ICC World Cup 2019: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ 3 ವಿಂಡೀಸ್ ಆಟಗಾರರು ಮೀಸಲು ತಂಡಕ್ಕೆ ಆಯ್ಕೆ

ICC Cricket World Cup 2019: ವೆಸ್ಟ್​ ಇಂಡೀಸ್ ಪರವಾಗಿ 2016 ರಲ್ಲಿ ಕೊನೆಯ ಏಕದಿನ ಪಂದ್ಯವಾಡಿದ ಪೊಲಾರ್ಡ್​ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸಿದ್ದರು.

zahir | news18
Updated:May 23, 2019, 11:29 AM IST
ICC World Cup 2019: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ 3 ವಿಂಡೀಸ್ ಆಟಗಾರರು ಮೀಸಲು ತಂಡಕ್ಕೆ ಆಯ್ಕೆ
@ESPNcricinfo.com
zahir | news18
Updated: May 23, 2019, 11:29 AM IST
ಐಸಿಸಿ ವಿಶ್ವಕಪ್​ಗಾಗಿ ವೆಸ್ಟ್​ ಇಂಡೀಸ್ ತಂಡ ಭರ್ಜರಿ ತಯಾರಿಯಲ್ಲಿದೆ. ಈ ಬಾರಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿರುವ ವಿಂಡೀಸ್ ಕ್ರಿಕೆಟ್ ಆಡಳಿತ ಮಂಡಳಿ ಇದೀಗ ಮೀಸಲು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಡ್ವೇನ್ ಬ್ರಾವೊ ಅವರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಇಬ್ಬರು ಆಟಗಾರರ ಐಪಿಎಲ್​​ ಫರ್ಫಾಮೆನ್ಸ್​ ಎಂದು ಹೇಳಲಾಗಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಪರವಾಗಿ ಕಣಕ್ಕಿಳಿದಿದ್ದ ಕೀರನ್ ಪೊಲಾರ್ಡ್​ ಅದ್ಭುತ ಪ್ರದರ್ಶನ ನೀಡಿದ್ದರು. ಹಾಗೆಯೇ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ ಬ್ರಾವೊ ತನ್ನ ಆಲ್​ರೌಂಡರ್​ ಆಟವನ್ನು ಸೂಪರ್​ ಕಿಂಗ್ಸ್​ ತಂಡಕ್ಕೆ ಕಾಣಿಕೆಯಾಗಿ ನೀಡಿದ್ದರು.

ವೆಸ್ಟ್​ ಇಂಡೀಸ್ ಪರವಾಗಿ 2016 ರಲ್ಲಿ ಕೊನೆಯ ಏಕದಿನ ಪಂದ್ಯವಾಡಿದ ಪೊಲಾರ್ಡ್​ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸಿದ್ದರು. 16 ಪಂದ್ಯಗಳಲ್ಲಿ 156.74 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಪೊಲಾರ್ಡ್​ 279 ರನ್​ಗಳನ್ನು ಬಾರಿಸಿದ್ದರು. ಅದರಲ್ಲೂ ಕಿಂಗ್ಸ್​ ಇಲೆವೆನ್ ವಿರುದ್ಧ ಸ್ಪೋಟಕ 83 ರನ್​ ಬಾರಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ 12 ಪಂದ್ಯಗಳಾಡಿದ ಬ್ರಾವೊ 11 ವಿಕೆಟ್ ಉರುಳಿಸಿ ಮಿಂಚಿದ್ದರು. ಇದಲ್ಲದೆ 80 ರನ್​ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು.

ದೆಹಲಿ ಕ್ಯಾಲಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಕೀಮೊ ಪೌಲ್ ಸಹ ಈ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ತಂಡದಲ್ಲಿರುವ ಆಟಗಾರರು ಗಾಯಗೊಂಡರೆ ಅಥವಾ ಬದಲಾವಣೆಗಾಗಿ ಈ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವೆಸ್ಟ್​ ಇಂಡೀಸ್​ ತಂಡವು ವಿಶ್ವ ಕಪ್ ಅಭಿಯಾನವನ್ನು ಮೇ 31 ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಹಾಗೆಯೇ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ವಿಂಡೀಸ್ ಹೆಚ್ಚುವರಿ 10 ಆಟಗಾರರ ಪಟ್ಟಿ:
ಸುನಿಲ್ ಆಂಬ್ರಿಸ್
ಡ್ವೇನ್ ಬ್ರಾವೋ
ಜಾನ್ ಕ್ಯಾಂಪ್ಬೆಲ್
ಜೊನಾಥನ್ ಕಾರ್ಟರ್
ರಾಸ್ಟನ್ ಚೇಸ್
ಶೇನ್ ಡೌರಿಚ್
ಕೀಮೊ ಪೌಲ್
ಕ್ಯಾರಿ ಪಿಯರ್
ರೇಮನ್ ರಿಫೆರ್
ಕೀರನ್ ಪೊಲಾರ್ಡ್

ವೆಸ್ಟ್ ಇಂಡೀಸ್ ವಿಶ್ವಕಪ್ ತಂಡ ಇಂತಿದೆ: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಈವಿನ್ ಲೆವಿಸ್, ಶಿಮ್ರೋನ್ ಹೆಟ್ಮೆಯರ್, ಷೈ ಹೋಪ್, ನಿಕೋಲಸ್ ಪುರಾನ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಆಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್ವೈಟ್, ಶಾನನ್ ಗ್ಯಾಬ್ರಿಯಲ್, ಶೆಲ್ಡೊನ್ ಕೊಟ್ರೆಲ್, ಆಶ್ಲೆ ನರ್ಸ್, ಕೆಮರ್ ರೋಚ್ ಮತ್ತು ಒಶಾನೆ ಥಾಮಸ್



ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...