂತಕಥೆ ಸಚಿನ್ ತೆಂಡೂಲ್ಕರ್

ತಂಡದ 15 ಆಟಗಾರರ ಪಟ್ಟಿಯಲ್ಲಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡದಿದ್ದುದು ಹಲವರ ಹುಬ್ಬೇರಿಸಿತ್ತು. ಆದರೆ, ವಿಶ್ವಕಪ್ ನಂತರ ರಿಷಬ್ ಪಂತ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರವಾಗುವ ಸಾಧ್ಯತೆ ಇದೆ. ಎಂ.ಎಸ್. ಧೋನಿ ನಂತರ ಆ ಮಟ್ಟದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಪ್ರದರ್ಶನ ತೋರಲು ಪಂತ್ ಸಮರ್ಥರಿದ್ದಾರೆ. ಅವರನ್ನು ಭವಿಷ್ಯದ ತಾರೆ ಎಂದೇ ಪರಿಗಣಿಸಲಾಗಿದೆ.

ವಿಶ್ವಕಪ್ ಮುಗಿದ ನಂತರ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ ತಂಡದಲ್ಲಿ ರಿಷಬ್ ಪಂತ್​ಗೆ ಸ್ಥಾನ ಸಿಗುವುದು ಬಹುತೇಕ ಖಚಿತವೆನ್ನಲಾಗಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗಲಿರುವ ಭಾರತ ಎ ತಂಡದಲ್ಲಿ ರಿಷಬ್ ಪಂತ್​ಗೆ ಸ್ಥಾನ ನೀಡಲಾಗಿದೆ. ಅಲ್ಲಿಯ ಪಿಚ್​ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳಲು ಪಂತ್​ಗೆ ಅನುವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

(ವರದಿ: ದೇವದ್ಯುತಿ ದಾಸ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...