• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಬ್ಯಾಟಿಂಗ್-ಬೌಲಿಂಗ್ ಜೊತೆಗೆ ಫೀಲ್ಡಿಂಗ್​ನಲ್ಲಿ ಸೂಪರ್ ಸ್ಟೋಕ್ಸ್​ ; ಹೀಗಿತ್ತು ಆ ಅದ್ಭುತ ಕ್ಯಾಚ್!

ಬ್ಯಾಟಿಂಗ್-ಬೌಲಿಂಗ್ ಜೊತೆಗೆ ಫೀಲ್ಡಿಂಗ್​ನಲ್ಲಿ ಸೂಪರ್ ಸ್ಟೋಕ್ಸ್​ ; ಹೀಗಿತ್ತು ಆ ಅದ್ಭುತ ಕ್ಯಾಚ್!

ಬೆನ್ ಸ್ಟೋಕ್ಸ್​ ಹಿಡಿದ ಅದ್ಭುತ ಕ್ಯಾಚ್

ಬೆನ್ ಸ್ಟೋಕ್ಸ್​ ಹಿಡಿದ ಅದ್ಭುತ ಕ್ಯಾಚ್

Ben Stokes: ಆದಿಲ್ ರಶೀದ್ ಬೌಲಿಂಗ್​​ನಲ್ಲಿ ಆ್ಯಂಡಿಲ್ ಫೆಹ್ಲುಕ್ವಾಯೊ ಅವರು ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಡೈ ಹೊಡೆದು ಅತ್ಯದ್ಭುತ ಕ್ಯಾಚ್ ಹಿಡಿದಿದ್ದಾರೆ.

  • News18
  • 4-MIN READ
  • Last Updated :
  • Share this:

ಬೆಂಗಳೂರು (ಮೇ. 31): ಲಂಡನ್​ನ ಓವಲ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ವಿಶ್ವಕಪ್​ನ ಫೇವರಿಟ್​ ಆದಂತಹ ಆತಿಥೇಯ ಇಂಗ್ಲೆಂಡ್​ ಗೆಲುವಿನ ನಗಾರಿ ಬಾರಿಸಿದೆ. ದಕ್ಷಿಣ ಆಫ್ರಿಕಾ ಪ್ರಬಲ ಬೌಲಿಂಗ್ ದಾಳಿಯನ್ನ ಹಿಮ್ಮೆಟ್ಟಿಸಿ, ಭರ್ಜರಿ ಆಟವಾಡಿದ ಆಂಗ್ಲರು ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದ್ದಾರೆ.

ಈ ಮಧ್ಯೆ ಉದ್ಘಾಟನಾ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಇಂಗ್ಲೆಂಡ್​ನ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್​​ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ಆದಿಲ್ ರಶೀದ್ ಬೌಲಿಂಗ್​​ನಲ್ಲಿ ಆ್ಯಂಡಿಲ್ ಫೆಹ್ಲುಕ್ವಾಯೊ ಅವರು ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಡೈ ಹೊಡೆದು ಅತ್ಯದ್ಭುತ ಕ್ಯಾಚ್ ಹಿಡಿದಿದ್ದಾರೆ.

ಇದನ್ನೂ ಓದಿ: Cricket World Cup 2019, WI vs PAK: ಕೇವಲ 105 ರನ್​ಗಳಿಗೆ ಪಾಕಿಸ್ತಾನ ಆಲೌಟ್

 ಸ್ಟೋಕ್ಸ್​ ಹಿಡಿದ ಕ್ಯಾಚ್ ನೋಡುಗರನ್ನ ನಿಬ್ಬೆರಗಾಗಿಸಿದ್ದು, ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟೋಕ್ಸ್​​ ಬ್ಯಾಟಿಂಗ್​ನಲ್ಲಿ 79 ಎಸೆತಗಳಲ್ಲಿ 89 ರನ್ ಚಚ್ಚಿದರೆ, ಬೌಲಿಂಗ್​ನಲ್ಲಿ ಎರಡು ವಿಕೆಟ್ ಕಿತ್ತರು. ಜೊತೆಗೆ ಎರಡು ಕ್ಯಾಚ್ ಪಡೆದರು. ಹೀಗೆ ಬ್ಯಾಟಿಂಗ್-ಬೌಲಿಂಗ್​ ಅಲ್ಲದೆ ಫೀಲ್ಡಿಂಗ್​ನಲ್ಲಿ ಮಿಂಚಿದ ಸ್ಟೋಕ್ಸ್​​ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು