Bhuvneshwar Kumar Injury: ಮುಂದಿನ ಕೆಲ ಪಂದ್ಯಕ್ಕೆ ಭುವಿ ಅಲಭ್ಯ

Bhuvneshwar Kumar Injury: ಭಾರತ ಬೌಲಿಂಗ್​​ ಮಾಡುವಾಗ 5ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಸ್ನಾಯು ಸೆಳೆತಕ್ಕೊಳಗಾದ ಪರಿಣಾಮ ತಕ್ಷಣವೆ ಅರ್ಧದಲ್ಲೇ ಬೌಲಿಂಗ್ ಮಾಡುವುದು ಬಿಟ್ಟು ಮೈದಾನ ತೊರೆದರು.

Vinay Bhat | news18
Updated:June 17, 2019, 3:21 PM IST
Bhuvneshwar Kumar Injury: ಮುಂದಿನ ಕೆಲ ಪಂದ್ಯಕ್ಕೆ ಭುವಿ ಅಲಭ್ಯ
ಭುವನೇಶ್ವರ್ ಕುಮಾರ್
  • News18
  • Last Updated: June 17, 2019, 3:21 PM IST
  • Share this:
ಬೆಂಗಳೂರು (ಜೂ. 17): ವಿಶ್ವಕಪ್​ನಲ್ಲಿ ಭಾರತ ಬಲಿಷ್ಠವಾಗುತ್ತಾ ಉತ್ತಮ ಪ್ರದರ್ಶನ ನೀಡುತ್ತದೆ ಎಂಬೊತ್ತಿಗೆ ಇಂಜುರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಶಿಖರ್ ಧವನ್ ಹೆಬ್ಬೆರಳಿನ ಗಾಯದಿಂದ ವಿಶ್ರಾಂತಿಯಲ್ಲಿದ್ದಾರೆ. ಈ ಮಧ್ಯೆ ಭುವನೇಶ್ವರ್ ಕುಮಾರ್ ಕೂಡ ನಿನ್ನೆಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದಾರೆ.

ಭಾರತ ಬೌಲಿಂಗ್​​ ಮಾಡುವಾಗ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದರು. ಸ್ನಾಯು ಸೆಳೆತಕ್ಕೊಳಗಾದ ಪರಿಣಾಮ ತಕ್ಷಣವೆ ಅರ್ಧದಲ್ಲೇ ಬೌಲಿಂಗ್ ಮಾಡುವುದು ಬಿಟ್ಟು ಮೈದಾನ ತೊರೆದರು. ಸದ್ಯ ಇದರಿಂದಾಗಿ ಭುವಿ ಮುಂದಿನ ಕನಿಷ್ಠ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಭುವನೇಶ್ವರ್ ಬದಲು ತಂಡದಲ್ಲಿ ಯಾವುದೇ ಹೊಸ ಆಟಗಾರನ ಆಯ್ಕೆ ಸದ್ಯಕ್ಕಿಲ್ಲ ಎಂಬುದನ್ನೂ ಬಿಸಿಸಿಐ ಮೂಲಗಳು ತಿಳಿಸಿವೆ. ಈಗಾಗಲೇ ಧವನ್ ಇಂಜುರಿಯಲ್ಲಿರುವ ಕಾರಣ ಅವರ ಬದಲು ರಿಷಭ್ ಪಂತ್​ರನ್ನು ಆಯ್ಕೆ ಮಾಡಲಾಗಿದೆ. ಆದರೆ ಭುವನೇಶ್ವರ್ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನ ಆಯ್ಕೆ ಸದ್ಯಕ್ಕಿಲ್ಲ ಎಂದು ತಿಳಿದುಬಂದಿದೆ. ಮುಂದಿನ ಪಂದ್ಯದ ಹೊತ್ತಿಗೆ ಭುವಿ ಫಿಟ್ ಆಗಿಲ್ಲ ಎಂದಾದರೆ ಮೊಹಮ್ಮದ್ ಶಮಿ ತಂಡದಲ್ಲಿ ಆಡುವ ಸಂಬವವಿದೆ.

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸಾನಿಯಾ ಜೊತೆ ಪಾಕ್ ಕ್ರಿಕೆಟಿಗರ ಹುಕ್ಕಾ ಡಿನ್ನರ್; ಅಭಿಮಾನಿಗಳು ಕೆಂಡಾಮಂಡಲ!

ಭುವಿ ಇಂಜುರಿಗೆ ಬಗ್ಗೆ ಮಾತನಾಡಿದ ಕೊಹ್ಲಿ, ಭುವನೇಶ್ವರ್​ ರಂತಹ ಬೌಲರ್​ ಸೇವೆ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಆದರೆ, ಮುಂದಿನ ಪಂದ್ಯಗಳು ಅಫ್ಘಾನಿಸ್ತಾನ ಮತ್ತು ವೆಸ್ಟ್​​ ಇಂಡೀಸ್​ ವಿರುದ್ಧ ನಡೆಯಿದೆ. ಹೀಗಾಗಿ ತಂಡಕ್ಕೆ ಅಷ್ಟೊಂದು ಆಘಾತವಿಲ್ಲ ಎಂದಿದ್ದಾರೆ.

ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 22 ರಂದು ಅಫ್ಘಾನಿಸ್ತಾನ ವಿರುದ್ಧ ಸೌತಾಂಪ್ಟನ್​ನಲ್ಲಿ ಆಡಲಿದೆ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...