ಬಾಂಗ್ಲಾ ಆಟಗಾರ- ರೊನಾಲ್ಡೊ ಒಡಹುಟ್ಟಿದವರು; ವಿಚಾರ ತಿಳಿದು ಟ್ವಿಟ್ಟರ್​ನಲ್ಲಿ ಫ್ಯಾನ್ಸ್​ ದಾಂಧಲೆ

ಸರ್ಕಾರ್ ಅವರು ಸಂಭ್ರಮಿಸುತ್ತಿರುವ ಫೋಟೋ ರೊನಾಲ್ಡೊ ಮಾದರಿ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿ ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ. ಕೆಲವರು ಇದು ಕ್ರಿಸ್ಟಿಯಾನೋ ರೊನಾಲ್ಡೊಗೆ ಮಾಡಿರುವ ಅವಮಾನ ಎಂದಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಸೌಮ್ಯ ಸರ್ಕಾರ್

ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಸೌಮ್ಯ ಸರ್ಕಾರ್

  • News18
  • Last Updated :
  • Share this:
ಬೆಂಗಳೂರು (ಜೂ. 21): 'ಬಾಂಗ್ಲಾದೇಶ ಆಟಗಾರ ಸೌಮ್ಯ ಸರ್ಕಾರ್ ಹಾಗೂ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಒಡಹುಟ್ಟಿದವರು'. ಈ ಸುದ್ದಿ ಸದ್ಯ ಇಂಟರ್​ನೆಟ್​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಶ್ವಕಪ್​​ನಲ್ಲಿ ನಿನ್ನಡೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲು ಕಂಡಿತು. ಆದರೆ, ಬಾಂಗ್ಲಾ ಆಟಗಾರರ ಹೋರಾಟ ಮಾತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಬಲಿಷ್ಠ ತಂಡದೆದರು ಬಾಂಗ್ಲಾ ಬ್ಯಾಟ್ಸ್​ಮನ್​​ಗಳು ದಿಟ್ಟ ಹೋರಾಟ ನಡೆಸಿದರು.

ಈ ಮಧ್ಯೆ ಬಾಂಗ್ಲಾದೇಶ ಬೌಲಿಂಗ್ ಮಾಡುವ ವೇಳೆ ಸೌಮ್ಯ ಸರ್ಕಾರ್ 21ನೇ ಓವರ್​ನಲ್ಲಿ ಆಸೀಸ್ ನಾಯಕ ಆ್ಯರೋನ್ ಫಿಂಚ್​​ರನ್ನು ಔಟ್ ಮಾಡಿ ಬ್ರೇಕ್ ನೀಡಿದ್ದರು. ಈ ಮೂಲಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಎರಡನೇ ವಿಕೆಟ್ ಕಿತ್ತರು.

ಇದೇ ಖುಷಿಯಲ್ಲಿ ಸರ್ಕಾರ್ ಅವರು ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಭಿಮಾನಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಫಿಂಚ್ ವಿಕೆಟ್ ಪಡೆದಾಗ ಸರ್ಕಾರ್ ಥೇಟ್ ರೊನಾಲ್ಡೊ ಸಿಗ್ನೇಚರ್ ಸ್ಟೈಲ್​​ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

ಭಾರತ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಶಾರುಖ್ ಖಾನ್ ಪ್ರತಿಕ್ರಿಯೆ ಹೇಗಿತ್ತು?; ಈ ವಿಡಿಯೋ ನೋಡಿ

ಇದನ್ನ ಐಸಿಸಿ ತನ್ನ ಅಧಿಕೃತ ಕ್ರಿಕೆಟ್ ವರ್ಲ್ಡ್​​​​​​ ಕಪ್ ಟ್ವಿಟ್ಟರ್ ಖಾತೆಯಲ್ಲಿ ‘ಹುಟ್ಟಿದಾಗ ಬೇರ್ಪಟ್ಟವರು’ ಇವರಿಬ್ಬರು ಒಡಹುಟ್ಟಿದವರು ಎಂಬ ರೀತಿಯಲ್ಲಿ ಅಡಿಬರಹ ನೀಡಿ ಸರ್ಕಾರ್ ಹಾಗೂ ರೊನಾಲ್ಡೊ ಒಂದೇರೀತಿಯಲ್ಲಿ ಸಂಭ್ರಮಿಸುತ್ತಿರುವ ಫೋಟೋವನ್ನು ಹಾಕಿ ಹಂಚಿಕೊಂಡಿದೆ.

 ಆದರೆ, ಸರ್ಕಾರ್ ಅವರು ಸಂಭ್ರಮಿಸುತ್ತಿರುವ ಫೋಟೋ ರೊನಾಲ್ಡೊ ಮಾದರಿ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿ ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ. ಕೆಲವರು ಇದು ಕ್ರಿಸ್ಟಿಯಾನೋ ರೊನಾಲ್ಡೊಗೆ ಮಾಡಿರುವ ಅವಮಾನ ಎಂದರೆ, ಇನ್ನು ಕೆಲವರು ಎಡ್ಮಿನ್‌ ಅನ್ನು ಖುದ್ದಾಗಿ ಭೇಟಿಯಾಗಿ ಟ್ವೀಟನ್ನು ಡಿಲೀಟ್ ಮಾಡಲು ಸಲಹೆ ನೀಡುವುದಾಗಿ ಹೇಳಿದ್ದಾರೆ.

ಮತ್ತೆ ಕ್ರಿಕೆಟ್ ಆಡಲಿದ್ದಾರೆ ಯುವರಾಜ್​; ಸಿಕ್ಸರ್ ಕಿಂಗ್ ಮನವಿಗೆ ಜೈ ಎಂದ ಬಿಸಿಸಿಐ

 

ನಿನ್ನೆ ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ವಿಶ್ವಕಪ್​ನ 26ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧಆಸ್ಟ್ರೇಲಿಯಾ 48 ರನ್​ಗಳ ಭರ್ಜರಿ ಜಯ ಸಾಧಿಸಿತು. ಬಾಂಗ್ಲಾ ಬ್ಯಾಟ್ಸ್​ಮನ್​ಗಳಾದ ಮುಷ್ಫೀಕರ್ ರಹೀಮ್ ಹಾಗೂ ಮೊಹಮ್ಮದುಲ್ಲ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರಾದರು ಅದು ಯಶಸ್ವಿಯಾಗದೆ ಸೋಲುಣ್ಣಬೇಕಾಯಿತು. ಈ ಪಂದ್ಯದಲ್ಲಿ 333 ರನ್ ಬಾರಿಸಿದ್ದು ಏಕದಿನ ಕ್ರಿಕೆಟ್​​ನಲ್ಲಿ ಇದುವರೆಗೆ ಬಾಂಗ್ಲಾದೇಶ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ.
First published: