ಮೊದಲ ಪಂದ್ಯ ಸೋತಿದ್ದಕ್ಕೆ ಟೀಕಿಸಬೇಡಿ, ನಮ್ಮ ತಾಕತ್ತು ನಮಗೆ ಗೊತ್ತಿದೆ; ಪಾಕ್ ಮಾಜಿ ಕ್ರಿಕೆಟರ್

ICC World Cup 2019 | ಪಾಕ್ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆ ಮಾಡುತ್ತಿದ್ದಂತೆ ಪಾಕ್ ಮಾಜಿ ಕ್ರಿಕೆಟರ್​ ವಖಾರ್ ಯೂನಿಸ್​ ತಂಡದ ಬೆಂಬಲಕ್ಕೆ ನಿಂತಿದ್ದಾರೆ.

Vinay Bhat | news18
Updated:June 2, 2019, 5:02 PM IST
ಮೊದಲ ಪಂದ್ಯ ಸೋತಿದ್ದಕ್ಕೆ ಟೀಕಿಸಬೇಡಿ, ನಮ್ಮ ತಾಕತ್ತು ನಮಗೆ ಗೊತ್ತಿದೆ; ಪಾಕ್ ಮಾಜಿ ಕ್ರಿಕೆಟರ್
ವಖಾರ್ ಯೂನಿಸ್, ಪಾಕ್ ಮಾಜಿ ಕ್ರಿಕೆಟರ್​
  • News18
  • Last Updated: June 2, 2019, 5:02 PM IST
  • Share this:
ಬೆಂಗಳೂರು (ಜೂ. 02): ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ವೆಸ್ಟ್​ ಇಂಡೀಸ್​ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು. ಜೊತೆಗೆ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ ಸೋತು ಅಲ್ಲೂ ಮಾನ ಕಳೆದುಕೊಂಡಿತ್ತು. ಹೀಗಾಗಿ ಪಾಕ್ ತಂಡದ ವಿರುದ್ಧ ಟೀಕೆ ಕೇಳಿಬಂದಿತ್ತು. ಸದಾ ವಿಶ್ವಕಪ್​ನಲ್ಲಿ ತಾಕತ್ತು ತೋರಿಸುವ ಪಾಕ್, ಈ ಬಾರಿ ಇಷ್ಟು ಕಳಪೆಯಾಗಿ ಯಾಕೆ ಆಡುತ್ತಿದ್ದಾರೆ ಎಂದು ವ್ಯಾಖ್ಯಾನ ಮಾಡಲಾಗಿತ್ತು.

ಪಾಕ್ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆ ಮಾಡುತ್ತಿದ್ದಂತೆ ಪಾಕ್ ಮಾಜಿ ಕ್ರಿಕೆಟರ್​ ವಖಾರ್ ಯೂನಿಸ್​ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಕೇವಲ ಒಂದು ಪಂದ್ಯಕ್ಕೆಲ್ಲಾ ನಮ್ಮನ್ನ ಟೀಕಿಸಬೇಡಿ. ನಮ್ಮ ತಾಕತ್ತು ನಮಗೆ ಗೊತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ 1992ರ ವಿಶ್ವಕಪ್​ನ ಉದಾಹರಣೆ ಕೊಟ್ಟಿದ್ದು, ಅಲ್ಲೂ ನಾವು ಮೊದಲ ಪಂದ್ಯ ಸೋತಿದ್ದೆವು. ಆದರೆ ಬಳಿಕ ಕಪ್ ಗೆದ್ದು ತೋರಿಸಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾದರೆ ಟೀಂ ಇಂಡಿಯಾ ಸ್ಥಿತಿ ಏನು?

ಆಸ್ಟ್ರೇಲಿಯಾದಲ್ಲಿ ನಡೆದಿದ್ದ 1992ರ ವಿಶ್ವಕಪ್​ನಲ್ಲಿ ಪಾಕಿಸ್ತಾನ, ವಿಂಡೀಸ್​ ವಿರುದ್ಧವೇ ಮೊದಲ ಪಂದ್ಯ ಆಡಿತ್ತು. ಮೊದಲ ಪಂದ್ಯದಲ್ಲೆ 10 ವಿಕೆಟ್​ ಸೋಲನ್ನ ಅನುಭವಿಸಿದ್ದ ಪಾಕ್, ಬಳಿಕ ಪುಟಿದೆದ್ದು ವಿಶ್ವಕಪ್​ ಗೆದ್ದಿತ್ತು. ಅದನ್ನ ಮರೆಯಬೇಡಿ ಎಂದು ವಖಾರ್​ ಯೂನಿಸ್​ ಟೀಕಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಶ್ವಕಪ್​ ಗೆಲ್ಲುವ  ಫೇವರಿಟ್ ಇಂಗ್ಲೆಂಡ್​ ವಿರುದ್ಧ ಪಾಕ್ ಸೋಮವಾರ ತನ್ನ ಎರಡನೇ ಪಂದ್ಯ ಆಡಲಿದೆ.

First published:June 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ