ICC Test Rankings: ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ

ಕೊಹ್ಲಿಗೆ ಮತ್ತೆ ಅಗ್ರಸ್ಥಾನಕ್ಕೇರಲು ಮುಂದಿನ ತಿಂಗಳುವರೆಗೆ ಕಾಯಬೇಕಿದೆ. ಅಕ್ಟೋಬರ್ 1 ರಿಂದ ತವರಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಆಡಲಿದೆ.

Vinay Bhat | news18-kannada
Updated:September 17, 2019, 7:46 AM IST
ICC Test Rankings: ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ
ಸ್ಟೀವ್ ಸ್ಮಿತ್
Vinay Bhat | news18-kannada
Updated: September 17, 2019, 7:46 AM IST
ಬೆಂಗಳೂರು (ಸೆ. 17): ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐಸಿಸಿ ಟೆಸ್ಟ್ ಬ್ಯಾಟ್ಸ್​ಮನ್​ಗಳ​ ರ‍್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟಕ್ಕೇರಿದ್ದ ಸ್ಟೀವ್ ಸ್ಮಿತ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ.

ಆರಂಭದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಸ್ಮಿತ್ 904 ಅಂಕದೊಂದಿಗೆ ಮೊದಲ ಸ್ಥಾನಕ್ಕೇರಿದರು. ಕೊಹ್ಲಿ 903 ಅಂಕಹೊಂದಿ 2ನೇ ಸ್ಥಾನಕ್ಕೆ ಕುಸಿದಿದ್ದರು.

ಆ್ಯಶಸ್ ಸರಣಿಯ 4ನೇ ಟೆಸ್ಟ್​ನಲ್ಲಿ ಸ್ಮಿತ್ ಮತ್ತೆ ಅಬ್ಬರಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಅಮೋಘ ದ್ವಿಶತಕ ಸಿಡಿಸಿದರೆ, 2ನೇ ಇನ್ನಿಂಗ್ಸ್​ನಲ್ಲೂ 82 ರನ್ ಬಾರಿಸಿದ್ದರು. ಇದರಿಂದ ಆಸ್ಟ್ರೇಲಿಯಾ ಗೆಲುವು ಕಂಡು 2-1 ಮುನ್ನಡೆ ಸಾಧಿಸಿತಲ್ಲದೆ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದರು.

ಕಾರ್ತಿಕ್, ಅಶ್ವಿನ್, ಮುರಳಿ ವಿಜಯ್ ಆಡಿದ್ದ ಟೂರ್ನಿಯಲ್ಲಿ ಫಿಕ್ಸಿಂಗ್ ಭೂತ; ತನಿಖೆಗೆ ಬಿಸಿಸಿಐ ಆದೇಶ!

ಆ್ಯಶಸ್ ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಸ್ಮಿತ್ 7 ಇನ್ನಿಂಗ್ಸ್​ನಲ್ಲಿ 774 ರನ್ ಕಲೆಹಾಕಿದರು. ಇದರಲ್ಲಿ ಒಂದು ದ್ವಿಶತಕ, 2 ಶತಕ ಹಾಗೂ 3 ಅರ್ಧಶತಕ ಸೇರಿದ್ದವು. ಆ್ಯಶಸ್ ಟೆಸ್ಟ್​ ಸರಣಿಯ ಇತಿಹಾಸದಲ್ಲೇ ಗರಿಷ್ಠ ರನ್ ಕಲೆಹಾಕಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು.

ಇದಾದ ಬೆನ್ನಲ್ಲೆ ಐಸಿಸಿ, ಬ್ಯಾಟ್ಸ್​ಮನ್​ಗಳ ನೂತನ ಟೆಸ್ಟ್​ ರ್ಯಾಂಕಿಂಗ್​ ಪಟ್ಟಿ ಬಿಡುಗಡೆಗೊಳಿಸಿದೆ. ಸ್ಮಿತ್ 937 ಅಂಕಹೊಂದಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ. ಆರಂಭದಲ್ಲಿ ವಿರಾಟ್ ಕೊಹ್ಲಿಗಿಂತ 1 ಅಂಕದಲ್ಲಿ ಏರಿಕೆ ಕಂಡಿದ್ದ ಸ್ಮಿತ್ ಈಗ 34 ಪಾಯಿಂಟ್ ಅಧಿಕವಾಗಿದೆ.

ಕೊಹ್ಲಿಗೆ ಮತ್ತೆ ಅಗ್ರಸ್ಥಾನಕ್ಕೇರಲು ಮುಂದಿನ ತಿಂಗಳುವರೆಗೆ ಕಾಯಬೇಕಿದೆ. ಅಕ್ಟೋಬರ್ 1 ರಿಂದ ತವರಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಆಡಲಿದೆ.
Loading...

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...