ವಿಶ್ವಕಪ್ ಬಗ್ಗೆ ಅಭಿಮಾನಿಗಳಲ್ಲಿ ಬೇಸರ; ಶೀಘ್ರವೇ ಬದಲಾಗಲಿದೆ ಟೂರ್ನಿಯ ನಿಯಮಾವಳಿ?

ಇನ್ನು ವಿಶ್ವಕಪ್​ ಫೈನಲ್​ ರೋಚಕವಾಗಿ ಅಂತ್ಯಕಂಡಿತ್ತು. ಆರಂಭದಲ್ಲಿ ಮ್ಯಾಚ್​ ಟೈ ಆದ್ದರಿಂದ ಸೂಪರ್​ ಓವರ್​ ಆಡಿಸಲಾಗಿತ್ತು. ನಂತರ ಸೂಪರ್​ ಓವರ್ ಕೂಡ ಟೈ ಆಗಿತ್ತು. ಆಗ ಇಂಗ್ಲೆಂಡ್​ ತಂಡವನ್ನು ವಿಜಯೀ ಎಂದು ಘೋಷಿಸಲಾಯಿತು.

Rajesh Duggumane | news18
Updated:July 16, 2019, 11:34 AM IST
ವಿಶ್ವಕಪ್ ಬಗ್ಗೆ ಅಭಿಮಾನಿಗಳಲ್ಲಿ ಬೇಸರ; ಶೀಘ್ರವೇ ಬದಲಾಗಲಿದೆ ಟೂರ್ನಿಯ ನಿಯಮಾವಳಿ?
ಸಾಂದರ್ಭಿಕ ಚಿತ್ರ
  • News18
  • Last Updated: July 16, 2019, 11:34 AM IST
  • Share this:
ಈ ಬಾರಿಯ ಕ್ರಿಕೆಟ್​ ವಿಶ್ವಕಪ್​ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಅಂಪೈರ್​ಗಳ ಕೆಟ್ಟ ತೀರ್ಮಾನ, ವಿಶ್ವಕಪ್​ ನಿಯಮಗಳಿಂದ ಎದುರಾದ ಗೊಂದಲಗಳು ಒಂದೆರಡಲ್ಲ. ಹಾಗಾಗಿ, ಈ ಬಾರಿಯ ವಿಶ್ವಕಪ್​ ಬಗ್ಗೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ.

ಭಾರತ-ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಒಂದು ಇನ್ನಿಂಗ್​ ಆಗುತ್ತಿದ್ದಂತೆ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಪಂದ್ಯವನ್ನು ಮುಂದೂಡಲಾಗಿತ್ತು. ಈ ವೇಳೆ ಭಾರತ ಸೋಲು ಕಂಡಿತ್ತು. 1999ಕ್ಕೂ ಮೊದಲು ವಿಶ್ವಕಪ್​ ಸೆಮಿಫೈನಲ್​ಗೆ ಮಳೆ ಅಡ್ಡಿ ಆದರೆ, ಲೀಗ್​ ಹಂತದ ಪಂದ್ಯದಲ್ಲಿ ಯಾರು ಹೆಚ್ಚು ಅಂಕ ಗಳಿಸಿರುತ್ತಾರೋ ಅವರು ಫೈನಲ್​ ಪ್ರವೇಶಿಸಬಹುದಿತ್ತು. ಆದರೆ, 1999ರಲ್ಲಿ ವಿಶ್ವಕಪ್​ ನಿಯಮದಲ್ಲಿ ಬದಲಾವಣೆ ಮಾಡಿತ್ತು. ಈಗ ಅದು ಟೀಂ ಇಂಡಿಯಾಗೆ ಮುಳುವಾಗಿದೆ.

ಇನ್ನು ವಿಶ್ವಕಪ್​ ಫೈನಲ್​ ರೋಚಕವಾಗಿ ಅಂತ್ಯಕಂಡಿತ್ತು. ಆರಂಭದಲ್ಲಿ ಇಂಗ್ಲೆಂಡ್​-ನ್ಯೂಜಿಲೆಂಡ್ ಮ್ಯಾಚ್​ ಟೈ ಆದ್ದರಿಂದ ಸೂಪರ್​ ಓವರ್​ ಆಡಿಸಲಾಗಿತ್ತು. ನಂತರ ಸೂಪರ್​ ಓವರ್ ಕೂಡ ಟೈ ಆಗಿತ್ತು. ಹಾಗಾಗಿ ಸೂಪರ್​ ಓವರ್​ನಲ್ಲಿ ಹೆಚ್ಚು ಬೌಂಡರಿ ಹೊಡೆದ ತಂಡದ  ಆಧಾರದ ಮೇಲೆ ಇಂಗ್ಲೆಂಡ್​ ತಂಡ ವಿಜಯೀ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ಟೀಂ ಇಂಡಿಯಾ ಸಿಬ್ಬಂದಿಗಳ ನೇಮಕಕ್ಕೆ ಮುಂದಾದ ಬಿಸಿಸಿಐ: ರವಿ ಶಾಸ್ತ್ರಿ ಕೋಚ್ ಸ್ಥಾನಕ್ಕೆ ಕುತ್ತು?

ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್​-ನ್ಯೂಜಿಲೆಂಡ್​ ಎರಡೂ ತಂಡಗಳು ಸರಿಯಾದ ರನ್​ ಕಲೆ ಹಾಕಿವೆ. ಹೀಗಿರುವಾಗ ಯಾರು ಹೆಚ್ಚು ಬೌಂಡರಿ ಹೊಡೆದಿದ್ದಾರೆ ಎನ್ನುವ ಆಧಾರದ ಮೇಲೆ ಗೆಲುವನ್ನು ಘೋಷಿಸುವುದು ಎಷ್ಟು ಸರಿ ಎಂಬುದು ನೆಟ್ಟಿಗರ ಪ್ರಶ್ನೆ. ಇನ್ನಾದರೂ ವಿಶ್ವಕಪ್​ ಮಂಡಳಿ ಎಚ್ಚೆತ್ತುಕೊಂಡು ನಿಯಮ ಬದಲಿಸಲಿ ಎಂದು ಕೆಲವರು ಕಿವಿಮಾತು ಹೇಳಿದ್ದಾರೆ.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading