ICC T20 World Cup| ಮಾಜಿ ಆಟಗಾರ ಆಕಾಶ್ ಚೋಪ್ರ ಪ್ರಕಾರ ಸೆಮಿ ಫೈನಲ್ ತಲುಪಬಲ್ಲ ಆ ನಾಲ್ಕು ತಂಡಗಳು ಯಾವುವು?

ಪ್ರಾಸಂಗಿಕವಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್ 12 ರ ಗ್ರೂಪ್ 1 ರಿಂದ ಸೆಮಿ ಫೈನಲ್​ ತಲುಪಲಿದ್ದರೆ, ಭಾರತ ಮತ್ತು ಪಾಕಿಸ್ತಾನ ಗ್ರೂಪ್ 2 ರಿಂದ ಸೆಮಿ ಫೈನಲ್​ಗೆ ತಲುಪಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಆಕಾಶ ಚೋಪ್ರ.

ಆಕಾಶ ಚೋಪ್ರ.

  • Share this:
    ವಿಶ್ವಕಪ್​ ಟಿ20-2021 ಟೂರ್ನಿ (T20 World Cup) ​ಯುಎಇ (UAE) ಮತ್ತು ಒಮಾನ್‌ನಲ್ಲಿ (OMAN) ಅಕ್ಟೋಬರ್ 17 ರಿಂದ ನವೆಂಬರ್ 14 ರ ವರೆಗೆ ನಡೆಯಲಿದೆ. ಈ ಟೂರ್ನಿಯ ಅಂತಿಮ ಹಂತದಲ್ಲಿ 12 ತಂಡಗಳು ಸ್ಪರ್ಧಿಸಲಿವೆ. ಆದರೆ, ಸೆಮಿಫೈನಲ್​ ತಲುಪುವ ನಾಲ್ಕು ತಂಡಗಳು ಯಾವುವು? ಎಂಬ ಅಂಶ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಟೆಸ್ಟ್​ ಆರಂಭಿಕ ಬ್ಯಾಟ್ಸ್​ಮನ್ ಆಕಾಶ್ ಚೋಪ್ರಾ (Akash Chopra) ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2021 ರ ತಮ್ಮ ನೆಚ್ಚಿನ ಸೆಮಿಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ್ದು, ಅವರ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ.

    ಐದು ವರ್ಷಗಳ ನಂತರ ನಡೆಯುತ್ತಿರುವ ಈ ಟಿ 20 ವಿಶ್ವಕಪ್​ನಲ್ಲಿ ಪ್ರಬಲ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಎಲ್ಲಾ ತಂಡಗಳು ಈ ಬಾರಿಯ ಟಿ20 ಕಪ್​ ಗೆಲ್ಲಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿವೆ ಈ ನಡುವೆ ಆಕಾಶ್ ಚೋಪ್ರ ತಮ್ಮ ನೆಚ್ಚಿನ 4 ತಂಡಗಳನ್ನು ಹೆಸರಿಸಿದ್ದು, ಈ ತಂಡಗಳು ಸೆಮಿ ಫೈನಲ್ ತಲುಪಲಿವೆ ಎಂದು ಭವಿಷ್ಯ ನುಡಿದಿದ್ದಾರೆ.​



    ಟ್ವಿಟರ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, ಅಭಿಮಾನಿಯೊಬ್ಬರು ಆಕಾಶ್ ಚೋಪ್ರಾ ಅವರನ್ನು ಟಿ 20 ವಿಶ್ವಕಪ್ ಗೆ ಸೆಮಿಫೈನಲಿಸ್ಟ್ ಗಳನ್ನು ಆಯ್ಕೆ ಮಾಡುವಂತೆ ಕೇಳಿಕೊಂಡರು.

    ಇದಕ್ಕೆ ಉತ್ತರ ನೀಡಿರುವ ಆಕಾಶ್ ಚೋಪ್ರಾ, "ಪ್ರಾಸಂಗಿಕವಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್ 12 ರ ಗ್ರೂಪ್ 1 ರಿಂದ ಸೆಮಿ ಫೈನಲ್​ ತಲುಪಲಿದ್ದರೆ, ಭಾರತ ಮತ್ತು ಪಾಕಿಸ್ತಾನ ಗ್ರೂಪ್ 2 ರಿಂದ ಸೆಮಿ ಫೈನಲ್​ಗೆ ತಲುಪಲಿದೆ" ಎಂದು ಅವರು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಭಾರತ ತಂಡದ ಕಾಂಬಿನೇಷನ್ ಬಗ್ಗೆಯೂ ಮಾತನಾಡಿರುವ ಆಕಾಶ್ ಚೋಪ್ರಾ, "ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹರ್ ನಡುವೆ ಒಬ್ಬರನ್ನು ಟಿ 20 ವಿಶ್ವಕಪ್‌ಗೆ ಸ್ಪಿನ್ ಕಾಂಬಿನೇಷನ್ ಆಗಿ ಆಯ್ಕೆ ಮಾಡಬಹುದಾಗಿದ್ದು, ಸ್ಪಿನ್ ವಿಭಾಗ ಸಾಕಷ್ಟು ಬಲಿಷ್ಠವಾಗಿದೆ. ಇನ್ನೂ ಆಲ್ ರೌಂಡರ್ ಅಕ್ಸರ್ ಪಟೇಲ್ ಸಹ ಸ್ಪಿನ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ.

    ಕುತೂಹಲ ಮೂಡಿಸಿದ ಭಾರತ-ಪಾಕ್ ಪಂದ್ಯ:

    ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈವರೆಗೆ ಪಂದ್ಯ ನಡೆದಿಲ್ಲ. ಆದರೆ, ಅಕ್ಟೋಬರ್ 24 ರಂದು ದುಬೈನಲ್ಲಿ ಈ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯವನ್ನು ಇಡೀ ವಿಶ್ವ ಕುತೂಹಲದಿಂದ ಎದುರು ನೋಡುತ್ತಿದ್ದು, ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.
    Published by:MAshok Kumar
    First published: