BAN vs SA: ಗೆಲುವಿನ ಲಯಕ್ಕೆ ಮರಳಲು ಕಾದಿವೆ ಹರಿಣಗಳು; ವಿಶ್ವಕಪ್​ನಲ್ಲಿಂದು ದಕ್ಷಿಣ ಆಫ್ರಿಕಾಗೆ ಬಾಂಗ್ಲಾ ಹುಲಿಗಳ ಸವಾಲ್!

CWC 2019: ಬಾಂಗ್ಲಾದೇಶ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮೊದಲ ಪಂದ್ಯವಾಗಿರುವುದರಿಂದ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯುತ್ತಿದೆ.

Vinay Bhat | news18
Updated:June 2, 2019, 7:33 AM IST
BAN vs SA: ಗೆಲುವಿನ ಲಯಕ್ಕೆ ಮರಳಲು ಕಾದಿವೆ ಹರಿಣಗಳು; ವಿಶ್ವಕಪ್​ನಲ್ಲಿಂದು ದಕ್ಷಿಣ ಆಫ್ರಿಕಾಗೆ ಬಾಂಗ್ಲಾ ಹುಲಿಗಳ ಸವಾಲ್!
ಬಾಂಗ್ಲಾದೇಶ ಹಾಗೂ ದ. ಆಫ್ರಿಕಾ ತಂಡದ ನಾಯಕ
Vinay Bhat | news18
Updated: June 2, 2019, 7:33 AM IST
ಬೆಂಗಳೂರು (ಜೂ. 02): ವಿಶ್ವಕಪ್​​ನ ಇಂದಿನ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡ ಮುಖಾಮುಖಿ ಆಗುತ್ತಿವೆ. ಹರಿಣಗಳಿಗೆ ಇದು ಎರಡನೇ ಪಂದ್ಯವಾದರೆ ಬಾಂಗ್ಲಾ ಹುಲಿಗಳಿಗೆ ಇದು ಮೊದಲ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವಿಶ್ವಕಪ್ ಅಧ್ಯಾಯ ಆರಂಭಿಸುವ ಅಂದಾಜಿನಲ್ಲಿದೆ.

ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿರುವ ಡುಪ್ಲೆಸಿಸ್ ಪಡೆಗೆ ಈ ಪಂದ್ಯ ಮುಖ್ಯವಾಗಿದ್ದು ಗೆಲುವಿನ ಲಯಕ್ಕೆ ಮರಳಬೇಕಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯದ ಜೊತೆ ಬೌಲಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿದ್ದ ಆಫ್ರಿಕಾ ಹಿಂದಿನ ತಪ್ಪನ್ನ ಸರಿ ಪಡಿಸಿಕೊಳ್ಳಬೇಕಿದೆ. ಕ್ವಿಂಟನ್ ಡಿಕಾಕ್ ಬಿಟ್ಟರೆ ಮತ್ಯಾವ ಆಟಗಾರರು ಹೇಳುಕೊಳ್ಳುವಂತಹ ಫಾರ್ಮ್​ನಲ್ಲಿಲ್ಲ. ಬೌಲರ್​ಗಳು ಕೂಡ ಮಂಕಾಗಿರುವುದು ತಂಡಕ್ಕೆ ತಲೆನೋವಾಗಿದೆ. ಡುಪ್ಲೆಸಿಸ್ ಮೇಲೆ ಸಾಕಷ್ಟು ನಂಬಿಕೆಯಿದ್ದು ತಮ್ಮ ನೈಜ್ಯ ಆಟ ಪ್ರದರ್ಶಿಸಿಬೇಕಿದೆ.

ಇತ್ತ ಬಾಂಗ್ಲಾದೇಶ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮೊದಲ ಪಂದ್ಯವಾಗಿರುವುದರಿಂದ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಶಕಿಬ್ ಅಲ್ ಹಸನ್, ಮುಷ್ಫೀಕರ್ ರಹಿಮ್, ನಾಯಕ ಮುಶ್ರಫೆ ಮೊರ್ತಾಜಾ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರಿದ್ದು ಅನುಭವಿಗಳಿದ್ದಾರೆ. ಉಭಯ ತಂಡಗಳು ಈವರೆಗೆ ವಿಶ್ವಕಪ್​ನಲ್ಲಿ ಮೂರು ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಆಫ್ರಿಕಾ ಎರಡು ಹಾಗೂ ಬಾಂಗ್ಲಾ ಒಂದು ಪಂದ್ಯ ಗೆದ್ದ ಇತಿಹಾಸವಿದೆ.

ಸಂಭಾವ್ಯ ತಂಡಗಳು:

ದ. ಆಫ್ರಿಕಾ: ಕ್ವಿಂಟನ್ ಡಿಕಾಕ್, ಆ್ಯಡೆನ್ ಮರ್ಕ್ರಮ್, ಫಾಫ್ ಡುಪ್ಲೆಸಿಸ್ (ನಾಯಕ), ಡೇವಿಡ್ ಮಿಲ್ಲರ್, ರಾಸಿ ವನ್​ಡರ್​​ ಡಸ್ಸೆನ್, ಜೆಪಿ ಡುಮಿನಿ, ಕ್ರಿಸ್ ಮೊರೀಸ್, ಆ್ಯಂಡಿಲ್ ಫೆಹ್ಲುಕ್ವಾಯೊ, ಕಗಿಸೊ ರಬಾಡ, ಲುಂಗಿ ಎನ್​ಗಿಡಿ, ಇಮ್ರಾನ್ ತಾಹಿರ್.

ಬಾಂಗ್ಲಾದೇಶ: ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಷ್ಫೀಕರ್ ರಹಿಮ್, ಮೊಹಮ್ಮದುಲ್ಲ, ಲಿಟನ್ ದಾಸ್, ಸಬಿರ್ ರೆಹ್ಮಾನ್, ಮುಶ್ರಫೆ ಮೊರ್ತಾಜಾ (ನಾಯಕ), ಮೆಹದಿ ಹಸನ್, ಮುಸ್ತಫಿಜುರ್ ರೆಹ್ಮಾನ್, ರುಬೆಲ್ ಹೊಸೈನ್.

ಪಂದ್ಯ ಆರಂಭ: 3PM

ಸ್ಥಳ: ಓವಲ್, ಲಂಡನ್

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...