ICC World Cup 2019: ಟೀಂ ಇಂಡಿಯಾ ವಿರುದ್ಧ ಸೋಲಿನ ಸೇಡು ತೀರಿಸಲು ಕಾಯುತ್ತಿದ್ದಾರೆ ದಕ್ಷಿಣ ಆಫ್ರಿಕಾ ವೇಗಿ

ಭಾರತ ತಂಡವು ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದಾಗ, ನಮ್ಮ ತಂಡದ ಪ್ರಮುಖರು ತಂಡದಿಂದ ಹೊರಗುಳಿದಿದ್ದರು.

zahir | news18
Updated:May 23, 2019, 11:29 AM IST
ICC World Cup 2019: ಟೀಂ ಇಂಡಿಯಾ ವಿರುದ್ಧ ಸೋಲಿನ ಸೇಡು ತೀರಿಸಲು ಕಾಯುತ್ತಿದ್ದಾರೆ ದಕ್ಷಿಣ ಆಫ್ರಿಕಾ ವೇಗಿ
@The Week
zahir | news18
Updated: May 23, 2019, 11:29 AM IST
ದಕ್ಷಿಣ ಆಫ್ರಿಕಾದ ಯುವ ವೇಗಿ ಲುಂಗಿ ಎನ್​ಗಿಡಿ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಭಾರತ ತಂಡವು ವಿಶ್ವಕಪ್​ ಅಭಿಯಾನವನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದ್ದು, ಇದೇ ಪಂದ್ಯವನ್ನು ಗೆಲ್ಲುವ ಮೂಲಕ ಹಳೆಯ ಲೆಕ್ಕ ಚುಕ್ತಾ ಮಾಡುವ ಸಕಲ ತಯಾರಿಯಲ್ಲಿದ್ದಾರೆ ಎನ್​ಗಿಡಿ.

2018 ರಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ತವರಿನಲ್ಲಿ 5-1 ಅಂತರದಿಂದ ಪರಾಭವಗೊಳಿಸಿತ್ತು. ಈ ಸೋಲಿನ ನೋವು ಇನ್ನು ನನ್ನ ಮನದಲ್ಲಿರುವುದಾಗಿ ತಿಳಿಸಿದ ಎನ್​ಗಿಡಿ, ಸೋಲಿನ ಕಹಿಯನ್ನು ಮರಳಿಸಲು ಇಚ್ಛಿಸುವುದಾಗಿ ತಿಳಿಸಿದ್ದಾರೆ.

ಭಾರತದ ವಿರುದ್ಧ ಮೊದಲ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ ಆಫ್ರಿಕಾ ವೇಗಿ, ನಾವು ಖಂಡಿತಾ ಟೀಂ ಇಂಡಿಯಾ ಜತೆ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಭಾರತೀಯ ಬಲಿಷ್ಠ ದಾಂಡಿಗರನ್ನು ಕಟ್ಟಿ ಹಾಕಿ ಜಯದ ಉತ್ತರ ನೀಡಲು ನಾನು ಉತ್ಸುಕನಾಗಿರುವೆ ಎಂದು ಎನ್​ಗಿಡಿ ಹೇಳಿದ್ದಾರೆ.

ಭಾರತ ತಂಡವು ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದಾಗ, ನಮ್ಮ ತಂಡದ ಪ್ರಮುಖರು ತಂಡದಿಂದ ಹೊರಗುಳಿದಿದ್ದರು. ಈಗ ನಮ್ಮ ತಂಡವು ಸಮತೋಲನದಿಂದ ಕೂಡಿದೆ. ಹಾಗೆಯೇ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವ ಎಲ್ಲಾ ಸಾಮರ್ಥ್ಯ ತಂಡಕ್ಕಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ವರ್ಲ್ಡ್​ಕಪ್ ಗೆಲ್ಲುವ ಹಲವು ವರ್ಷಗಳ ಕನಸನ್ನು ಈ ಬಾರಿ ನನಸು ಮಾಡಲು ಶ್ರಕ್ತಿಮೀರಿ ಶ್ರಮಿಸುವುದಾಗಿ ಲುಂಗಿ ಎನ್​ಗಿಡಿ ತಿಳಿಸಿದ್ದಾರೆ.

ಕೇವಲ 18 ಏಕದಿನ ಪಂದ್ಯಗಳನ್ನು ಆಡಿರುವ ಲುಂಗಿ ಎನ್​ಗಿಡಿ ಈಗಾಗಲೇ 34 ವಿಕೆಟ್​ ಕಬಳಿಸಿ ಮಿಂಚು ಹರಿಸಿದ್ದಾರೆ. 140 ರಿಂದ 150 ವೇಗದಲ್ಲಿ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಎನ್​ಗಿಡಿ, ಈ ಹಿಂದೆ ಭಾರತದ ವಿರುದ್ಧದ ತನ್ನ ಚೊಚ್ಚಲ ಟೆಸ್ಟ್​ಪಂದ್ಯದಲ್ಲಿ 39 ರನ್​ ನೀಡಿ 6 ವಿಕೆಟ್ ಉರುಳಿಸಿದ್ದರು.



ಈಗಾಗಲೇ ಅತ್ಯುತ್ತಮ ಫಾರ್ಮ್​ನಲ್ಲಿರುವ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಹಾಗೂ ಲುಂಗಿ ಎನ್​ಗಿಡಿ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಸಂಪೂರ್ಣ ನಿಯಂತ್ರಿಸಿ, ಹಳೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಜೂನ್​.5ರಂದು ಉತ್ತರ ಸಿಗಲಿದೆ.



ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...