• Home
  • »
  • News
  • »
  • sports
  • »
  • India vs West Indies: ಭಾರತ- ವೆಸ್ಟ್ ಇಂಡೀಸ್ ಪಂದ್ಯದ ರೋಚಕ ಕ್ಷಣಗಳನ್ನು ಹೀಗೆ ನೋಡಿ!

India vs West Indies: ಭಾರತ- ವೆಸ್ಟ್ ಇಂಡೀಸ್ ಪಂದ್ಯದ ರೋಚಕ ಕ್ಷಣಗಳನ್ನು ಹೀಗೆ ನೋಡಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Women's World Cup 2022 Live: ವೆಸ್ಟ್ ಇಂಡೀಸ್ ಮಹಿಳೆಯರು ಮತ್ತು ಭಾರತ ಮಹಿಳೆಯರ ನಡುವಿನ ಪಂದ್ಯವು ಮಾರ್ಚ್ 12 ರ ಶನಿವಾರದಂದು ನಡೆಯಲಿದೆ. ಇದು IST ಬೆಳಗ್ಗೆ 6:30 ರಿಂದ ಪ್ರಾರಂಭವಾಗಲಿದೆ.

  • Share this:

ಐಸಿಸಿ ಮಹಿಳಾ ಕ್ರಿಕೆಟ್ ಏಕದಿನ ವಿಶ್ವಕಪ್ 2022 (Women's World Cup))  ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಮಾರ್ಚ್ 6 ರಂದು ಕಣಕ್ಕಿಳಿದು ಜಯಭೇರಿ ಭಾರಿಸಿದರೆ, ನ್ಯೂಜಿಲೆಂಡ್ ವಿರುದ್ಧ ಸೋಲುಂಡಿತು. ಭಾರತ ಸದ್ಯ ತನ್ನ 3ನೇ ಪಂದ್ಯಕ್ಕೆ ಸಜ್ಜಾಗಿದ್ದು, ಇಂಡಿಯಾ - ವೆಸ್ಟ್ ಇಂಡೀಸ್  (India vs West Indies) ಮುಖಾಮುಖಿಯಾಗಲಿದ್ದಾರೆ. ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ 2022ರ ಐಸಿಸಿ ವಿಶ್ವಕಪ್‌ನ 10 ನೇ ಪಂದ್ಯದಲ್ಲಿ   ಭಾರತ ಮಹಿಳಾ ತಂಡವು (India Women Cricket Team) ಶನಿವಾರ, ಮಾರ್ಚ್ 12ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.


ಸ್ಟೆಫನಿ ಟೇಲರ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಮತ್ತು ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡದ ವಿರುದ್ಧ ಗೆಲುವನ್ನು ಸಾಧಿಸಿದೆ. ಗೆಲುವಿನ ನಾಗಲೋಟ ಆರಂಭಿಸಿರುವ ವೆಸ್ಟ್ ಇಂಡೀಸ್ ಪ್ರಬಲ ಸ್ಫರ್ಧಿ ಭಾರತದ ಜೊತೆ ನಾಳೆ ಕಣಕ್ಕಿಳಿಯಲಿದೆ.


ಸರಣಿ ಶುರುವಾಗಿದ್ದು ಹೀಗೆ!
ಶುಕ್ರವಾರ, ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ಶುರುವಾಗಿದ್ದ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿದ್ದು, ಚಾಂಪಿಯನ್ ಪಟ್ಟಕ್ಕಾಗಿ 29 ದಿನಗಳ ಕಾಲ ಸೆಣಸಾಡಿದ್ದವು.


ಎರಡು ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ, ಅವರು ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕುಳಿತಿದ್ದಾರೆ. ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಮವಾಗಿ ಒಂದು, ಎರಡನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: IPL ಇದ್ರೆ ಮನೋರಂಜನೆಗೆ ತೊಂದ್ರೆ ಇಲ್ಲಾ ಅಂತಿದ್ದಾರೆ Dhoni, ಇಂಥಾ ನಾಟಕ ಈಗಾ ನಾರ್ಮಲ್ ಅಂತೆ


ವುಮೆನ್ ಇನ್ ಬ್ಲೂ ಸ್ಪರ್ಧೆಯಲ್ಲಿ ಇಲ್ಲಿಯವರೆಗೆ ಒಂದು ಗೆಲುವು ಮತ್ತು ಒಂದು ಸೋಲನ್ನು ಪಡೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತ ತಂಡ 107 ರನ್‌ಗಳ ಜಯದೊಂದಿಗೆ ತಮ್ಮ ಗೆಲುವಿನ ಖಾತೆ ತೆರೆದರೆ, ಮುಂದಿನ ಪಂದ್ಯದಲ್ಲಿ, ಅವರು ನ್ಯೂಜಿಲೆಂಡ್ ವಿರುದ್ಧ 63 ರನ್‌ಗಳ ಅಂತರದ ಸೋಲು ಕಂಡರು.


ವೆಸ್ಟ್ ಇಂಡೀಸ್ ಮಹಿಳೆಯರು ಮತ್ತು ಭಾರತ ಮಹಿಳೆಯರ ನಡುವಿನ ಪಂದ್ಯವು ಮಾರ್ಚ್ 12 ರ ಶನಿವಾರದಂದು ನಡೆಯಲಿದೆ ಮತ್ತು ಇದು IST ಬೆಳಗ್ಗೆ 6:30 ರಿಂದ ಪ್ರಾರಂಭವಾಗಲಿದೆ.


ಐಸಿಸಿ ಮಹಿಳಾ ವಿಶ್ವಕಪ್ 2022 ರ ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ಭಾರತ ಮಹಿಳೆಯರ ಪಂದ್ಯವನ್ನು ಎಲ್ಲಿ ಆಡಲಾಗುತ್ತದೆ?


ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ಭಾರತ ಮಹಿಳೆಯರ ನಡುವಿನ ಮಹಿಳಾ ವಿಶ್ವಕಪ್ ಪಂದ್ಯವು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದೆ.


ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ಭಾರತ ಮಹಿಳಾ ಪಂದ್ಯವನ್ನು ಯಾವ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತವೆ?


ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮ್ಯಾಚ್ ಪ್ರಸಾರ ಹಕ್ಕುಗಳನ್ನು ಹೊಂದಿದೆ


ವೆಸ್ಟ್ ಇಂಡೀಸ್ V/S ಭಾರತ ಪಂದ್ಯವನ್ನು ಎಲ್ಲಿ ಲೈವ್ ಸ್ಟ್ರೀಮ್ ನೋಡಬಹುದು?
ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಲಭ್ಯವಿದೆ.


IND vs SL: ಪಿಂಕ್ ಬಾಲ್ ಫೈಟ್‌ನಲ್ಲಿ ಭಾರತದ ಸ್ಟಾರ್ ಪ್ಲೇಯರ್ ಔಟ್! ಟೀಂ ಇಂಡಿಯಾದ ಸಂಭಾವ್ಯ ತಂಡ ಹೀಗಿದೆ


ವೆಸ್ಟ್ ಇಂಡೀಸ್ vs ಭಾರತ ಮಹಿಳೆಯರ ಸಂಭಾವ್ಯ ಹನ್ನೊಂದರ ಪಟ್ಟಿ


ವೆಸ್ಟ್ ಇಂಡೀಸ್ ಮಹಿಳಾ ಸಂಭಾವ್ಯ XI: ಡಿಯಾಂಡ್ರಾ ಡಾಟಿನ್, ಹೇಯ್ಲಿ ಮ್ಯಾಥ್ಯೂಸ್, ಕೈಸಿಯಾ ನೈಟ್, ಸ್ಟೆಫನಿಟೇಲರ್ (ಸಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಾಕ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಶಾಮಿಲಿಯಾ ಕೊನ್ನೆಲ್, ಅನಿಸಾ ಮೊಹಮ್ಮದ್, ಶಕೆರಾ ಸೆಲ್ಮನ್


ಭಾರತ ಮಹಿಳಾ ಸಂಭಾವ್ಯ XI: ಸ್ಮೃತಿ ಮಂದಾನ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಮಿಥಾಲಿ ರಾಜ್ (c), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (wk), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

Published by:ಗುರುಗಣೇಶ ಡಬ್ಗುಳಿ
First published: