(VIDEO): ಭಾರತೀಯ ಸಂಸ್ಕೃತಿಯಂತೆ ಸೀರೆಯುಟ್ಟು ಕ್ರಿಕೆಟ್ ಆಡಿ ಫೈನಲ್​ಗೆ ವಿಶೇಷವಾಗಿ ಶುಭಕೋರಿದ ಮಿಥಾಲಿ!

Australia Women vs India Women: ಪ್ರಮುಖ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡ್​ನ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಮಿಥಾಲಿ ರಾಜ್ ಅವರು ಭಾರತೀಯ ಸಂಪ್ರದಾಯದಂತೆ ಸೀರೆಯನ್ನುಟ್ಟು ಮೈದಾನದಲ್ಲಿ ಕ್ರಿಕೆಟ್ ಆಟ ಆಡಿದ್ದಾರೆ.

ಸೀರೆಯುಟ್ಟಿ ಕ್ರಿಕೆಟ್ ಆಡುತ್ತಿರುವ ಮಿಥಾಲಿ ರಾಜ್.

ಸೀರೆಯುಟ್ಟಿ ಕ್ರಿಕೆಟ್ ಆಡುತ್ತಿರುವ ಮಿಥಾಲಿ ರಾಜ್.

 • Share this:
  ಬೆಂಗಳೂರು (ಮಾ. 06): ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ಫೈನಲ್​ ತಲುಪಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಮಾರ್ಚ್​ 8 ಭಾನುವಾರದಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರು ಚೊಚ್ಚಲ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

  ಭಾರತ ಮಹಿಳಾ ಕ್ರಿಕೆಟ್ ತಂಡದ ಈ ಸಾಧನೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಭಾರತೀಯ ಕ್ರಿಕೆಟ್ ದಿಗ್ಗಜರು ಫೈನಲ್​ನಲ್ಲಿ ಗೆದ್ದು ಬನ್ನಿ ಎಂದು ಶುಭಹಾರೈಸಿದ್ದಾರೆ.

  ICC Women's World T20 - Mithali Raj's Inspirational Message For Indian Team Will Leave You Proud
  ಮಿಥಾಲಿ ರಾಜ್, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ.


  ಅಂತೆಯೆ ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಮಿಥಾಲಿ ರಾಜ್ ಕೂಡ​ ವಿಶ್ವಕಪ್​ ಫೈನಲ್​ನಲ್ಲಿ ಗೆದ್ದು ಟ್ರೋಫಿಯನ್ನು ಮನೆಗೆ ತನ್ನಿ ಎಂದು ಹರ್ಮನ್​ ಪ್ರೀತ್​ ಕೌರ್​ ಪಡೆಗೆ ವಿಶ್​ ಮಾಡಿದ್ದಾರೆ. ಆದರೆ, ಮಿಥಾಲಿ ವಿಶೇಷವಾಗಿ ಶುಭ ಹಾರೈಸಿ ಎಲ್ಲರ ಗಮನ ಸೆಳೆದಿದ್ದಾರೆ.

  IPL 2020: CSK ತಂಡದಲ್ಲಿ 8 ಆಟಗಾರರಿಗೆ ಸಿಗುತ್ತದೆ 5 ಕೋಟಿಗೂ ಅಧಿಕ ಸ್ಯಾಲರಿ; ಯಾವ ಆಟಗಾರರಿಗೆ ಎಷ್ಟೆಷ್ಟು?

  ಪ್ರಮುಖ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡ್​ನ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಮಿಥಾಲಿ ರಾಜ್ ಅವರು ಭಾರತೀಯ ಸಂಪ್ರದಾಯದಂತೆ ಸೀರೆಯನ್ನುಟ್ಟು ಮೈದಾನದಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದಾರೆ. ಈ ವಿಡಿಯೋ ತುಣಕನ್ನ ಅವರು ತಮ್ಮ ಇ​ಸ್ಟಾಗ್ರಾಂ​ನಲ್ಲಿ ಹಂಚಿಕೊಂಡಿದ್ದಾರೆ.

   
  IPL 2020: ಆರ್​ಸಿಬಿ ಸೇರಿ 8 ಫ್ರಾಂಚೈಸಿಗಳಿಂದ ಬಿಸಿಸಿಐ ವಿರುದ್ಧ ಪ್ರತಿಭಟನೆ; ಕಾರಣವೇನು ಗೊತ್ತಾ?

  ವಿಡಿಯೋದ ಕೊನೆ ಭಾಗದಲ್ಲಿ ಭಾರತ ಮಹಿಳಾ ತಂಡಕ್ಕೆ ಮಿಥಾಲಿ ಶುಭಕೋರಿದ್ದು, ‘ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಫೈನಲ್​ಗೆ ಮೊದಲಬಾರಿ ಪ್ರವೇಶ ಪಡೆದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು, ನಾವು ಕೂಡ ಈ ಸಾಧನೆಯನ್ನು ಮಾಡಬಹುದೆಂದು ಜಗತ್ತಿಗೆ ತೋರಿಸೋಣ' ಎಂದು ಹೇಳಿದ್ದಾರೆ.

  ಈ ಕುರಿತು ಟ್ವೀಟ್ ಕೂಡ ಮಾಡಿರುವ ಮಿಥಾಲಿ, 'ಭಾರತೀಯಳಾಗಿ, ಭಾರತದ ತಂಡ ಫೈನಲ್ ಪ್ರವೇಶಿಸಿದ್ದು ನನಗೆ ರೋಮಾಂಚನವಾಗಿದೆ. ಆದರೆ, ಓರ್ವ ಕ್ರಿಕೆಟ್ ಆಟಗಾರ್ತಿಯಾಗಿ ಇಂಗ್ಲೆಂಡ್ ತಂಡದ ಬಗ್ಗೆ ಕಳಕಳಿ ಇದೆ. ಆದರೆ, ನಿಯಮಗಳ ಮುಂದೆ ಯಾವುದೂ ದೊಡ್ಡದಲ್ಲ. ನೀವು ಮಾಡಿರುವ ಸಾಧನೆ ಚಿಕ್ಕದಲ್ಲ" ಎಂದು ಹೇಳಿದ್ದಾರೆ.

     IPL 2020: ಆರ್​ಸಿಬಿ ಈ ಬಾರಿ ನೂರಕ್ಕೆ ನೂರು ಕಪ್ ಗೆಲ್ಲಲಿದೆ; ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಕಾರಣ!

  ಭಾರತ ಹಾಗೂ ಇಂಗ್ಲೆಂಡ್ ಮಹಿಳೆಯರ ನಡುವಣ ಸೆಮಿ ಫೈನಲ್ ಪಂದ್ಯ ಮಳೆಯಿಂದ ಕೊಚ್ಚಿಹೋದ ಕಾರಣ ಒಂದೂ ಎಸೆತ ಕಾಣದೆ ರದ್ದು ಮಾಡಲಾಯಿತು. ಲೀಗ್ ಹಂತದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ಹಾಗೂ ಹೆಚ್ಚು ಅಂಕ ಹೊಂದಿದ ಆಧಾರದ ಮೇಲೆ ಭಾರತ ಫೈನಲ್​ಗೇರಿದರೆ, ಇಂಗ್ಲೆಂಡ್ ಸೆಮಿ ಫೈನಲ್​ಗೆ ತನ್ನ ಹಾದಿಯನ್ನು ಅಂತ್ಯಗೊಳಿಸಿತು.
  First published: