ICC Cricket World Cup 2019: ಜುಲೈ 14 ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು; ಹಾರ್ದಿಕ್ ಪಾಂಡ್ಯ

ICC Cricket World Cup 2019: ಕಳೆದ ಎಂಟು ವರ್ಷಗಳಿಂದ 2019ರ ವಿಶ್ವಕಪ್​ನಲ್ಲಿ ಆಡಬೇಕೆಂದು ಸಾಕಷ್ಟು ಶ್ರಮ ವಹಿಸುತ್ತಿದ್ದೇನೆ. ಅದರಂತೆ ನಾನು ತಂಡ ಸೇರಿಕೊಂಡಿದ್ದೇನೆ- ಹಾರ್ದಿಕ್ ಪಾಂಡ್ಯ

Vinay Bhat | news18
Updated:June 13, 2019, 4:20 PM IST
ICC Cricket World Cup 2019: ಜುಲೈ 14 ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು; ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ (ಟೀಂ ಇಂಡಿಯಾ ಆಟಗಾರ)
  • News18
  • Last Updated: June 13, 2019, 4:20 PM IST
  • Share this:
ಬೆಂಗಳೂರು (ಜೂ. 13): 12ನೇ ವಿಶ್ವಕಪ್ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿರುವ ಟೀಂ ಇಂಡಿಯಾ ಆಡಿರುವ ಎರಡು ಪಂದ್ಯಗಳ ಪೈಕಿ ಎರಡನ್ನೂ ಗೆದ್ದು ಬೀಗಿದೆ. ಇಂದು ತನ್ನ ಮೂರನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡುತ್ತಿದೆ. ಈ ಮಧ್ಯೆ ಭಾರತದ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈ 14 ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.

ವಿಶ್ವಕಪ್ ಕುರಿತಾಗಿ ಐಸಿಸಿಸ ಜೊತೆ ತನ್ನ ಅಭಿಪ್ರಾಯವನ್ನು ಹಾರ್ದಿಕ್ ಹಂಚಿಕೊಂಡಿದ್ದಾರೆ. 'ಭಾರತ ಕ್ರಿಕೆಟ್ ತಂಡದ ಪರವಾಗಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಅದರಲ್ಲೂ ಭಾರತದ ವಿಶ್ವಕಪ್​​ ತಂಡದಲ್ಲಿ ನನ್ನ ಹೆಸರಿರಬೇಕೆಂದು ಆಸೆಯಿತ್ತು. ಈ ಕನಸುಗಳೆಲ್ಲಾ ನನಸಾಗಿದೆ. ತುಂಬಾನೇ ಸಂತೋಷವಾಗಿದೆ' ಎಂದಿದ್ದಾರೆ.

On July 14, I Want to Have That Cup in My Hand: Hardik Pandya
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿರುವ ದೃಶ್ಯ


'ಕೆಲವು ದಿನಗಳ ಹಿಂದೆ ನನ್ನ ಗೆಳೆಯ 2011ರ ವಿಶ್ವಕಪ್ ಗೆದ್ದಾಗ ನಾವು ರಸ್ತೆ ಮಧ್ಯದಲ್ಲಿ ಸಂಭ್ರಮಿಸುತ್ತಿದ್ದ ಫೋಟೋ ಕಳುಹಿಸಿದರು. ಆದರೆ ಇಂದು ನಾನು ಕೂಡ ವಿಶ್ವಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದೇನೆ. ಅಂದು ಭಾರತಕ್ಕೆ ಕಪ್ ಗೆಲ್ಲಿಸಿ ಕೊಟ್ಟ ಧೋನಿ ಅವರೊಂದಿಗೆ ಇಂದು ನಾನಿದ್ದೇನೆ. ಇದಕ್ಕಿಂತ ಬೇರೇನು ಬೇಡ ನನಗೆ' ಎಂದು ಹೇಳಿದ್ದಾರೆ.

Shikhar Dhawan: ಧವನ್ ಅನುಪಸ್ಥಿತಿ ಟೀಂ ಇಂಡಿಯಾ ಮೇಲೆ ಹೇಗೆ ಪರಿಣಾಮ ಬೀಳಲಿದೆ?

 



'ಕಳೆದ ಎಂಟು ವರ್ಷಗಳಿಂದ 2019ರ ವಿಶ್ವಕಪ್​ನಲ್ಲಿ ಆಡಬೇಕೆಂದು ಸಾಕಷ್ಟು ಶ್ರಮ ವಹಿಸುತ್ತಿದ್ದೇನೆ. ಅದರಂತೆ ನಾನು ತಂಡ ಸೇರಿಕೊಂಡಿದ್ದೇನೆ. ಚಾಲೆಂಜ್ ಎಂದರೆ ನನಗೆ ತುಂಬಾ ಇಷ್ಟ. ಈ ಬಾರಿ ವಿಶ್ವಕಪ್ ನಾವು ಗೆಲ್ಲುತ್ತೇವೆ. ಜುಲೈ 14 ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು, ಇದೆ ನನ್ನ ಗುರಿ' ಎಂದಿದ್ದಾರೆ.

First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...