ICC World Cup 2019 | ವಿಶ್ವಕಪ್​​ನಲ್ಲಿಂದು ಡಬಲ್ ಧಮಾಕ; ಇಂಗ್ಲೆಂಡ್-ಬಾಂಗ್ಲಾ ಪಂದ್ಯದ ಮೇಲೆ ಎಲ್ಲರ ಕಣ್ಣು

ICC World Cup 2019: ನ್ಯೂಜಿಲೆಂಡ್ ವಿರುದ್ಧ ಸೋತಿರುವ ಬಾಂಗ್ಲಾ ಹುಲಿಗಳು ಕಮ್​ಬ್ಯಾಕ್ ಮಾಡಲು ಕಾತುರರಾಗಿದ್ದಾರೆ. ಬೌಲಿಂಗ್​ನಲ್ಲಿ ಸಂಘಟಿತ ಹೋರಾಟ ನೀಡುತ್ತಿರುವ ಬಾಂಗ್ಲಾ ಬ್ಯಾಟಿಂಗ್​ನಲ್ಲಿ ಎಡವುತ್ತಿದೆ.

Vinay Bhat | news18
Updated:June 8, 2019, 7:33 AM IST
ICC World Cup 2019 | ವಿಶ್ವಕಪ್​​ನಲ್ಲಿಂದು ಡಬಲ್ ಧಮಾಕ; ಇಂಗ್ಲೆಂಡ್-ಬಾಂಗ್ಲಾ ಪಂದ್ಯದ ಮೇಲೆ ಎಲ್ಲರ ಕಣ್ಣು
ಇಂಗ್ಲೆಂಡ್ ತಂಡದ ಆಟಗಾರರು
  • News18
  • Last Updated: June 8, 2019, 7:33 AM IST
  • Share this:
ಬೆಂಗಳೂರು (ಜೂ. 08): ವಿಶ್ವಕಪ್​​ನಲ್ಲಿಂದು ಎರಡು ಪ್ರಮುಖ ಪಂದ್ಯ ನಡೆಯಲಿದ್ದು, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಮುಖಾಮುಖಿ ಆದರೆ, ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಠ ನ್ಯೂಜಿಲೆಂಡ್​ಗೆ ಸವಾಲು ಎಸೆಯಲಿದೆ.

ಕಾರ್ಡಿಫ್​ನಲ್ಲಿ ನಡೆಯಲಿರುವ ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಜೊತೆ ಬಾಂಗ್ಲಾಕ್ಕೂ ಮುಖ್ಯವಾಗಿದೆ. ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋಲುಂಡಿದೆ. ಪಾಕಿಸ್ತಾನ ವಿರುದ್ಧ ಕಠಿಣ ಹೋರಾಟ ನಡೆಸಿದರಾದರು ಆಂಗ್ಲರಿಗೆ ಗೆಲುವು ಒಲಿಯಲಿಲ್ಲ. ಕೊನೆ ಹಂತದಲ್ಲಿ ಬ್ಯಾಟ್ಸ್​ಮನ್​ಗಳು ಕೈಕೊಟ್ಟರು. ಬೌಲಿಂಗ್​ನಲ್ಲಿ ಇಂಗ್ಲೆಂಡ್ ವೀಕ್ ಆಗಿದ್ದು ಯಾರುಕೂಡ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.

ಇತ್ತ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಬಾಂಗ್ಲಾ ಹುಲಿಗಳು ಕಮ್​ಬ್ಯಾಕ್ ಮಾಡಲು ಕಾತುರರಾಗಿದ್ದಾರೆ. ಬೌಲಿಂಗ್​ನಲ್ಲಿ ಸಂಘಟಿತ ಹೋರಾಟ ನೀಡುತ್ತಿರುವ ಬಾಂಗ್ಲಾ ಬ್ಯಾಟಿಂಗ್​ನಲ್ಲಿ ಎಡವುತ್ತಿದೆ. ಶಕಿಬ್ ಅಲ್ ಹಸನ್ ಆಲ್ರೌಂಡರ್ ಆಟ ತಂಡಕ್ಕೆ ನೆರವಾಗುತ್ತಿದೆ ಬಿಟ್ಟರೆ, ಉಳಿದ ಬ್ಯಾಟ್ಸ್​ಮನ್​​ಗಳು ಪುಟಿದೇಳಬೇಕಿದೆ.

ಯೋಧರ ಬಲಿದಾನ ಚಿಹ್ನೆ ಬಳಕೆಗೆ ಧೋನಿಗಿಲ್ಲ ಅವಕಾಶ; ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ

ಇತ್ತ ಆಡಿರುವ ಎರಡೂ ಪಂದ್ಯ ಸೋತಿರುವ ಅಫ್ಘಾನಿಸ್ತಾನ ಎರಡೂ ಪಂದ್ಯ ಗೆದ್ದಿರುವ ಟೇಬಲ್ ಟಾಪರ್ ನ್ಯೂಜಿಲೆಂಡ್ ವಿರುದ್ಧ ಅಗ್ನಿಪರೀಕ್ಷೆ ಎದುರಿಸಲಿದೆ. ವಿಕೆಟ್ ಕೀಪರ್ ಸ್ಫೋಟಕ ಬ್ಯಾಟ್ಸ್​ಮನ್​ ಮೊಹಮ್ಮದ್ ಶಹ್ಜಾದ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಅಫ್ಘಾನ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲದೆ ಅಭ್ಯಾಸ ಪಂದ್ಯದಲ್ಲಿ ತೋರಿದ ಪ್ರದರ್ಶನ ಟೂರ್ನಿ ಆರಂಭವಾದ ಬಳಿಕ ಮರೆತೆ ಹೋದಂತಿದೆ. ಕಿವೀಸ್ ವಿರುದ್ಧ ಪಂದ್ಯವಾಗಿರುವುದರಿಂದ ಅಫ್ಘಾನ್ನರು ಗೇಮ್ ಪ್ಲ್ಯಾನ್​ ಮಾಡಿ ಕಣಕ್ಕಿಳಿಯಬೇಕಿದೆ.

ನ್ಯೂಜಿಲೆಂಡ್ ಆಡಿದ ಎರಡೂ ಪಂದ್ಯವನ್ನು ಗೆದ್ದು ಬಲಿಷ್ಠವಾಗಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚುತ್ತಿರುವ ಕೇನ್ ಪಡೆಗೆ ಅಫ್ಘಾನ್ ತಂಡ ದೊಡ್ಡ ಸವಾಲೇನು ಅಲ್ಲ. ಆದರೂ ಹಗುರವಾಗಿ ಪರಿಗಣಿಸಿದಿರಲು ನಿರ್ಧರಿಸಿದೆ. ತನ್ನ ಸ್ವಿಂಗ್ ದಾಳಿಯ ಮೂಲಕವೇ ಎದುರಾಳಿಗರ ನಿದ್ದೆಕದ್ದಿರುವ ಕಿವೀಸ್ ವೇಗಿಗಳೇ ಪಂದ್ಯದ ಪ್ರಮುಖ ಆಕರ್ಷಣೆ​. ರಾಸ್ ಟೇಲರ್, ಗಪ್ಟಿಲ್,  ಕಾಲಿನ್ ಮುನ್ರೋ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮಧ್ಯಮ ಕ್ರಮಾಂಕ ತಂಡಕ್ಕೆ ಪ್ರತಿ ಬಾರಿ ನೆರವಾಗುತ್ತಿದೆ.

ಒಟ್ಟಾರೆ ಇಂದು ನಡೆಯಲಿರುವ ಎರಡೂ ಪಂದ್ಯ ಎಲ್ಲಾ ತಂಡಗಳಿಗೆ ಮುಖ್ಯವಾಗಿದೆ. ಹೀಗಾಗಿ ವಿಶ್ವಕಪ್​ನಲ್ಲಿಂದು ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading