HOME » NEWS » Sports » CRICKET ICC WORLD CUP 2019 RAIN PLAYS SPOILSPORT IN BOTH WARM UP CLASHES

ICC Cricket World Cup 2019 | ಮಳೆಗೆ ಆಹುತಿಯಾದ ಅಭ್ಯಾಸ ಪಂದ್ಯಗಳು

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​ ನಡುವಣ ಪಂದ್ಯಕ್ಕೂ ಮಳೆರಾಯ ಎಡಬಿಡದೆ ಕಾಡಿದ. ಪಂದ್ಯ ಆರಂಭಕ್ಕು ಮೊದಲು ಮಳೆ ಸುರಿದಿದ್ದರಿಂದ ಬಳಿಕ ಉಭಯ ತಂಡಗಳಿಗೆ ತಲಾ 31 ಓವರ್​ಗೆ ಪಂದ್ಯವನ್ನು ನಿಗಧಿ ಪಡಿಸಲಾಯಿತು.

Vinay Bhat | news18
Updated:May 26, 2019, 10:37 PM IST
ICC Cricket World Cup 2019 | ಮಳೆಗೆ ಆಹುತಿಯಾದ ಅಭ್ಯಾಸ ಪಂದ್ಯಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 26, 2019, 10:37 PM IST
  • Share this:
ಬೆಂಗಳೂರು (ಮೇ. 26): ವಿಶ್ವಕಪ್​​ನಲ್ಲಿ ಸದ್ಯ ಅಭ್ಯಾಸ ಪಂದ್ಯಗಳು ಆರಂಭವಾಗಿದ್ದು, ಇಂದು ನಡೆಯಬೇಕಿದ್ದ ಎರಡೂ ಪಂದ್ಯಗಳು ಮಳೆಗೆ ಆಹುತಿಯಾಗಿದೆ.

ಕಾರ್ಡಿಫ್​ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಅಭ್ಯಾಸ ಪಂದ್ಯಕ್ಕೆ ಆರಂಭದಿಂದಲೇ ಮಳೆರಾಯ ಅಡ್ಡಿ ಪಡಿಸಿದ. ಟಾಸ್ ಪ್ರಕ್ರಿಯೆಗೂ ಅವಕಾಶ ನೀಡದ ವರುಣ, ಅಂತಿಮವಾಗಿ ಪಂದ್ಯವನ್ನು ಒಂದೂ ಎಸೆತ ಹಾಕದೆ ರದ್ದು ಮಾಡಲಾಯಿತು.

 

ಇದನ್ನೂ ಓದಿ: 2003 World Cup​​: ಫೈನಲ್​​ನಲ್ಲಿ ಎಡವಿದ ಭಾರತ; ಆಸ್ಟ್ರೇಲಿಯಾ ಹ್ಯಾಟ್ರಿಕ್ ಕಪ್​ ಗೆದ್ದ ಸಾಧನೆ!

ಇತ್ತ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​ ನಡುವಣ ಪಂದ್ಯಕ್ಕೂ ಮಳೆರಾಯ ಎಡಬಿಡದೆ ಕಾಡಿದ. ಪಂದ್ಯ ಆರಂಭಕ್ಕು ಮೊದಲು ಮಳೆ ಸುರಿದಿದ್ದರಿಂದ ಬಳಿಕ ಉಭಯ ತಂಡಗಳಿಗೆ ತಲಾ 31 ಓವರ್​ಗೆ ಪಂದ್ಯವನ್ನು ನಿಗದಿ ಪಡಿಸಲಾಯಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆಫ್ರಿಕನ್ನರು 12.4 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿರುವಾಗ ಮತ್ತೆ ಮಳೆ ಸುರಿಯಲಾರಂಭಿಸಿತು. ಈ ಸಂದರ್ಭ ಆಫ್ರಿಕ ಓಪನರ್​ಗಳಾದ ಹಶೀಮ್ ಆಮ್ಲಾ 46 ಎಸೆತಗಳಲ್ಲಿ 51 ಹಾಗೂ ಕ್ವಿಂಟನ್ ಡಿಕಾಕ್ 30 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಕೊಂಚ ಹೊತ್ತು ಕಾದರು ಮಳೆ ನಿಲ್ಲದ ಕಾರಣ ಯಾವುದೇ ಫಲಿತಾಂಶವಿಲ್ಲದೆ ಪಂದ್ಯವನ್ನು ರದ್ದು ಮಾಡಲಾಯಿತು.

 ನಾಳೆ ಕೂಡ ಎರಡು ಅಭ್ಯಾಸ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ಮತ್ತು ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಮೇ. 28ಕ್ಕೆ ಆಡಲಿದೆ.

First published: May 26, 2019, 10:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading