ಇದೀಗ ಅಧಿಕೃತ; ಟೀಂ ಇಂಡಿಯಾ ಹೊಸ ಜೆರ್ಸಿ ಹೀಗಿದೆ ನೋಡಿ

ಜೂ. 30 ರಂದು ಭಾರತ-ಇಂಗ್ಲೆಂಡ್ ಮುಖಾಮುಖಿ ಆಗುತ್ತಿದ್ದು, ಇಲ್ಲಿ ಉಭಯ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಜೆರ್ಸಿಯೊಂದಿಗೆ ಕಣಕ್ಕಿಳಿಯಬೇಕಿದೆ.

Vinay Bhat | news18
Updated:June 28, 2019, 5:34 PM IST
ಇದೀಗ ಅಧಿಕೃತ; ಟೀಂ ಇಂಡಿಯಾ ಹೊಸ ಜೆರ್ಸಿ ಹೀಗಿದೆ ನೋಡಿ
ಟೀಂ ಇಂಡಿಯಾದ ಹೊಸ ಜೆರ್ಸಿ
Vinay Bhat | news18
Updated: June 28, 2019, 5:34 PM IST
ಟೀಂ ಇಂಡಿಯಾ ಆಟಗಾರರು ಜೂನ್​ 30 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ-ಕಂದು ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಟರ್​​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ICC) ನಿಯಮದ ಅನುಸಾರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ ಎರಡು ಬಣ್ಣಗಳ ಜೆರ್ಸಿಯನ್ನು ಬಳಸಿಕೊಳ್ಳಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಕೊಹ್ಲಿ ಪಡೆ ಬ್ಲೂ ಜೆರ್ಸಿ ಬದಲಿಗೆ ಹೊಸ ಉಡುಪಿನಲ್ಲಿ ಮಿಂಚಲು ರೆಡಿಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ಐಸಿಸಿಯ ಹೊಸ ನಿಯಮದ ಪ್ರಕಾರ ಎರಡು ತಂಡಗಳು ಒಂದೇ ಬಣ್ಣದ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವಂತಿಲ್ಲ. ಹಾಗಾಗಿ ಫುಟ್ಬಾಲ್‌ ಮಾದರಿಯಲ್ಲಿ 'ಹೋಮ್‌' ಮತ್ತು 'ಅವೇ' ಉಡುಪಿನ ನಿಯಮವನ್ನು ಕ್ರಿಕೆಟ್‌ಗೆ ಅಳವಡಿಸಲಾಗಿದೆ. ಇಲ್ಲಿ ಇಂಗ್ಲೆಂಡ್ ತಂಡವು ವಿಶ್ವಕಪ್ ಆತಿಥ್ಯವಹಿಸಿರುವುದರಿಂದ ಆಂಗ್ಲರಿಗೆ ಜೆರ್ಸಿ ಬದಲಿಸಬೇಕೆಂಬ ನಿಯಮ ಅನ್ವಯವಾಗುವುದಿಲ್ಲ.

Video: ತನ್ನನ್ನು ಔಟ್ ಮಾಡಿದ ವೇಗಿಯನ್ನು ವ್ಯಂಗ್ಯವಾಡಿ ಸಂಭ್ರಮಿಸಿದ ಮೊಹಮ್ಮದ್ ಶಮಿ: ವಿಡಿಯೋ ವೈರಲ್

Team-India-Jersey
ಟೀಂ ಇಂಡಿಯಾದ ಹೊಸ ಜೆರ್ಸಿ


ಜೂ. 30 ರಂದು ಭಾರತ-ಇಂಗ್ಲೆಂಡ್ ಮುಖಾಮುಖಿ ಆಗುತ್ತಿದ್ದು, ಇಲ್ಲಿ ಉಭಯ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಜೆರ್ಸಿಯೊಂದಿಗೆ ಕಣಕ್ಕಿಳಿಯಬೇಕಿದೆ. ಸದ್ಯ ಟೀಂ ಇಂಡಿಯಾ ಧರಿಸಲಿರುವ ಹೊಸ ಜೆರ್ಸಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ಉಡುಪಿನಲ್ಲಿ ಕೊಹ್ಲಿ ಪಡೆ ಗೆಲುವಿನ ನಾಗಾಲೋಟ ಮುಂದುವರೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...