Vinay BhatVinay Bhat
|
news18 Updated:May 25, 2019, 8:06 AM IST
ಭಾರತ vs ನ್ಯೂಜಿಲೆಂಡ್
- News18
- Last Updated:
May 25, 2019, 8:06 AM IST
ಬೆಂಗಳೂರು (ಮೇ. 24): ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ಗೆ ಎಲ್ಲ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿದೆ. ಮೇ 30 ರಂದು ಈ ಕ್ರಿಕೆಟ್ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮೊದಲು ಭಾರತ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಇಂದು ಟೀಂ ಇಂಡಿಯಾ ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ವಾರ್ಮ್ಅಪ್ ಪಂದ್ಯವೆಂದು ಕಡೆಗಣಿಸದೆ ಬಲಿಷ್ಠ ತಂಡವನ್ನೇ ಆಡಿಸುವ ಅಂದಾಜಿನಲ್ಲಿದ್ದಾರೆ ಕೊಹ್ಲಿ.
ಟೀಂ ಇಂಡಿಯಾಕ್ಕೆ ನಾಲ್ಕನೇ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದ್ದು ಅಭ್ಯಾಸ ಪಂದ್ಯದಲ್ಲಿ ಇದಕ್ಕೆ ಉತ್ತರ ಹುಡುಕ ಬೇಕಿದೆ. ನಾಲ್ಕನೇ ಸ್ಥಾನಿಯಾಗಿ ಕಣಕ್ಕಿಳಿಯಲು ಕೆ ಎಲ್ ರಾಹುಲ್, ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ತೀವ್ರ ಪೈಪೋಟಿಯಿದ್ದು, ಎರಡು ಅಭ್ಯಾಸ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದವರಿಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗಲಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕೊನೆಗೂ ಮೌನ ಮುರಿದ ರೋಹಿತ್ ಶರ್ಮಾ!
ಉಳಿದಂತೆ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಬಲ ತುಂಬಿದರೆ, ಮಧ್ಯಮ ಕ್ರಮಾಂಕದಲ್ಲಿ ಎಂ ಎಸ್ ಧೋನಿ, ಕೇದರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ಅಂದಾಜಿದೆ. ಜೊತೆಗೆ ರವೀಂದ್ರ ಜಡೇಜಾ ಕಣಕ್ಕಿಳಿದರೂ ಅಚ್ಚರಿಯಿಲ್ಲ.
ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ ಲಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಜುವೇಂದ್ರ ಚಹಾಲ್ ಜೊತೆ ವೇಗಿಗಳಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: VIDEO: ಆಂಡ್ರೆ ರಸೆಲ್ ಭಯಂಕರ ಬೌನ್ಸರ್: ವಿಶ್ವಕಪ್ನಿಂದ ಉಸ್ಮಾನ್ ಖ್ವಾಜಾ ಔಟ್?
ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಘಂಟೆಗೆ ಆರಂಭವಾಗಲಿದೆ.
First published:
May 24, 2019, 8:45 PM IST