Cricket World Cup 2019, ENG vs PAK: ಪಾಕಿಸ್ತಾನಕ್ಕೆ ಇಂದು ಬಲಿಷ್ಠ ಆಂಗ್ಲರೊಂದಿಗೆ ಅಗ್ನಿಪರೀಕ್ಷೆ!

Vinay Bhat | news18
Updated:June 3, 2019, 7:01 AM IST
Cricket World Cup 2019, ENG vs PAK: ಪಾಕಿಸ್ತಾನಕ್ಕೆ ಇಂದು ಬಲಿಷ್ಠ ಆಂಗ್ಲರೊಂದಿಗೆ ಅಗ್ನಿಪರೀಕ್ಷೆ!
ಪಾಕಿಸ್ತಾನ ತಂಡದ ಆಟಗಾರರು
  • News18
  • Last Updated: June 3, 2019, 7:01 AM IST
  • Share this:
ಬೆಂಗಳೂರು (ಜೂ. 03): ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲುಕಂಡಿರುವ ಪಾಕಿಸ್ತಾನ ಇಂದು ಆತಿಥೇಯ ಇಂಗ್ಲೆಂಡ್​ ವಿರುದ್ಧ ಆರನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ.

ನ್ಯಾಟಿಂಗ್​ಹ್ಯಾಮ್​​ನ ಟ್ರೆಂಟ್​ಬ್ರಿಡ್ಜ್​ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಪಾಕ್​ಗೆ ಗೆಲುವು ಅನಿವಾರ್ಯ ಎಂಬಂತಾದರೆ, ಇಂಗ್ಲೆಂಡ್ ಗೆಲ್ಲುವ ಫೇವರಿಟ್ ತಂಡವಾಗಿದೆ. ವಿಶ್ವಕಪ್​​ಗೂ ಮುನ್ನ ಇಂಗ್ಲೆಂಡ್​ ವಿರುದ್ಧ ಸರಣಿ ಆಡಿದ್ದ ಪಾಕಿಸ್ತಾನ, 4-0 ಅಂತರದಲ್ಲಿ ಆಂಗ್ಲರಿಗೆ ಶರಣಾಗಿತ್ತು. ಹೀಗಾಗಿ ಪಾಕ್​ ಯಾವರೀತಿ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಬ್ಯಾಟಿಂಗ್-ಬೌಲಿಂಗ್​ನಲ್ಲಿ ಬಲಿಷ್ಠವಾಗಿರುವ ಇಂಗ್ಲೆಂಡ್​ ಉದ್ಘಾಟನಾ ಪಂದ್ಯದಲ್ಲೇ ಆಫ್ರಿಕಾಗೆ ಸೋಲುಣಿಸಿತ್ತು. ಬ್ಯಾಟ್ಸ್​ಮನ್​ಗಳಂತು ಬೊಂಬಾಟ್ ಫಾರ್ಮ್​ನಲ್ಲಿದ್ದು, ಬೌಲರ್​ಗಳು ಕೂಡ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲು ಸ್ಪಿನ್ನರ್ ಆದಿಲ್ ರಶೀದ್ ಎದುರಾಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ.

ಇತ್ತ ವೆಸ್ಟ್​ ಇಂಡೀಸ್ ವಿರುದ್ಧ ಕೇವಲ 105 ರನ್​ಗೆ ಆಲೌಟ್ ಆಗಿದ್ದ ಪಾಕ್ ಸಾಕಷ್ಟು ಟೇಕೆಗಳಿಗೆ ಗುರಿಯಾಗಿತ್ತು. ಇದಕ್ಕೆ ಇಂದಿನ ಪಂದ್ಯದ ಮೂಲಕ ಉತ್ತರ ನೀಡುವ ವಿಶ್ವಾಸದಲ್ಲಿದೆ. ಬೌಲಿಂಗ್​ನಲ್ಲಿ ಹೆಚ್ಚು ಬಲಿಷ್ಠವಾಗಿರುವ ಪಾಕ್​ಗೆ ಬ್ಯಾಟ್ಸ್​ಮನ್​ಗಳು ಕೂಡ ಸಾತ್ ನೀಡಬೇಕಿದೆ. ಕಳೆದ ಪಂದ್ಯದಲ್ಲಿ ಅನುಭವಿ ಶೋಯೆಬ್ ಮಲಿಕ್​ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಒಟ್ಟಾರೆ ಮೊದಲ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ, ಇಂಗ್ಲೆಂಡ್ ತಂಡವನ್ನ ಮಣಿಸಿ ಗೆಲುವಿನ ಹಳಿಗೆ ಮರಳಲು ಪ್ಲ್ಯಾನ್​ ಮಾಡುತ್ತಿದೆ. ಇತ್ತ ಮೊದಲ ಪಂದ್ಯದಲ್ಲೇ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನ ಬಗ್ಗು ಬಡಿದಿರುವ ಆಂಗ್ಲ ಪಡೆ, ಪಾಕಿಸ್ತಾನ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳು ವಿಶ್ವಕಪ್​ನಲ್ಲಿ ಈವರೆಗೆ 9 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಪಾಕ್ ಹಾಗೂ ಇಂಗ್ಲೆಂಡ್ ತಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದರೆ, ಒಂದು ಪಂದ್ಯ ಫಲಿತಾಂಶ ಕಾಣದೆ ಅಂತ್ಯಕಂಡಿದೆ.

ಸಂಭಾವ್ಯ ತಂಡ:ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್​ಸ್ಟೋ, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್​, ಜಾಸ್ ಬಟ್ಲರ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್​, ಮಾರ್ಕ್​ ವುಡ್, ಜೋಫ್ರಾ ಆರ್ಚೆರ್, ಆದಿಲ್ ರಶೀದ್.

ಪಾಕಿಸ್ತಾನ: ಇಮಾಮ್ ಉಲ್ ಹಖ್, ಫಕರ್ ಜಮಾನ್, ಬಾಬರ್ ಅಜಮ್, ಹ್ಯಾರಿಸ್ ಸೊಹೈಲ್, ಸರ್ಫರಾಜ್ ಅಹ್ಮದ್ (ನಾಯಕ), ಮೊಹಮ್ಮದ್ ಹಫೀಜ್, ಇಮಾದ್ ವಾಸೀಮ್, ಮೊಹಮ್ಮದ್ ಹಸ್​ನೈನ್, ಶಬಾದ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ಅಮಿರ್.

ಸ್ಥಳ: ಟ್ರೆಂಟ್ ಬ್ರಿಡ್ಜ್​​, ನ್ಯಾಟಿಂಗ್​ಹ್ಯಾಮ್

ಸಮಯ: ಮಧ್ಯಾಹ್ನ 3 ಗಂಟೆಗೆ
First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ