Under 19 World Cup ಫೈನಲ್​ಗೆ ಕ್ಷಣಗಣನೆ; ಬಾಂಗ್ಲಾ ಹುಲಿಗಳನ್ನು ಸದೆಬಡಿಯಲು ಯಂಗ್ ಇಂಡಿಯಾ ರೆಡಿ!

ಅಂಡರ್​-19 ವಿಶ್ವಕಪ್​ನಲ್ಲಿ ಭಾರತ ಹಾಗೂ ಬಾಂಗ್ಲಾ ಒಟ್ಟು 4 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 3 ಮತ್ತು ಬಾಂಗ್ಲಾ ಒಂದು ಬಾರಿ ಗೆಲುವು ಸಾಧಿಸಿದೆ. ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ.

ಭಾರತ ಅಂಡರ್-19 vs ಬಾಂಗ್ಲಾದೇಶ ಅಂಡರ್-19

ಭಾರತ ಅಂಡರ್-19 vs ಬಾಂಗ್ಲಾದೇಶ ಅಂಡರ್-19

 • Share this:
  13ನೇ ಅಂಡರ್-19 ವಿಶ್ವಕಪ್ ಫೈನಲ್ ಮಹಾಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ದಕ್ಷಿಣ ಆಫ್ರಿಕಾದ ಪೊಚೆಫ್ ಸ್ಟ್ರೂಮ್​ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಪ್ರಿಯಂ ಗರ್ಗ್ ನೇತೃತ್ವದ ಭಾರತ ಹಾಗೂ ಅಕ್ಬರ್ ಅಲಿ ನಾಯಕತ್ವದ ಬಾಂಗ್ಲಾದೇಶ ತಂಡ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.

  ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಭಾರತ ಅಂಡರ್-19 ತಂಡ ಒಂದೇ ಒಂದು ಸೋಲು ಕಾಣದೆ ಫೈನಲ್​ ವರೆಗೆ ಬಂದು ನಿಂತಿದೆ. ಅಂಡರ್-19 ವಿಶ್ವಕಪ್​ನಲ್ಲಿ ಭಾರತಕ್ಕೆ ಇದು 7ನೇ ಫೈನಲ್‌. ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿರುವ ಭಾರತ, ಎರಡು ಬಾರಿಯಷ್ಟೆ ಎಡವಿದೆ.

  ಇತ್ತ ಬಾಂಗ್ಲಾದೇಶಕ್ಕೆ ಇದು ಚೊಚ್ಚಲ ಫೈನಲ್‌ ಸಂಭ್ರಮ. ಹೀಗಾಗಿ ಸಹಜವಾಗಿಯೇ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಭಾರತ ವಿರುದ್ಧ ಗೆಲ್ಲುವ ವಿಶ್ವಾದವಿದೆ ಎಂದು ಬಾಂಗ್ಲಾ ನಾಯಕ ಹೇಳಿದ್ದಾರೆ. ಯಾವುದೇ ಅನಗತ್ಯ ಒತ್ತಡವನ್ನು ಹೇರಿಕೊಳ್ಳಲು ಬಯಸುವುದಿಲ್ಲ. ಭಾರತ ಅತ್ಯುತ್ತಮ ತಂಡ. ನಿಮ್ಮ ಬೆಂಬಲ ನಮಗಿರಲಿ ಎಂದು ಅಕ್ಬಲಿ ಅಲಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

  Virat Kohli: ಪಂದ್ಯ ಮುಗಿದ ಬಳಿಕ ಸರಣಿ ಸೋಲಿನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ!

     ಭಾರತ ತಂಡ ಈ ಬಾರಿ ಫೈನಲ್​ಗೆ ತಲುಪಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಮಧ್ಯಮವೇಗಿ ಕಾರ್ತಿಕ್ ತ್ಯಾಗಿ ಎಂದರೆ ತಪ್ಪಾಗಲಾರದು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಜೈಸ್ವಾಲ್ ಶತಕ ಬಾರಿಸಿ ಮಿಂಚಿದ್ದರು. 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

  ಇತ್ತ ಬಾಂಗ್ಲಾ ಕೂಡ ಸೆಮೀಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್​ಗಳಿಂದ ಗೆದ್ದಿತ್ತು. ಮೆಹಮುದುಲ್ಲಾ ಹಸನ್ ಜಾಯ್ ಕಿವೀಸ್ ವಿರುದ್ಧ ಶತಕ ಗಳಿಸಿದ್ದರು. ಅಲ್ಲದೇ ಬೌಲರ್‌ಗಳೂ ಉತ್ತಮ ಸಾಧನೆ ಮಾಡಿದ್ದರು. ಹೀಗಾಗಿ ಬಾಂಗ್ಲಾವನ್ನು ಕಡೆಗಣಿಸುವಂತಿಲ್ಲ.

  IND vs NZ: ಭಾರತ vs ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯದ ರೋಚಕ ಕ್ಷಣಗಳು

     ಇನ್ನು ಯಂಗ್ ಇಂಡಿಯಾಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಕೋಚ್​ ರವಿಶಾಸ್ತ್ರಿ ಸೇರಿದಂತೆ ಇತರೆ ಆಟಗಾರರು ಆಲ್​ ದಿ ಬೆಸ್ಟ್​​ ಹೇಳಿದ್ದಾರೆ. ಇಂದಿನ ಪಂದ್ಯಕ್ಕೆ ಶುಭವಾಗಲಿ. ನಿಮ್ಮ ಆಟವನ್ನ ನೀವು ಆಡಿ. ನಾವೆಲ್ಲರೂ ಖಂಡಿತ ನಿಮ್ಮ ಆಟವನ್ನ ನೋಡುತ್ತೇವೆ ಎಂದಿದ್ದಾರೆ.

  ಅಂಡರ್​-19 ವಿಶ್ವಕಪ್​ನಲ್ಲಿ ಭಾರತ ಹಾಗೂ ಬಾಂಗ್ಲಾ ಒಟ್ಟು 4 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 3 ಮತ್ತು ಬಾಂಗ್ಲಾ ಒಂದು ಬಾರಿ ಗೆಲುವು ಸಾಧಿಸಿದೆ. ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

  India vs New Zealand: ರೋಚಕ ಪಂದ್ಯದಲ್ಲಿ ಜಡ್ಡು-ಸೈನಿ ಹೋರಾಟ ವ್ಯರ್ಥ; ಏಕದಿನ ಸರಣಿ ಕಿವೀಸ್ ಪಾಲು

  ಭಾರತ ಅಂಡರ್-19 ತಂಡ: ಪ್ರಿಯಂ ಗರ್ಗ್ (ನಾಯಕ), ಧ್ರುವ ಜುರೇಲ್ (ವಿಕೆಟ್‌ಕೀಪರ್), ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸಕ್ಸೆನಾ, ತಿಲಕ್ ವರ್ಮಾ, ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯಿ, ಶಾಶ್ವತ್ ರಾವತ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ ಪಾಟೀಲ, ಶುಭಾಂಗ ಹೆಗ್ಡೆ, ಸುಶಾಂತ್ ಮಿಶ್ರಾ, ಕುಮಾರ್ ಕುಶಾಗ್ರ.

  ಬಾಂಗ್ಲಾದೇಶ ಅಂಡರ್-19 ತಂಡ: ಅಕ್ಬರ್ ಅಲಿ (ನಾಯಕ-ವಿಕೆಟ್‌ಕೀಪರ್), ಪರ್ವೇಜ್ ಹುಸೇನ್ ಎಮೊನ್, ತನ್ಜೀದ್ ಹಸನ್, ಮೆಹಮುದ್ ಅಲ್ ಹಸನ್ ಜಾಯ್, ತೌಹಿದ್ ಹೃದಯ್, ಶಹಾದತ್ ಹುಸೇನ್, ಶಮಿಮ್ ಹುಸೇನ್, ರಕೀಬುಲ್ ಹಸನ್, ಶರೀಫುಲ್ ಇಸ್ಲಾಂ, ತಂಜೀಮ್ ಹಸನ್ ಶಕೀಬ್, ಹಸನ್ ಮುರಾದ್, ಮೃತ್ಯುಂಜಯ್ ಚೌಧರಿ, ಅಭಿಷೇಕ್ ದಾಸ್, ಪ್ರತೀಕ್ ನವರೋಸ್ ನಬಿಲ್, ಶಾಹಿನ್ ಆಲಂ.

  First published: