ನವದೆಹಲಿ, ಜ. 21: ಇದೇ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ 2022ರ ಟಿ20 ವಿಶ್ವಕಪ್ ನಡೆಯಲಿದೆ. ಇದರ ವೇಳಾಪಟ್ಟಿಯನ್ನ ಐಸಿಸಿ ಇಂದು ಪ್ರಕಟಪಡಿಸಿದೆ. ಅಕ್ಟೋಬರ್ 16ರಂದು ಆರಂಭವಾಗುವ ಟಿ20 ವರ್ಲ್ಡ್ ಕಪ್ ನವೆಂಬರ್ 13ರವರೆಗೆ ನಡೆಯಲಿದೆ. ಯುಎಇಯಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಮಾದರಿಯಲ್ಲೇ ಇದೂ ನಡೆಯಲಿದೆ. ಅಂದರೆ ಟಾಪ್-8 ಟಿ20 ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಪಾಲ್ಗೊಂಡು ಅಲ್ಲಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಏರಲಿವೆ.
ಅಕ್ಟೋಬರ್ 16ರಂದು ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಮೊದಲ ಸುತ್ತಿನ ಪಂದ್ಯದ ಮೂಲಕ ಟೂರ್ನಿ ಶುರುವಾಗುತ್ತದೆ. ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ತಂಡಗಳು ಮೊದಲ ಸುತ್ತಿನಲ್ಲಿ ಆಡುತ್ತಿವೆ. ಎರಡು ಗುಂಪುಗಳಾಗಿ ವಿಭಾಗಿಸಲಾಗಿದ್ದು, ವಿಶ್ವಾದ್ಯಂತ ಕ್ವಾಲಿಫೈಯರ್ಗಳ ಮೂಲಕ ನಾಲ್ಕು ತಂಡಗಳು ಮೊದಲ ಸುತ್ತಿಗೆ ಆಗಮಿಸಲಿವೆ. ಸೂಪರ್-12 ಹಂತದಲ್ಲೂ ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
ಮೊದಲ ಸುತ್ತು:
ಎ ಗುಂಪು: ಶ್ರೀಲಂಕಾ, ನಮೀಬಿಯಾ, ಎ3, ಎ4
ಬಿ ಗುಂಪು: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಬಿ3, ಬಿ4
ಇದನ್ನೂ ಓದಿ: IND vs SA: ಪ್ರಥಮ ಓಡಿಐ- ಬವುಮಾ, ಡುಸೆ ಶತಕ; ಭಾರತ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ
ಸೂಪರ್-12 ಹಂತ:
ಗ್ರೂಪ್ 1: ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಆಫ್ಘಾನಿಸ್ತಾನ್, ಗ್ರೂಪ್ ಎ ವಿಜೇತ ತಂಡ, ಗ್ರೂಪ್ ಬಿ ರನ್ನರ್ ಅಪ್.
ಗ್ರೂಪ್ 2: ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್, ಗ್ರೂಪ್ ಬಿ ವಿನ್ನರ್, ಗ್ರೂಪ್ ಎ ರನ್ನರ್ ಅಪ್.
ಸೂಪರ್ 12 ಹಂತದಲ್ಲಿ ಎರಡನೇ ಗುಂಪಿನಲ್ಲಿರುವ ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲೂ ಭಾರತ ತನ್ನ ಅಭಿಯಾನವನ್ನು ಪಾಕಿಸ್ತಾನ ವಿರುದ್ಧವೇ ಆರಂಭಿಸಿತು.
ವೇಳಾಪಟ್ಟಿ:
![2022 T20 World Cup schedule]()
ಟಿ20 ವಿಶ್ವಕಪ್ 2022 ವೇಳಾಪಟ್ಟಿ
ಭಾರತದ ಪಂದ್ಯಗಳು:
1) ಅ. 23: ಪಾಕಿಸ್ತಾನ ವಿರುದ್ಧ
2) ಅ. 27: ಗ್ರೂಪ್ ಎ ರನ್ನರ್ ಅಪ್ ತಂಡದ ವಿರುದ್ಧ
3) ಅ. 30: ಸೌತ್ ಆಫ್ರಿಕಾ ವಿರುದ್ಧ
4) ನ. 2: ಬಾಂಗ್ಲಾದೇಶ ವಿರುದ್ಧ
5) ನ. 6: ಗ್ರೂಪ್ ಬಿ ವಿನ್ನರ್ ತಂಡದ ವಿರುದ್ಧ
ಇದನ್ನೂ ಓದಿ: ‘ಹತ್ತು ಓವರಲ್ಲಿ ಎಲ್ರನ್ನ ಔಟ್ ಮಾಡ್ತೀರಾ?’- ಪಾಕ್ ಕ್ರಿಕೆಟಿಗನಿಗೆ ಕೊಹ್ಲಿ ಡೈಲಾಗ್ ಮೆಲುಕು
ಪಂದ್ಯಗಳು ನಡೆಯುವ ಸ್ಥಳ:
ಮೊದಲ ಸುತ್ತಿನ ಪಂದ್ಯಗಳು ಗೀಲಾಂಗ್ ಮತ್ತು ಹೋಬರ್ಟ್ನ್ಲಿ ನಡೆಯಲಿವೆ.
ಸೂಪರ್12 ಹಂತದ ಪಂದ್ಯಗಳು ಸಿಡ್ನಿ, ಪರ್ತ್, ಹೋಬರ್ಟ್, ಮೆಲ್ಬೋರ್ನ್, ಬ್ರಿಸ್ಬೇನ್, ಅಡಿಲೇಡ್ನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ನಡೆಯಲಿವೆ.
ಸೆಮಿಫೈನಲ್ ಪಂದ್ಯಗಳು ಸಿಡ್ನಿ ಮತ್ತು ಅಡಿಲೇಡ್ನಲ್ಲಿ ನಡೆದರೆ ಫೈನಲ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಒಟ್ಟು 16 ತಂಡಗಳು ಹಣಾಹಣಿ ನಡೆಸಲಿರುವ ಈ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ