• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಭಾರತ ಅಂಡರ್-19 ಆಟಗಾರರ ಮೇಲೆ ಬಾಂಗ್ಲಾ ಕ್ರಿಕೆಟಿಗರ ಹಲ್ಲೆ..?: ವಿಶ್ವಕಪ್ ಫೈನಲ್ ಗೆಲ್ಲುತ್ತಿದ್ದಂತೆ ದುರ್ವರ್ತನೆ

ಭಾರತ ಅಂಡರ್-19 ಆಟಗಾರರ ಮೇಲೆ ಬಾಂಗ್ಲಾ ಕ್ರಿಕೆಟಿಗರ ಹಲ್ಲೆ..?: ವಿಶ್ವಕಪ್ ಫೈನಲ್ ಗೆಲ್ಲುತ್ತಿದ್ದಂತೆ ದುರ್ವರ್ತನೆ

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

ICC Under 19 wrold Cup 2020: ಈ ಕುರಿತಾದ ವಿಡಿಯೋ ಕೂಡ ಈಗ ವೈರಲ್​ ಆಗಿದೆ. ಇಬ್ಬರ ಜಗಳ ತಾರಕಕ್ಕೇರುತ್ತಿದೆ ಎಂಬುವ ಹೊತ್ತಿಗೆ ಮೈದಾನದಲ್ಲಿದ್ದ ಅಂಪೈರ್​​ ಉಭಯ ತಂಡದ ಆಟಗಾರರನ್ನು ದೂರ ಕರೆದುಕೊಂಡು ಹೋದರು.

 • Share this:

  ದ. ಆಫ್ರಿಕಾ (ಫೆ. 10): ಅಂಡರ್-19 ವಿಶ್ವಕಪ್ ಅನ್ನು ಚೊಚ್ಚಲ ಬಾರಿಗೆ ಬಾಂಗ್ಲಾದೇಶ ಕಿರಿಯರ ತಂಡ ಗೆದ್ದು ಬೀಗಿದೆ. ಇಲ್ಲಿನ ಪೋಶೆಫ್​ಸ್ಟ್ರೂಮ್ ನಗರದಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಯಂಗ್ ಇಂಡಿಯಾ ವಿರುದ್ಧ ಬಾಂಗ್ಲಾ ಜೂನಿಯರ್ ತಂಡ 3 ವಿಕೆಟ್​​​ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಭಾರತೀಯರ ಹ್ಯಾಟ್ರಿಕ್ ವಿಶ್ವಕಪ್ ಕನಸನ್ನು ಬಾಂಗ್ಲಾ ಹುಲಿಗಳು ಧ್ವಂಸ ಮಾಡಿದವು.


  ಈ ನಡುವೆ ಚೊಚ್ಚಲ ಅಂಡರ್-19 ವಿಶ್ವಕಪ್ ಗೆದ್ದಾಗ ಮೈದಾನಕ್ಕೆ ಓಡಿ ಬಂದ ಬಾಂಗ್ಲಾ ಕ್ರಿಕೆಟಿಗರು ಭಾರತೀಯ ಆಟಗಾರರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.


  ICC Under-19 World Cup | Bangladesh Stun India in Thriller to Win Maiden Title
  ಟ್ರೋಫಿ ಜೊತೆ ಬಾಂಗ್ಲಾ ಕ್ರಿಕೆಟ್ ತಂಡದ ಆಟಗಾರರು.


  ಸಚಿನ್, ಅಫ್ರಿದಿ ದಾಖಲೆ ಮುರಿದು ಹೊಸ ಇತಿಹಾಸ ರಚಿಸಿದ ನೇಪಾಳ ಕ್ರಿಕೆಟಿಗ


  ಬಾಂಗ್ಲಾ ಬ್ಯಾಟ್ಸ್​​ಮನ್ ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನಕ್ಕೆ ಬಾಂಗ್ಲಾ ಕ್ರಿಕೆಟಿಗರು ತೆರಳಿ ಅಲ್ಲಿ ಭಾರತೀಯ ಕ್ರಿಕೆಟಿಗರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಬಾಂಗ್ಲಾ ಆಟಗಾರನೋರ್ವ ಭಾರತೀಯನ ಜೊತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.  ಈ ಕುರಿತಾದ ವಿಡಿಯೋ ಕೂಡ ಈಗ ವೈರಲ್​ ಆಗಿದೆ. ಇಬ್ಬರ ಜಗಳ ತಾರಕಕ್ಕೇರುತ್ತಿದೆ ಎಂಬುವ ಹೊತ್ತಿಗೆ ಮೈದಾನದಲ್ಲಿದ್ದ ಅಂಪೈರ್​​ ಉಭಯ ತಂಡದ ಆಟಗಾರರನ್ನು ದೂರ ಕರೆದುಕೊಂಡು ಹೋದರು.  ನ್ಯೂಜಿಲೆಂಡ್​ನಲ್ಲಿ ಮುಂದುವರಿದ ಗಿಲ್ ಕಮಾಲ್; ದ್ವಿಶತಕದ ಬಳಿಕ ಮತ್ತೆ ಅಜೇಯ ಶತಕ ಭಾರಿಸಿದ ಶುಭ್ಮನ್


  ಭಾರತ ನೀಡಿದ್ದ 178 ರನ್​ ಟಾರ್ಗೆಟ್ ಸವಾಲನ್ನು ಮೆಟ್ಟಿ ನಿಂತ ಬಾಂಗ್ಲಾದೇಶ ತಂಡ ಮೊತ್ತಮೊದಲ ಬಾರಿಗೆ ಜೂನಿಯರ್ ವಿಶ್ವಕಪ್ ಎತ್ತಿಹಿಡಿಯಿತು. ಯಾವುದೇ ಹಂತದ ವಿಶ್ವಕಪ್ ಲೆಕ್ಕಕ್ಕೆ ತೆಗೆದುಕೊಂಡರೂ ಬಾಂಗ್ಲಾದೇಶದ ಚೊಚ್ಚಲ ಗೆಲುವು ಇದಾಗಿದೆ. ಯಾವುದೇ ಜಾಗತಿಕ ಕ್ರಿಕೆಟ್ ಟೂರ್ನಿಯಲ್ಲೂ ಬಾಂಗ್ಲಾ ಚಾಂಪಿಯನ್ ಆಗಿರುವುದು ಇದೇ ಮೊದಲು.


  ಸ್ಕೋರ್ ವಿವರ:


  ಭಾರತ ಕಿರಿಯರ ತಂಡ: 47.2 ಓವರ್ 177/10


  (ಯಶಸ್ವಿ ಜೈಸ್ವಾಲ್ 88, ತಿಲಕ್ ವರ್ಮಾ 38, ಧ್ರುವ್ ಜುರೆಲ್ 22 ರನ್ – ಅವಿಷೇಕ್ ದಾಸ್ 40/3, ತಂಜೀಮ್ ಹಸನ್ ಸಕಿಬ್ 28/2, ಶೋರಿಫುಲ್ ಇಸ್ಲಾಮ್ 31/2)


  ಬಾಂಗ್ಲಾದೇಶ ಕಿರಿಯರ ತಂಡ: 42.1 ಓವರ್ 170/7 (ಗುರಿ 46 ಓವರ್​ನಲ್ಲಿ 170 ರನ್)


  (ಪರ್ವೇಜ್ ಹುಸೇನ್ ಇಮೋನ್ 47, ಅಕ್ಬರ್ ಅಲಿ ಅಜೇಯ 43, ತಂಜೀದ್ ಹಸನ್ 17 ರನ್ – ರವಿ ಬಿಷ್ಣೋಯ್ 30/4, ಸುಶಾಂತ್ ಮಿಶ್ರಾ 25/2)


  Published by:Vinay Bhat
  First published: