HOME » NEWS » Sports » CRICKET ICC SHOULD DOCK INDIAS POINTS IF PITCH FOR NEXT TEST IN AHMEDABAD IS SAME PANESAR ZP

Monty Panesar: ಪಿಚ್ ಕಳಪೆಯಾಗಿದ್ರೆ ಭಾರತದ ಅಂಕ ಕಡಿತಗೊಳಿಸಿ..!

ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಈ ಪಂದ್ಯವನ್ನು ಗೆಲ್ಲುವ ಸರಣಿಯಲ್ಲಿ ಸಮಬಲ ಸಾಧಿಸಲು ಇಂಗ್ಲೆಂಡ್ ಯೋಜನೆ ರೂಪಿಸುತ್ತಿದೆ. ಇನ್ನು 2-1 ಮುನ್ನಡೆ ಹೊಂದಿರುವ ಭಾರತ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ.

news18-kannada
Updated:March 1, 2021, 5:36 PM IST
Monty Panesar: ಪಿಚ್ ಕಳಪೆಯಾಗಿದ್ರೆ ಭಾರತದ ಅಂಕ ಕಡಿತಗೊಳಿಸಿ..!
monty
  • Share this:
ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಚರ್ಚೆಗೆ ಕಾರಣವಾಗಿದೆ. ಅಹಮದಾಬಾದ್​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯವು ಕೇವಲ 2 ದಿನಕ್ಕೆ ಅಂತ್ಯವಾಗಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತವು ಕಳಪೆ ಪಿಚ್​ ನಿರ್ಮಿಸಿ ಪಂದ್ಯವನ್ನು ಗೆದ್ದುಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದರಲ್ಲೂ ಇಂಗ್ಲೆಂಡ್​ ಮಾಜಿ ಆಟಗಾರರಾದ ಮೈಕಲ್ ವಾನ್, ಅಲೆಸ್ಟರ್ ಕುಕ್ ಹಾಗೂ ಮಾಂಟಿ ಪನೇಸರ್ ಪಿಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇದೀಗ ಅಹಮದಾಬಾದ್ ಪಿಚ್ ಬಗ್ಗೆ ಟೀಕೆಗಳು ಮುಂದುವರೆದಿದೆ.

ನಾಲ್ಕನೇ ಟೆಸ್ಟ್ ಪಂದ್ಯವು ಅಹಮದಾಬಾದ್​ನಲ್ಲೇ ನಡೆಯಲಿದ್ದು, ಹೀಗಾಗಿ ಅಂತಿಮ ಪಂದ್ಯದ ಪಿಚ್ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿದೆ. ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ಮೂರನೇ ಪಂದ್ಯದಂತೆ ಅಂತಿಮ ಟೆಸ್ಟ್ ವೇಳೆ ಕಳಪೆ ಪಿಚ್ ನಿರ್ಮಿಸಿದರೆ ಭಾರತ ತಂಡ ಪಾಯಿಂಟ್ ಕಡಿತ ಮಾಡಬೇಕು ಎಂದಿದ್ದಾರೆ.

ನನ್ನ ಪ್ರಕಾರ ಮುಂದಿನ ಟೆಸ್ಟ್ ಪಂದ್ಯದಲ್ಲೂ ಹಿಂದಿನಂತೆ ಪಿಚ್ ಇದ್ದರೆ ಐಸಿಸಿ ಭಾರತದ ಅಂಕಗಳ ಕಡಿತ ಮಾಡಬೇಕು. ವಿಶ್ವದ ಅತೀ ದೊಡ್ಡ ಕ್ರಿಕೆಟ್​ ಗ್ರೌಂಡ್​ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪ್ರತಿಯೊಬ್ಬರು ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಿರುತ್ತಾರೆ. ಟರ್ನಿಂಗ್ ವಿಕೆಟ್ ಆಗಿದ್ದರೂ ಕ್ಯೂರೇಟರ್ ಉತ್ತಮವಾದ ಪಿಚ್ ನಿರ್ಮಿಸಬೇಕು. ಎಲ್ಲರೂ ಈ ಮೊದಲು ಮೊದಲೆರಡು ಟೆಸ್ಟ್​ ನಡೆದ ಚೆನ್ನೈ ಪಿಚ್ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಅಹಮದಾಬಾದ್​ ಪಿಚ್​ ಅದಕ್ಕಿಂತಲೂ ಕಳಪೆಯಾಗಿದೆ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.

ಇದೇ ವೇಳೆ ಪಿಚ್ ಸ್ಪಿನ್ನರ್​ಗಳಿಗೆ ಸಹಕಾರಿ ಆಗಿರುವುದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಎಂದ ಪನೇಸರ್, ಟೆಸ್ಟ್ ಪಂದ್ಯವು ಕನಿಷ್ಠ ಮೂರರಿಂದ ಮೂರುವರೆ ದಿನಗಳ ಕಾಲ ನಡೆಯುವಂತಿರಬೇಕು. ಭಾರತ ಮುಂದೆಯೂ ಟರ್ನಿಂಗ್ ಪಿಚ್‌ಗಳನ್ನು ನಿರ್ಮಿಸಲಿದೆ. ಆದರೆ ಅದು ಕನಿಷ್ಠ ಮೂರರಿಂದ ಮೂರುವರೆ ದಿನಗಳ ಕಾಲ ಪಂದ್ಯ ನಡೆಯುವ ರೀತಿಯಲ್ಲಿ ಪಿಚ್ ಇರಬೇಕು ಎಂದು ಮಾಂಟಿ ಪನೆಸರ್ ಹೇಳಿದ್ದಾರೆ.

ಒಟ್ಟಿನಲ್ಲಿ ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಈ ಪಂದ್ಯವನ್ನು ಗೆಲ್ಲುವ ಸರಣಿಯಲ್ಲಿ ಸಮಬಲ ಸಾಧಿಸಲು ಇಂಗ್ಲೆಂಡ್ ಯೋಜನೆ ರೂಪಿಸುತ್ತಿದೆ. ಇನ್ನು 2-1 ಮುನ್ನಡೆ ಹೊಂದಿರುವ ಭಾರತ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ.
Published by: zahir
First published: March 1, 2021, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories