T20 World Cup: ಅನಿಶ್ಚಿತತೆಯಲ್ಲೇ ಉಳಿದ ಟಿ-20 ವಿಶ್ವಕಪ್ ಟೂರ್ನಿ ಭವಿಷ್ಯ; ಇನ್ನೊಂದು ತಿಂಗಳು ಸಮಯ ತೆಗೆದುಕೊಂಡ ಐಸಿಸಿ

ಈ ಸಭೆಯಲ್ಲಿ ಟಿ-20 ವಿಶ್ವಕಪ್​ ಆತಿಥ್ಯ ವಹಿಸುವ ಕುರಿತು ಜುಲೈ ವರೆಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಹೀಗಾಗಿ ಮಹತ್ವದ ಟೂರ್ನಿಯ ಹಣೆಬರಹ ನಿರ್ಧಾರವಾಗಿಲ್ಲ.

news18-kannada
Updated:June 11, 2020, 9:15 AM IST
T20 World Cup: ಅನಿಶ್ಚಿತತೆಯಲ್ಲೇ ಉಳಿದ ಟಿ-20 ವಿಶ್ವಕಪ್ ಟೂರ್ನಿ ಭವಿಷ್ಯ; ಇನ್ನೊಂದು ತಿಂಗಳು ಸಮಯ ತೆಗೆದುಕೊಂಡ ಐಸಿಸಿ
ಐಸಿಸಿ
  • Share this:
ಕೊರೋನಾ ವೈರಸ್​ನಿಂದಾಗಿ ಅನಿಶ್ಚಿತತೆಯಲ್ಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಕೂಟ ನಡೆಸಬೇಕೋ ಅಥವಾ ಮುಂದೂಡಬೇಕೋ ಎಂಬ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ಬಾರಿ ಸಭೆ ನಡೆಸಿ ಐಸಿಸಿ ಟೂರ್ನಿ ಆಯೋಜನೆ ಬಗ್ಗೆ ಜೂನ್‌ 10ಕ್ಕೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಐಸಿಸಿ ಇದೀಗ ತನ್ನ ನಿರ್ಧಾರವನ್ನು ಒಂದು ತಿಂಗಳು ಮುಂದೂಡಿದೆ.

ಟಿ-20 ವಿಶ್ವಕಪ್​ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಟೆಲಿ-ಕಾನ್ಫರೆನ್ಸ್​ ಮೂಲಕ ನಿನ್ನೆ ಸಭೆ ನಡೆಸಲಾಗಿತ್ತು. ಆದರೆ, ಯಾವುದೇ ನಿರ್ಧಾರ ಕೈಗೊಳ್ಳದೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿ ಮುಂದೂಡಿಕೆ ಮಾಡಿ, ಐಪಿಎಲ್​ ನಡೆಸಬೇಕು ಎಂಬ ಮಾತು ಕೇಳಿ ಬಂದಿದ್ದ ಕಾರಣ ಈ ಸಭೆ ಆಯೋಜನೆಗೊಂಡಿತ್ತು.

IPL, T20 ವಿಶ್ವಕಪ್ ಬಳಿಕ ಮತ್ತೊಂದು ಮಹತ್ವದ ಟೂರ್ನಿ ಭವಿಷ್ಯ ತೂಗುಯ್ಯಾಲೆಯಲ್ಲಿ..!

 



ಇನ್ನೂ ಈ ಸಭೆಯಲ್ಲಿ ಟಿ-20 ವಿಶ್ವಕಪ್​ ಆತಿಥ್ಯ ವಹಿಸುವ ಕುರಿತು ಜುಲೈ ವರೆಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಹೀಗಾಗಿ ಮಹತ್ವದ ಟೂರ್ನಿಯ ಹಣೆಬರಹ ನಿರ್ಧಾರವಾಗಿಲ್ಲ. ಲೆಕ್ಕಾಚಾರವೊಂದರ ಪ್ರಕಾರ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯನ್ನು 2022ಕ್ಕೆ ಮುಂದೂಡಲ್ಪಡಲಿದೆ. ಮುಂದಿನ ವರ್ಷ ಭಾರತ ಟಿ-20 ವಿಶ್ವಕಪ್​ಗೆ ಆತಿಥ್ಯ ವಹಿಸಲಿದೆ ಎನ್ನಲಾಗಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್‌ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.

ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಷ್ಟೇ ಬಾಕಿ ಇದೆ. ಹೀಗಾಗಿ ಹೆಚ್ಚು ಸಮಯ ತೆಗೆದುಕೊಂಡು ಸರಿಯಾದ ನಿರ್ಧಾರಕ್ಕೆ ಬರಲು ಪ್ರಯತ್ನಿಸುತ್ತಿದ್ದೇವೆ. ಈ ಕುರಿತಾಗಿ ಎಲ್ಲ ಸದಸ್ಯರು, ಪ್ರಸಾರಕರು, ಪಾಲುದಾರರು, ಸರಕಾರಗಳು ಮತ್ತು ಆಟಗಾರರ ಜೊತೆಗೆ ಚರ್ಚಿಸಿ ಸಲಹೆ ಪಡೆಯಲಿದ್ದೇವೆ. ಬಳಿಕ ಸಮಂಜಸ ನಿಧಾರ ತೆಗೆದುಕೊಳ್ಳಲು ಪ್ರಯತ್ನಿಸುತ್ತೇವೆ, ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸ್ವಾಮಿ ಹೇಳಿಕೆ ನೀಡಿದ್ದಾರೆ.

ಟಿ20 ಕ್ರಿಕೆಟ್​ನ ನಂಬರ್ 1 ಬ್ಯಾಟ್ಸ್​ಮನ್​​ ಪ್ರಕಟಿಸಿದ ಇಂಡೋ-ಪಾಕ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?

ಇತ್ತೀಚೆಗಷ್ಟೆ ಕ್ರಿಸ್ ಟೆಟ್ಲಿ ನೇತೃತ್ವದ ಐಸಿಸಿಯ ಈವೆಂಟ್ಸ್ ಕಮಿಟಿ ಬಹು ಆಯ್ಕೆಗಳನ್ನು ಪ್ರಸ್ತುತಪಡಿಸಬಹುದು ಎಂದು ಪಿಟಿಐ ವರದಿ ಮಾಡಿತ್ತು. ಮತ್ತು ಸದಸ್ಯರು ಗಂಭೀರವಾಗಿ ಆಲೋಚಿಸುವ ಆಯ್ಕೆಗಳಲ್ಲಿ ಒಂದು ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್, 2022 ಕ್ಕೆ ಸ್ಥಳಾಂತರಿಸುತ್ತಿದ್ದರೆ, ಭಾರತವು ತನ್ನ ಆವೃತ್ತಿಯನ್ನು 2021 ಆಯೋಜಿಸುತ್ತದೆ ಎಂದು ವರದಿ ಮಾಡಲಾಗಿತ್ತು.
First published: June 11, 2020, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading