ICC Test Ranking: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌, ಟಾಪ್ ಲಿಸ್ಟ್​ನಲ್ಲಿ ಟೀಂ ಇಂಡಿಯಾ ವೇಗಿ

ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Test) ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಜಿಗಿತ ಕಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ

  • Share this:
ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Test) ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್​( (ICC Test Ranking)ನಲ್ಲಿ ಜಿಗಿತ ಕಂಡಿದ್ದಾರೆ. ಇಂದು ಐಸಿಸಿ ತನ್ನ ಟೆಸ್ಟ್ ಬೌಲಿಂಗ್, ಬ್ಯಾಟಿಂಗ್ ಮತ್ತು ಆಲ್​ ರೌಂಡರ್​ ನ ಟೆಸ್ಟ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಬ್ಯಾಟಿಂಗ್ ಶ್ರೇಯಾಂಕದಲ್ಲಿ 5ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ ಶ್ರೀಲಂಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರೂ ಆಲ್​ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಆಲ್‌ರೌಂಡರ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟಾಪ್ 5ರಲ್ಲಿ ಬುಮ್ರಾ:

ಬೌಲರ್​ ಗಳ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಈ ಬಾರಿ ಐಸಿಸಿ ರ‍್ಯಾಂಕಿಂಗ್​ನಲ್ಲಿ ಟಾಪ್ 5 ಜನರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಮೊದಲ ಬಾರಿಗೆ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಅವರು ಬರೊಬ್ಬರಿ 6 ಸ್ಥಾನಗಳ ಜಿಗಿತ ಕಂಡು ಟಾಪ್ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕ:

1. ಪ್ಯಾಟ್ ಕಮಿನ್ಸ್ (892 ರೇಟಿಂಗ್)
2. ಆರ್. ಅಶ್ವಿನ್ (850 ​ರೇಟಿಂಗ್)
3. ಕಗಿಸೊ ರಬಾಡಾ (835 ರೇಟಿಂಗ್)
4. ಜಸ್ಪ್ರಿತ್ ಬೂಮ್ರಾ (830 ರೇಟಿಂಗ್)
5. ಶಾಹಿನ್ ಅಫ್ರಿದಿ (822 ರೇಟಿಂಗ್)
6. ಕೈಲೆ ಜೆಮಿಸನ್ (820 ರೇಟಿಂಗ್)
7. ಟಿಮ್ ಸೌಥಿ (790 ರೇಟಿಂಗ್)
8. ಜೇಮ್ಸ್ ಆ್ಯಡ್ರಸನ್ (780 ರೇಟಿಂಗ್)
9. ನೆಲ್ ವಾಗ್ನರ್ (777 ರೇಟಿಂಗ್)
10. ಜೋಸ್ ಹೈಸಲ್​ವುಡ್ (767 ರೇಟಿಂಗ್)

ಇದನ್ನೂ ಓದಿ: ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ನಂಬರ್ 1 ಪಟ್ಟ ಕಳೆದುಕೊಂಡ ಕೊಹ್ಲಿ, ಟಾಪ್ 10ನಲ್ಲಿ 5 ಭಾರತೀಯ ಆಟಗಾರರು

4 ಸ್ಥಾನ ಕುಸಿತ ಕಂಡ ಕೊಹ್ಲಿ:

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ಬಿಡುಗಡೆಯಾದ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿತ ಕಂಡಿದ್ದಾರೆ. ಹೌದು, ಶ್ರೀಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿಯೂ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆ 5ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿತಕಂಡಿದ್ದಾರೆ.  ಆದರೆ ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ:

1. ಮಾರ್ನಸ್ ಲ್ಯಾಬುಸ್ಚಾಗ್ನೆ (936 ರೇಟಿಂಗ್)
2. ಜೋ ರೂಟ್ (872 ರೇಟಿಂಗ್)
3. ಸ್ಟೀವ್ ಸ್ಮಿತ್ (851 ರೇಟಿಂಗ್)
4. ಕೇನ್ ವಿಲಯಂಸನ್ (844 ರೇಟಿಂಗ್)
5. ದಿಮುತ್ ಕರುಣರತ್ನೆ (781 ರೇಟಿಂಗ್)
6. ರೋಹಿತ್ ಶರ್ಮಾ (754 ರೇಟಿಂಗ್)
7. ಟ್ರಾವಿಸ್ ಹೆಡ್ (753 ರೇಟಿಂಗ್)
8. ಬಾಬರ್ ಅಜಂ (743 ರೇಟಿಂಗ್)
9. ವಿರಾಟ್ ಕೊಹ್ಲಿ (742 ರೇಟಿಂಗ್)
10. ರಿಷಭ್ ಪಂಥ (738 ರೇಟಿಂಗ್)

2ನೇ ಸ್ಥಾನಕ್ಕೆ ಕುಸಿದ ಜಡ್ಡು:

ಟೀಂ ಇಂಡಿಯಾದ ರವೀಂದ್ರ ಜಡೇಜಾ ಮೊಹಾಲಿ ಟೆಸ್ಟ್‌ನಲ್ಲಿ ಅಜೇಯ 175 ರನ್ ಮತ್ತು 9 ವಿಕೆಟ್‌ಗಳನ್ನು ಪಡೆದ ನಂತರ ಐಸಿಸಿ ಟೆಸ್ಟ್ ಆಲ್​ ರೌಂಡರ್ ಅಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ್ದರು. ಆದರೆ 2ನೇ ಟೆಸ್ಟ್ ನಲ್ಲಿ ಸಾಧಾರಣ ಪ್ರದರ್ಶನದಿಂದಾಗಿ ಜಡ್ಡು ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10ರಲ್ಲಿ ಮೂವರು ಭಾರತೀಯರು..!

ಐಸಿಸಿ ಟೆಸ್ಟ್ ಆಲ್​ರೌಂಡರ್  ಶ್ರೇಯಾಂಕ:

1. ಜೋಸನ್ ಹೋಲ್ಡರ್ (393 ರೇಟಿಂಗ್)
2. ರವೀಂದ್ರ ಜಡೇಜಾ (385 ರೇಟಿಂಗ್)
3. ಆರ್​. ಅಶ್ವಿನ್ (341 ರೇಟಿಂಗ್)
4. ಶಕೀಬ್ ಅಲ್ ಹಸನ್ (324 ರೇಟಿಂಗ್)
5. ಬೆನ್ ಸ್ಟೋಕ್ (292 ರೇಟಿಂಗ್)
6. ಮಿಚೆಲ್ ಸ್ಟಾರ್ಕ್ (284 ರೇಟಿಂಗ್)
7. ಕೈಲಿ ಜೆಮಿಸನ್ (274 ರೇಟಿಂಗ್)
8. ಕೊಲೀನ್ ಡೆ ಗ್ರ್ಯಾಂಡ್​ಹೋಮ್ (245 ರೇಟಿಂಗ್)
9. ಪ್ಯಾಟ್ ಕಮಿನ್ಸ್ (243 ರೇಟಿಂಗ್)
10. ಕ್ರಿಸ್ ವೋಕ್ಸ್ (230 ರೇಟಿಂಗ್)
Published by:shrikrishna bhat
First published: