Vinay BhatVinay Bhat
|
news18 Updated:May 25, 2019, 2:06 PM IST
ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಮಾತ್ರ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗುರಿ ತಲುಪಲು ವಿಫಲವಾಗಿತ್ತು.
- News18
- Last Updated:
May 25, 2019, 2:06 PM IST
ಬೆಂಗಳೂರು (ಮೇ. 25): ವಿಶ್ವಕಪ್ ಮಹಾಸಮರಕ್ಕೆ ಇನ್ನೇನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ಅಭ್ಯಾಸ ಪಂದ್ಯ ಕೂಡ ಆರಂಭವಾಗಿದ್ದು, ಟೀಂ ಇಂಡಿಯಾ ಇಂದು ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹಲವಾರು ಪ್ರಶ್ನೆಗೆ ಉತ್ತರ ಹುಡುಕಲಿದೆ. ಈ ಮಧ್ಯೆ ಕೊಹ್ಲಿ ಪಡೆಗೆ ದೊಡ್ಡ ಆಘಾತ ಎದುರಾಗಿದೆ.
ಭಾರತ ತಂಡದ ಪ್ರಮುಖ ಆಲ್ರೌಂಡರ್ ಆಟಗಾರ ವಿಜಯ್ ಶಂಕರ್ ಗಾಯಗೊಂಡಿದ್ದು, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡು ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ. ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವ ವೇಳೆ ವೇಗಿ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಮೊಣ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಈ ಸಂದರ್ಭ ಅರ್ಧದಲ್ಲೇ ಅಭ್ಯಾಸವನ್ನು ನಿಲ್ಲಿಸಿ ಮೈದಾನ ತೊರೆದಿದ್ದಾರೆ.
ಇದನ್ನೂ ಓದಿ: 2011ರಲ್ಲಿ ವಿಶ್ವಕಪ್ ಗೆದ್ದಾಗ ಅಭಿಮಾನಿಯಾಗಿ ಮೈದಾನದಲ್ಲಿ ಸಂಭ್ರಮಿಸಿದ್ದ ಈ ವ್ಯಕ್ತಿ ಇಂದು ಭಾರತ ತಂಡದ ಪ್ರಮುಖ ಆಟಗಾರ!
ಇದಾದ ಬೆನ್ನಲ್ಲೆ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಇಂಜುರುಗೆ ತುತ್ತಾಗಿದ್ದಾರೆ. ಶಾರ್ಟ್ ಬಾಲ್ ಎದುರಿಸಲು ಧವನ್ ಬ್ಯಾಟ್ ಬೀಸಿದ್ದು, ಆಗ ಚೆಂಡು ಹೆಲ್ಮೆಟ್ಗೆ ಬಡಿದು ಧವನ್ ಗಾಯಗೊಂಡಿದ್ದಾರೆ. ಕೂಡಲೇ ವೈದ್ಯರು ಧಾವಿಸಿ ಚಿಕಿತ್ಸೆ ನೀಡಿದ್ದು, ಶಿಖರ್ ಧವನ್ ಅಭ್ಯಾಸ ನಿಲ್ಲಿಸಿ ಹೊರ ನಡೆದಿದ್ದಾರೆ. ಸದ್ಯ ಧವನ್ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದರೂ ಇಂದಿನ ಅಭ್ಯಾಸ ಪಂದ್ಯದಲ್ಲಿ ಆಡುವುದು ಅನುಮಾನ!

ಇಂಜುರಿಗೆ ತುತ್ತಾದ ಧವನ್
ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತೀಯ ಆಟಗಾರರು ಒಬ್ಬೊಬ್ಬರೆ ಇಂಜುರಿಗೆ ತುತ್ತಾಗುತ್ತಿರುವುದು ಕೊಹ್ಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಐಪಿಎಲ್ನಲ್ಲಿ ಕೇದರ್ ಜಾಧವ್ ಕೂಡ ಗಾಯಗೊಂಡಿದ್ದರು. ವಿಶ್ವಕಪ್ನಲ್ಲಿ ಆಡುವುದು ಅನುಮಾನ ಎಲ್ಲಲಾಗಿತ್ತು. ಆದರೆ ವಿಶ್ವಕಪ್ಗೆ ಜಾಧವ್ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ ಆದರು ಇನ್ನಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ.
First published:
May 25, 2019, 2:05 PM IST