HOME » NEWS » Sports » CRICKET ICC WORLD CUP 2019 PANT INCLUDED IN PLAYING XI FOR INDIAS CLASH AGAINST ENGLAND

India vs England: ಚೊಚ್ಚಲ ವಿಶ್ವಕಪ್​ನಲ್ಲಿ ರಿಷಭ್; ಪಂತ್ ಮೇಲೆ ಹೆಚ್ಚಿದ ನಿರೀಕ್ಷೆ

Rishabh Pant: ಶಿಖರ್ ಧವನ್ ಇಂಜುರಿಯಿಂದ ಹೊರಗುಳಿದ ಕಾರಣ ಪಂತ್​ರನ್ನು 15 ಮಂದಿ ಸದಸ್ಯರ ತಂಡಕ್ಕೆ ಸೇರಿಸಲಾಯಿತು. ಅದರಂತೆ ಇಂದು ತನ್ನ ಚೊಚ್ಚಲ ವಿಶ್ವಕಪ್ ಅನ್ನು ರಿಷಭ್ ಪಂತ್ ಆಡುತ್ತಿದ್ದು, ಸಾಕಷ್ಟು ನಂಬಿಕೆ ಇಡಲಾಗಿದೆ.

Vinay Bhat | news18
Updated:June 30, 2019, 3:52 PM IST
India vs England: ಚೊಚ್ಚಲ ವಿಶ್ವಕಪ್​ನಲ್ಲಿ ರಿಷಭ್; ಪಂತ್ ಮೇಲೆ ಹೆಚ್ಚಿದ ನಿರೀಕ್ಷೆ
ರಿಷಭ್ ಪಂತ್
  • News18
  • Last Updated: June 30, 2019, 3:52 PM IST
  • Share this:
ಬೆಂಗಳೂರು (ಜೂ. 30): ವಿಶ್ವಕಪ್​​ನಲ್ಲಿಂದು ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ವಿಜಯ್ ಶಂಕರ್​ರನ್ನು ಕೈಬಿಟ್ಟು ರಿಷಭ್ ಪಂತ್​​ಗೆ ಅವಕಾಶ ನೀಡಲಾಗಿದೆ. ಈ ಮೂಲಕ ಪಂತ್​​ ಚೊಚ್ಚಲ ವಿಶ್ವಕಪ್​​ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ.

ಭಾರತಕ್ಕೆ ನಾಲ್ಕನೇ ಕ್ರಮಾಂಕದ್ದೆ ದೊಡ್ಡ ಸಮಸ್ಯೆಯಾಗಿತ್ತು. ನಂಬರ್ 4 ಸ್ಥಾನದಲ್ಲಿ ಆಲ್​ರೌಂಡರ್ ವಿಜಯ್​ ಶಂಕರ್​​ಗೆ ಅವಕಾಶ​ ಕೊಟ್ಟಷ್ಟೂ ಮುಗ್ಗರಿಸುತ್ತಿದ್ದರು. ವಿಶ್ವಕಪ್​ಗೂ ಮೊದಲು ಕಾಣಿಸಿಕೊಂಡಿದ್ದ ಸಮಸ್ಯೆಗೆ ಲೀಗ್ ಸ್ಟೇಜ್ ಮುಗಿಯುವ ಹಂತಕ್ಕೆ ತಲುಪಿದರೂ ಪರಿಹಾರ ಸಿಕ್ಕಿರಲಿಲ್ಲ. ಸದ್ಯ ಈ ಜಾಗದಲ್ಲಿ ಭಾರತ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದು, ಪಂತ್ ಯಾವರೀತಿ ಪ್ರದರ್ಶನ ತೋರಲಿದ್ದಾರೆ ಎಂಬುದು ಕುತೂಹಲ ಕೆರಳಸಿದೆ.

ICC World Cup 2019 | Pant Included In Playing XI For India's Clash Against England
ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್


ICC World Cup 2019: ಪಾಕ್-ಅಫ್ಘಾನ್ ಪಂದ್ಯದ ವೇಳೆ ಅಭಿಮಾನಿಗಳ ಹೊಡೆದಾಟ: ವಿಡಿಯೋ ವೈರಲ್

ಆರಂಭದಲ್ಲಿ ಭಾರತದ ವಿಶ್ವಕಪ್ ತಂಡ ಆಯ್ಕೆ ಮಾಡುವಾಗ 15 ಮಂದಿ ಸದಸ್ಯರಲ್ಲಿ ಪಂತ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಬ್ಯಾಕ್ ಅಪ್ ಆಟಗಾರನಾಗಿ ಆಯ್ಕೆ ಆಗಿದ್ದರು. ಇದರ ಮಧ್ಯೆ ಶಿಖರ್ ಧವನ್ ಇಂಜುರಿಯಿಂದ ಹೊರಗುಳಿದ ಕಾರಣ ಪಂತ್​ರನ್ನು 15 ಮಂದಿ ಸದಸ್ಯರ ತಂಡಕ್ಕೆ ಸೇರಿಸಲಾಯಿತು. ಅದರಂತೆ ಇಂದು ತನ್ನ ಚೊಚ್ಚಲ ವಿಶ್ವಕಪ್ ಅನ್ನು ರಿಷಭ್ ಪಂತ್ ಆಡುತ್ತಿದ್ದು, ಸಾಕಷ್ಟು ನಂಬಿಕೆ ಇಡಲಾಗಿದೆ.

 


ಟೀಂ ಇಂಡಿಯಾ ಆಟಗಾರರೋ ಅಥವಾ ಇಂಡಿಯನ್ ಆಯಿಲ್ ಕೆಲಸಗಾರರೋ?; ಟ್ರೋಲ್ ಆಯ್ತು ಹೊಸ ಜರ್ಸಿ

ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸೆಮಿ ಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಇಂಗ್ಲೆಂಡ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇ ಬೇಕಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ವಿಶ್ವಕಪ್​ನಿಂದಲೇ ಹೊರಬೀಳುವ ಹಂತಕ್ಕೆ ತಲುಪಲಿದೆ.

Youtube Video
First published: June 30, 2019, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories