ಬೆಂಗಳೂರು (ಜೂ. 07): ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ಶಹ್ಜಾದ್ ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಅವರು ಗುಣಮುಖರಾಗದ ಕಾರಣ ವಿಶ್ರಾಂತಿಯ ಅಗತ್ಯವಿದ್ದು, ವಿಶ್ಬಕಪ್ನಿಂದ ಹೊರ ನಡೆದಿದ್ದಾರೆ.
32 ವರ್ಷ ಪ್ರಾಯಾದ ವಿಕೆಟ್ ಕೀಪರ್ ಶಹ್ಜಾದ್ ಅಫ್ಘಾನ್ ತಂಡದ ಸ್ಟಾರ್ ಸ್ಫೋಟಕ ಆಟಗಾರನಾಗಿದ್ದರು. ಸದ್ಯ ಇವರು ವಿಶ್ವಕಪ್ನಿಂದ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇವರ ಸ್ಥಾನಕ್ಕೆ ಇಕ್ರಮ್ ಅಲಿ ಖಿಲ್ ಅವರನ್ನು ಆಯ್ಕೆ ಮಾಡಿದೆ.
ಕಳೆದ ತಿಂಗಳು ಪಾಕಿಸ್ತಾನ ವಿರುದ್ಧ ಅಭ್ಯಾಸ ಪಂದ್ಯ ಆಡುವ ವೇಳೆ ಶಹ್ಜಾದ್ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಈ ಸಂದರ್ಭ ಅರ್ಧದಲ್ಲೇ ಬ್ಯಾಟಿಂಗ್ ಬಿಟ್ಟು ಮೈದಾನ ತೊರೆದಿದ್ದರು. ಸದ್ಯ ಪ್ರಮುಖ ಆಟಗಾರನೇ ತಂಡದಿಂದ ಹೊರಬಿದ್ದಿರುವುದು ಕ್ರಿಕೆಟ್ ಶಿಶುಗಳಿಗೆ ಮತ್ತಷ್ಟು ಹೊಡೆತ ಬಿದ್ದಿದೆ.
ಇದನ್ನೂ ಓದಿ: 'ಧೋನಿ ಗ್ಲೌಸ್ ವಿಚಾರ ಬಿಟ್ಟು ಐಸಿಸಿ ಅಂಪೈರ್ಗಳ ಕೆಟ್ಟ ತೀರ್ಪಿನ ಬಗ್ಗೆ ಚಿಂತಿಸಲಿ'!
2015 ವಿಶ್ವಕಪ್ ಬಳಿಕ ಶಹ್ಜಾದ್ 55 ಪಂದ್ಯಗಳನ್ನು ಆಡಿದ್ದು, 1843 ರನ್ ಕಲೆಹಾಕಿದ್ದಾರೆ. ಅಫ್ಘಾನಿಸ್ತಾನ ತನ್ನ ಮುಂದಿನ ಪಂದ್ಯವನ್ನು ಶನಿವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ