ಬೆಂಗಳೂರು (ಜೂ. 07): ವಿಶ್ವಕಪ್ನಲ್ಲಿ ದ. ಆಫ್ರಿಕಾ ವಿರುದ್ಧ ಗೆದ್ದು ಭರ್ಜರಿ ಆರಂಭ ಪಡೆದಿರುವ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಭಾರತ ಕಣಕ್ಕಿಳಿಯುತ್ತಿದೆ. ಇದಕ್ಕಾಗಿ ಈಗಾಗಲೇ ಸೌತಂಪ್ಟನ್ನಿಂದ ಲಂಡನ್ನ ಕೆನ್ನಿಂಗ್ಟನ್ಗೆ ಭಾರತೀಯರು ಬಂದಿಳಿದಿದ್ದಾರೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯ ಬೇಕಾಗಿರುವುದರಿಂದ ಭಾರತ ಕಠಿಣ ಅಭ್ಯಾಸ ನಡೆಸಲು ಮೈದಾನ ಇಳಿಯುವಾಗ ವರುಣ ಅಡ್ಡಿ ಪಡಿಸಿದ್ದಾನೆ. ನೆಟ್ನಲ್ಲಿ ಪ್ರ್ಯಾಕ್ಟೀಸ್ ನಡೆಸಲು ಚೂರು ಕಾಲವಕಾಶ ನೀಡದ ಮಳೆರಾಯ ಬೆಂಬಿಡದೆ ಕಾಡುತ್ತಿದ್ದಾನೆ. ಹೀಗಾಗಿ ಶುಕ್ರವಾರದ ಅಭ್ಯಾಸ ಮಳೆಯಿಂದಾಗಿ ರದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ