• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • 'ಸಚಿನ್​ಗಿಂತ ಬೆನ್ ಸ್ಟೋಕ್ಸ್​ ಶ್ರೇಷ್ಠ ಕ್ರಿಕೆಟಿಗ'; ನೆಟ್ಟಿಗರನ್ನು ಮತ್ತೆ ರೊಚ್ಚಿಗೆಬ್ಬಿಸಿದ ಐಸಿಸಿ ಟ್ವೀಟ್

'ಸಚಿನ್​ಗಿಂತ ಬೆನ್ ಸ್ಟೋಕ್ಸ್​ ಶ್ರೇಷ್ಠ ಕ್ರಿಕೆಟಿಗ'; ನೆಟ್ಟಿಗರನ್ನು ಮತ್ತೆ ರೊಚ್ಚಿಗೆಬ್ಬಿಸಿದ ಐಸಿಸಿ ಟ್ವೀಟ್

ಸಚಿನ್ ತೆಂಡೂಲ್ಕರ್ ಮತ್ತು ಬೆನ್ ಸ್ಟೋಕ್ಸ್​

ಸಚಿನ್ ತೆಂಡೂಲ್ಕರ್ ಮತ್ತು ಬೆನ್ ಸ್ಟೋಕ್ಸ್​

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆ್ಯಶಸ್ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಬೆನ್ ಸ್ಟೋಕ್ಸ್​ ಇಂಗ್ಲೆಂಡ್​ಗೆ ಗೆಲುವನ್ನು ತಂದುಕೊಟ್ಟಿದ್ದರು.

  • Share this:

ಬೆಂಗಳೂರು (ಆ. 28): ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪದೇಪದೇ ತಪ್ಪುಗಳನ್ನು ಮಾಡಿ ನೆಟ್ಟಿಗರಿಂದ ಅವಮಾನಕ್ಕೀಡಾಗುತ್ತಿದ್ದ ಐಸಿಸಿ(ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ) ಈಗ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ.

ಐಸಿಸಿಯ ಮತ್ತೊಂದು 'ಕ್ರಿಕೆಟ್ ವಿಶ್ವಕಪ್' ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಂಗ್ಲೆಂಡ್ 2019 ವಿಶ್ವಕಪ್​ ಜಯ ಸಾಧಿಸಿದಾಗ ಫೋಟೋ ಒಂದನ್ನು ಹಂಚಿಕೊಂಡಿತ್ತು. ಇಂಗ್ಲೆಂಡ್ ಗೆಲುವಿನ ರೂವಾರಿ ಬೆನ್ ಸ್ಟೋಕ್ಸ್​ ಜೊತೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇರುವ ಫೋಟೋ ಹಾಕಿ ಸ್ಟೋಕ್ಸ್​​ರನ್ನು ಸಚಿನ್​ಗಿಂತ ಶ್ರೇಷ್ಠ ಆಟಗಾರ ಎನ್ನುವ ರೀತಿ ಬಣ್ಣಿಸಿತ್ತು. ಇದಕ್ಕೆ ಭಾರೀ ವಿರೋಧ ಕೂಡ ವ್ಯಕ್ತವಾಗಿದ್ದವು.

 



ಕ್ರಿಕೆಟ್ ಇತಿಹಾಸದಲ್ಲಿ ಈ ದಿನವನ್ನು ಯಾರಿಂದಲೂ ಎಂದಿಗೂ ಮರೆಯಲು ಅಸಾಧ್ಯ!

ಆದರೀಗ ಐಸಿಸಿ ಮತ್ತೆ ಇದೇ ಪೋಸ್ಟ್​ ಅನ್ನು ರಿ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆ್ಯಶಸ್ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಬೆನ್ ಸ್ಟೋಕ್ಸ್​ ಇಂಗ್ಲೆಂಡ್​ಗೆ ಗೆಲುವನ್ನು ತಂದುಕೊಟ್ಟಿದ್ದರು. ಹೀಗಾಗಿ ಐಸಿಸಿ ತನ್ನ ಹಳೆಯ ಟ್ವೀಟ್ಅನ್ನು ರಿ ಟ್ವೀಟ್ ಮಾಡಿದ್ದು, ‘ನಾನು ಅಂದೇ ಹೇಳಿರಲಿಲ್ಲವೇ’ ಎಂದು ಬರೆದುಕೊಂಡಿದೆ.

 


ಇದರಿಂದ ಕ್ರೀಡಾಭಿಮಾನಿಗಳು ರೋಚ್ಚಿಗೆದ್ದಿದ್ದು ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ. ಸಚಿನ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಕ್ರಿಕೆಟಿಗ, ಸ್ಟೋಕ್ಸ್​ಗಿಂತ ಸಚಿನ್​ಗೆ ಹೆಚ್ಚಿನ ಗೌರವವಿದೆ. 90ರ ದಶಕದಲ್ಲಿ ಕ್ರಿಕೆಟ್ ಅನ್ನು ಆಳುತ್ತಿದ್ದವರು ಇದೇ ಸಚಿನ್ ಎಂದು ಹೇಳಿಕೊಂಡಿದ್ದಾರೆ.

ಧೋನಿ ನಿವೃತ್ತಿ!: ಟೀಂ ಇಂಡಿಯಾ ಮಾಜಿ ನಾಯಕನಿಂದ ಮಹತ್ವದ ಹೇಳಿಕೆ

 














ಆ್ಯಶಸ್ ಸರಣಿಯ 3ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದಿಂದ ಗೆಲ್ಲಲು 359 ರನ್​ಗಳ ಗುರಿ ಪಡೆದ ಇಂಗ್ಲೆಂಡ್, 286 ರನ್​ಗೆ 9 ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ 73 ರನ್​ಗಳ ಅವಶ್ಯಕತೆಯಿತ್ತು. ಇನ್ನೇನು ಗೆಲುವು ನಮ್ಮದೆ ಎಂದು ಬೀಗುತ್ತಿದ್ದ ಕಾಂಗರೂ ಪಡೆಗೆ ಬೆನ್ ಸ್ಟೋಕ್ಸ್​ ಶಾಕ್ ಮೇಲೆ ಶಾಕ್ ನೀಡಿದರು. ಕೊನೆಯ ವಿಕೆಟ್​ಗೆ ಜಾಕ್ ಲೀಚ್(ಅಜೇಯ 1) ಜೊತೆಗೂಡಿ ಆಕರ್ಷಕ ಆಟ ಪ್ರದರ್ಶಿಸಿದ ಸ್ಟೋಕ್ಸ್​ ಇಂಗ್ಲೆಂಡ್​ಗೆ ಗೆಲುವಿನ ಸಿಹಿ ನೀಡಿದರು. ಈ ಪಂದ್ಯದಲ್ಲಿ ಸ್ಟೋಕ್ಸ್​ 219 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್​​ನೊಂದಿಗೆ  ಅಜೇಯ 135 ರನ್ ಚಚ್ಚಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published: