Cricket World Cup 2019, PAK vs SL: ಎರಡನೇ ಗೆಲುವಿಗಾಗಿ ಪಾಕ್-ಲಂಕಾ ಹೋರಾಟ!

ICC Cricket World Cup 2019: ಉಭಯ ತಂಡಗಳು ಈವರೆಗೆ ಏಕದಿನ ಪಂದ್ಯಗಳಲ್ಲಿ ಒಟ್ಟು 153 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಪಾಕ್ 90 ಪಂದ್ಯಗಳಲ್ಲಿ ಗೆದ್ದರೆ, ಲಂಕಾ 58 ಪಂದ್ಯಗಳಲ್ಲಿ ಜಯ ಸಾಧಿಸಿದೆ.

Vinay Bhat | news18
Updated:June 7, 2019, 9:58 AM IST
Cricket World Cup 2019, PAK vs SL: ಎರಡನೇ ಗೆಲುವಿಗಾಗಿ ಪಾಕ್-ಲಂಕಾ ಹೋರಾಟ!
ಪಾಕಿಸ್ತಾನ ತಂಡದ ಆಟಗಾರರು
  • News18
  • Last Updated: June 7, 2019, 9:58 AM IST
  • Share this:
ಬೆಂಗಳೂರು (ಜೂ. 07): ವಿಶ್ವಕಪ್​​ನಲ್ಲಿ ಇಂದು ನಡೆಯಲಿರುವ 11ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗುತ್ತಿದೆ.

ಬ್ರಿಸ್ಟಾಲ್​ನಲ್ಲಿ ನಡೆಯುತ್ತಿರುವ ಈ ಪಂದ್ಯ ಉಭಯ ತಂಡಗಳಿಗೂ ಮುಖ್ಯವಾಗಿದೆ. ಪಾಕಿಸ್ತಾನ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ ಮತ್ತೊಂದರಲ್ಲಿ ಸೋಲುಂಡು ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ ಕೂಡ ಇದೇ ಸ್ಥಿತಿಯಲ್ಲಿದ್ದು ರನ್​​ರೇಟ್ ಆಧಾರದ ಮೇಲೆ ಪಾಕ್​ಗಿಂತ ಒಂದು ಸ್ಥಾನ ಮೇಲಿದೆ.

ಮೊದಲ ಪಂದ್ಯದಲ್ಲಿ ಕೆರಿಬಿಯನ್ನರ ವಿರುದ್ಧ ಹೀನಾಯ ಸೋಲು ಕಂಡು ಭರ್ಜರಿ ಕಮ್​ಬ್ಯಾಕ್ ಮಾಡಿರುವ ಸರ್ಫರಾಜ್ ಪಡೆ ಆತಿಥೇಯ ಇಂಗ್ಲೆಂಡ್ ವಿರುದ್ಧ 21 ರನ್​ಗಳ ಗೆಲುವು ಸಾಧಿಸಿತ್ತು. ಬೌಲರ್​ಗಳು ಫಾರ್ಮ್​ಗೆ ಮರಳಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆದರೆ, ಪ್ರಮುಖ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಮಂಕಾಗಿರುವ ಪಾಕ್ ಮತ್ತಷ್ಟು ಬಲವಾಗಿ ಕಣಕ್ಕಿಳಿಯಬೇಕಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ಶೋಯೆಬ್ ಮಲಿಕ್​ರನ್ನು ಕಳೆದ ಪಂದ್ಯದಲ್ಲಿ ಆಡಿಸಿದರಾದರು, ಸರಿಯಾದ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರಲಿಲ್ಲ. ಹೀಗಾಗಿ ಈ ಅನುಭವಿಯ ಅಗತ್ಯತೆಯನ್ನು ಪಾಕ್ ತಂಡ ಅರಿಯಬೇಕಿದೆ.

‘ಉದ್ಘಾಟನಾ ಪಂದ್ಯದಲ್ಲೇ ಆಂಗ್ಲರಿಗೆ ಗೆಲುವು, ಕೊಹ್ಲಿ vs ರಬಾಡ’; ವಿಶ್ವಕಪ್ ಮೊದಲ ವಾರದಲ್ಲಿ ಏನೆಲ್ಲಾಯ್ತು?

ಇತ್ತ ಡಕ್ವರ್ತ್​​ ನಿಯಮದ ಅನ್ವಯ ಅಫ್ಘಾನಿಸ್ತಾನ ವಿರುದ್ಧ ಗೆದ್ದ ಲಂಕ ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿತು. ಆದರೆ, ಸಿಂಹಳೀಯರ ಪಾಳಯದಲ್ಲಿ ನಾಯಕ ದಿಮುತ್ ಕರುಣರತ್ನೆ ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ ಫಾರ್ಮ್​ನಲ್ಲಿಲ್ಲ. ಬೌಲಿಂಗ್​ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ. ಅನುಭವಿ ಆಟಗಾರರಿದ್ದರೂ, ಮೊದಲ ಪಂದ್ಯದಲ್ಲೇ ವಿಫಲವಾಗಿ ಒತ್ತಡಕ್ಕೆ ಸಿಲುಕಿದ್ದರು. ಹೀಗಾಗಿ ಇಂದಿನ ಪಂದ್ಯ ಪಾಕ್ ವಿರುದ್ಧ ಆಗಿರುವುದರಿಂದ ಏಂಜೆಲೊ ಮ್ಯಾಥ್ಯೂಸ್‌, ತಿಸಾರಾ ಪೆರೇರಾರಂತಹ ಆಟಗಾರರು ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.

ಉಭಯ ತಂಡಗಳು ಈವರೆಗೆ ಏಕದಿನ ಪಂದ್ಯಗಳಲ್ಲಿ ಒಟ್ಟು 153 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಪಾಕ್ 90 ಪಂದ್ಯಗಳಲ್ಲಿ ಗೆದ್ದರೆ, ಲಂಕಾ 58 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದ್ದರೆ, 4 ಪಂದ್ಯ ಫಲಿತಾಂಶ ವಿಲ್ಲದೆ ಅಂತ್ಯ ಕಂಡಿದೆ.

ಸ್ಥಳ: ಕಂಟ್ರಿ ಗ್ರೌಂಡ್​​​, ಬ್ರಿಸ್ಟಾಲ್ಸಮಯ: 3PM

ಸಂಭಾವ್ಯ ತಂಡ:

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ನಾಯಕ), ಕುಸಾಲ್ ಪೆರೇರಾ, ಲಹಿರು ತಿರುಮನೆ, ಕುಸಲ್ ಮೆಂಡಿಸ್, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ತಿಸಾರ ಪರೇರಾ, ಸುರಂಗ ಲಕ್ಮಲ್, ನುವನ್ ಪ್ರದೀಪ್, ಇಸ್ರು ಉದನಾ, ಲಸಿತ್ ಮಲಿಂಗಾ.

ಪಾಕಿಸ್ತಾನ ತಂಡ: ಸರ್ಫರಾಜ್ ಅಹ್ಮದ್ (ನಾಯಕ), ಇಮಾಮ್ ಉಲ್ ಹಖ್, ಫಖರ್ ಜಮಾನ್, ಬಾಬರ್ ಅಜಾಮ್, ಹ್ಯಾರಿಸ್ ಸೊಹೈಲ್, ಮೊಹಮ್ಮದ್ ಹಫೀಜ್, ಇಮಾದ್ ವಾಸಿಮ್, ಶಬಾದ್ ಖಾನ್, ಹಸನ್ ಅಲಿ, ವಹಾಬ್ ರಿಯಾಜ್, ಮೊಹಮ್ಮದ್ ಅಮಿರ್.

First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading