HOME » NEWS » Sports » CRICKET ICC WORLD CUP 2019 OPENER SHIKHAR DHAWAN HITS THE GYM AS RACE TO GET FIT BEGINS

Shikhar Dhawan: ಗಾಯದ ನಡುವೆಯೂ ಧವನ್ ಜಿಮ್​ನಲ್ಲಿ ಭರ್ಜರಿ ವರ್ಕೌಟ್​!

ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯತ್ತಮ ಆಟ ಪ್ರದರ್ಶಿಸಿದ್ದರು. ತಂಡದ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖ ಪಾತ್ರವಾಗಿತ್ತು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡಿದ್ದರು.

Vinay Bhat | news18
Updated:June 14, 2019, 4:17 PM IST
Shikhar Dhawan: ಗಾಯದ ನಡುವೆಯೂ ಧವನ್ ಜಿಮ್​ನಲ್ಲಿ ಭರ್ಜರಿ ವರ್ಕೌಟ್​!
ಜಿಮ್​ನಲ್ಲಿ ಅಭ್ಯಾಸ ನಡೆಸುತ್ತಿರುವ ಧವನ್
  • News18
  • Last Updated: June 14, 2019, 4:17 PM IST
  • Share this:
ಬೆಂಗಳೂರು (ಜೂ. 15): ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯವಾಗಿ ಸದ್ಯ ವಿಶ್ರಾಂತಿಯಲ್ಲಿರುವ ಶಿಖರ್ ಧವನ್ ಸುಮ್ಮನೆ ಕೂತಿಲ್ಲ. ಬದಲಾಗಿ ನೋವಿನ ನಡುವೆಯೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್, ನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.

ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್​ಗೆ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

Poonam Pandey: ಅಭಿನಂದನ್ ಹೆಸರಲ್ಲಿ ಟ್ರೋಲ್; ಒಳ ಉಡುಪು ಬಿಚ್ಚಿ ಪಾಕ್​ಗೆ ತಿರುಗೇಟು ನೀಡಿದ ಪೂನಂ!

ಹೀಗಿರುವಾಗ ಸ್ವತಃ ಧವನ್ ಅವರೇ ಜಿಮ್​ನಲ್ಲಿ ವರ್ಕೌಟ್​​ ಮಾಡುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಇಂಥಹ ಸಂದರ್ಭದಲ್ಲಿ ಕುಗ್ಗಬಾರದು, ಮೆಟ್ಟಿನಿಲ್ಲ ಬೇಕು ಎಂಬರ್ಥದಲ್ಲಿ ಅಡಿ ಬರಹ ನೀಡಿ ಶೇರ್ ಮಾಡಿದ್ದಾರೆ. ಅಲ್ಲದೆ ನನಗೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

 ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯತ್ತಮ ಆಟ ಪ್ರದರ್ಶಿಸಿದ್ದರು. ತಂಡದ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖ ಪಾತ್ರವಾಗಿತ್ತು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡಿದ್ದರು.

Shikhar-Dhawan-Reuters
ಇಂಜುರಿಗೆ ತುತ್ತಾದ ಶಿಖರ್ ಧವನ್


ಜೂನ್ 16 ರಂದು ಭಾರತ ತನ್ನ 5ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ.

First published: June 14, 2019, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories