ICC World Cup 2019: ಪಾಕ್-ಅಫ್ಘಾನ್ ಪಂದ್ಯದ ವೇಳೆ ಅಭಿಮಾನಿಗಳ ಹೊಡೆದಾಟ: ವಿಡಿಯೋ ವೈರಲ್

ICC World Cup 2019: ಪರಸ್ಪರ ಕೈ ಮಿಲಾಯಿಸಿದ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಐಸಿಸಿ ಎಚ್ಚರಿಕೆ ನೀಡಿದೆ.

zahir | news18
Updated:June 30, 2019, 3:29 PM IST
ICC World Cup 2019: ಪಾಕ್-ಅಫ್ಘಾನ್ ಪಂದ್ಯದ ವೇಳೆ ಅಭಿಮಾನಿಗಳ ಹೊಡೆದಾಟ: ವಿಡಿಯೋ ವೈರಲ್
afg-pak
  • News18
  • Last Updated: June 30, 2019, 3:29 PM IST
  • Share this:
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಶನಿವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಉಭಯ ತಂಡಗಳ ಅಭಿಮಾನಿಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಪಂದ್ಯ ನಡೆದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಮಾರಮಾರಿಯ ವಿಡಿಯೋ ಭಾರೀ ವೈರಲ್ ಆಗಿದೆ.

ಈ ಘಟನೆಗೆ ಬಲೂಚಿಸ್ತಾನ ಘೋಷಣೆ ಎನ್ನಲಾಗಿದ್ದು, ಇದರಿಂದಾಗಿ ಪಾಕ್-ಅಫ್ಘಾನ್ ಅಭಿಮಾನಿಗಳು ಬಡಿದಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಪಾಕಿಸ್ತಾನದಿಂದ ಪತ್ಯೇಕತೆಯನ್ನು ಬಯಸುತ್ತಿರುವ ಬಲೂಚಿಸ್ತಾನ ಹೋರಾಟಗಾರರ ಪರ ಅಘ್ಘಾನ್ ಅಭಿಮಾನಿಗಳು ನಿಂತಿರುವುದೇ ಈ ಅಹಿತಕರ ಘಟನೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಇದೇ ವೇಳೆ ಮಧ್ಯೆ ಪ್ರವೇಶಿಸಿ ಭದ್ರತಾ ಸಿಬ್ಬಂದಿ, ಇಬ್ಬರು ಕ್ರಿಕೆಟ್ ಅಭಿಮಾನಿಯನ್ನು ಮೈದಾನದಿಂದ ಹೊರಹಾಕಿದ್ದಾರೆ. ಪರಸ್ಪರ ಕೈ ಮಿಲಾಯಿಸಿದ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಐಸಿಸಿ ಎಚ್ಚರಿಕೆ ನೀಡಿದೆ.ಇದೇ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ 'ಜಸ್ಟಿಸ್ ಫರ್ ಬಲೂಚಿಸ್ತಾನ' ಸಂದೇಶವಿರುವ ಪತಾಕೆ ಹೊಂದಿರುವ ವಿಮಾನವೊಂದು ಹಾದುಹೋಗಿತ್ತು. ಇದನ್ನೂ ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಕ್ರಿಕೆಟ್ ಹೊರತಾಗಿ ಸಾಮಾಜಿಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ