ICC World Cup 2019: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 300 ರನ್​ಗಳ ಗಡಿದಾಟುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಪಾಕ್​ ವಿರುದ್ಧ ಏಕದಿನ ಸರಣಿಯಲ್ಲಿ ಆಂಗ್ಲರು ಎರಡು ಬಾರಿ 350ಕ್ಕಿಂತಲೂ ಹೆಚ್ಚಿನ ರನ್​ ಬಾರಿಸಿರುವುದು ಇಲ್ಲಿ ಗಮನಿಸಬಹುದು.

zahir | news18
Updated:May 23, 2019, 11:30 AM IST
ICC World Cup 2019: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?
@Tune.pk
zahir | news18
Updated: May 23, 2019, 11:30 AM IST
ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್​ 2019 ಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ವಿಶ್ವಕಪ್​ ಪಂದ್ಯಗಳು ಬ್ಯಾಟಿಂಗ್​ಗೆ ಅನುಕೂಲವಾಗುವಂತಹ ಪಿಚ್​ಗಳಲ್ಲಿ ನಡೆಯಲಿದೆ ಎಂಬುದರ ಸಣ್ಣ ಸುಳಿವನ್ನು ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್ ಬಿಟ್ಟುಕೊಟ್ಟಿದೆ.

ವಿಶ್ವಕಪ್​ಗಾಗಿ ಸಿದ್ಧಪಡಿಸಲಾಗಿರುವ ಸ್ಕೋರ್​ಕಾರ್ಡ್​ ಸಂಖ್ಯೆಗಳನ್ನು ಈ ಬಾರಿ ಏರಿಸಿದ್ದು, ಸ್ಕೋರ್ ಪಟ್ಟಿಯನ್ನು 500ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಏಕದಿನ ಕ್ರಿಕೆಟ್​ನಲ್ಲಿ 400ವರೆಗಿನ ಸ್ಕೋರ್​ ಕಾರ್ಡ್​ ಅನ್ನು ಬಳಸಲಾಗುತ್ತಿತ್ತು.

ಆದರೆ ಇತ್ತೀಚೆಗೆ ನಡೆದ ಇಸಿಬಿ ಸಭೆಯಲ್ಲಿ ಸ್ಕೋರ್​ಬೋರ್ಡ್​ ಸಂಖ್ಯೆಯನ್ನು 500ಕ್ಕೆ ಏರಿಸಲು ತೀರ್ಮಾನಿಸಲಾಗಿದೆ. ಇದರಿಂದ 2019ರ ವರ್ಲ್ಡ್​ಕಪ್​ನಲ್ಲಿ ರನ್​ಗಳ ಸುರಿಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ಬ್ಯಾಟಿಂಗ್ ಸ್ನೇಹಿ ಪಿಚ್​ಗಳನ್ನು ಸಿದ್ಧಪಡಿಸಿದ್ದು, ಹೀಗಾಗಿಯೇ ಸ್ಕೋರ್​ಕಾರ್ಡ್​ನ್ನು ವಿಸ್ತರಿಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 300 ರನ್​ಗಳ ಗಡಿದಾಟುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಪಾಕ್​ ವಿರುದ್ಧ ಏಕದಿನ ಸರಣಿಯಲ್ಲಿ ಆಂಗ್ಲರು ಎರಡು ಬಾರಿ 350ಕ್ಕಿಂತಲೂ ಹೆಚ್ಚಿನ ರನ್​ ಬಾರಿಸಿರುವುದು ಇಲ್ಲಿ ಗಮನಿಸಬಹುದು. ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 373 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕ್ 361 ರನ್​ ಗಳಿಸಿ ಅಚ್ಚರಿ ಮೂಡಿಸಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಪಾಕ್ ನೀಡಿದ 358 ಕಠಿಣ ಗುರಿಯನ್ನು ಇಂಗ್ಲೆಂಡ್ ಸುಲಭವಾಗಿ ಚೇಸ್ ಮಾಡಿದ್ದರು.2016 ರಲ್ಲಿ ತವರಿನಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ಆಟಗಾರರು ಪಾಕ್ ವಿರುದ್ದ ನಿಗದಿತ 50 ಓವರ್​ನಲ್ಲಿ 444 ರನ್​ ಸಿಡಿಸಿದ್ದರು. ಕಳೆದ ವರ್ಷ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ವಿರುದ್ಧ ಟ್ರೆಂಟ್ ಬಿಡ್ಜ್​ನಲ್ಲಿ 6 ವಿಕೆಟ್‌ಗೆ 481 ರನ್‌ ಗಳಿಸಿ ವಿಶ್ವದಾಖಲೆ ನಿರ್ಮಿಸಿತ್ತು. ಇದೆಲ್ಲವನ್ನು ಗಮನಿಸಿದರೆ ಈ ಬಾರಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ 500 ರನ್ ದಾಖಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ