ICC World Cup: ಧೋನಿ ಗ್ಲೌವ್ಸ್ ಬಳಿಕ ವಿವಾದದಲ್ಲಿ ಕ್ರಿಸ್ ಗೇಯ್ಲ್ ಬ್ಯಾಟ್..!

ಈ ಹಿಂದೆ ಟೀಂ ಇಂಡಿಯಾ ಆಟಗಾರ ಎಂ ಎಸ್ ಧೋನಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇರುವ ಗ್ಲೌವ್ಸ್ ಧರಿಸಲು  ಐಸಿಸಿ ನಿರಾಕರಿಸಿದೆ. ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್​ ಧೋನಿ ತೊಟ್ಟಿದ್ದ ಗ್ಲೌವ್ಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಹೊಂದಿತ್ತು. 

zahir | news18
Updated:June 12, 2019, 5:44 PM IST
ICC World Cup: ಧೋನಿ ಗ್ಲೌವ್ಸ್ ಬಳಿಕ ವಿವಾದದಲ್ಲಿ ಕ್ರಿಸ್ ಗೇಯ್ಲ್ ಬ್ಯಾಟ್..!
ಗೇಲ್
zahir | news18
Updated: June 12, 2019, 5:44 PM IST
ವಿಶ್ವಕಪ್ ಕ್ರಿಕೆಟ್ 2019 ವಿವಾದಗಳಿಂದಲೇ ಸುದ್ದಿಯಲ್ಲಿದೆ. ಒಂದೆಡೆ ಮಹೇಂದ್ರ ಸಿಂಗ್ ಧೋನಿಯ ಗ್ಲೌವ್ಸ್​ ಬಗ್ಗೆ ಐಸಿಸಿ ಆಕ್ಷೇಪ ಎತ್ತಿದರೆ, ಇನ್ನೊಂದೆಡೆ ಝಿಂಗ್ ಬೇಲ್ಸ್​ ಬಗ್ಗೆ ಆಟಗಾರರಿಂದಲೇ ಆಕ್ರೋಶಗಳು ವ್ಯಕ್ತವಾಗಿವೆ. ಧೋನಿ ಗ್ಲೌವ್ಸ್ ವಿವಾದ  ತಣ್ಣಗಾಗುತ್ತಿದ್ದಂತೆ ಈಗ ಬ್ಯಾಟ್​ವೊಂದು ಹೊಸ ಚರ್ಚೆ ಹುಟ್ಟುಹಾಕಿದೆ.

ವೆಸ್ಟ್​ ಇಂಡೀಸ್ ತಂಡದ ದೈತ್ಯ ಸ್ಪೋಟಕ ಆಟಗಾರ ಕ್ರಿಸ್ ಗೇಲ್​ ಬ್ಯಾಟ್ ಮೇಲೆ 'ಯುನಿವರ್ಸ್ ಬಾಸ್' ಸ್ಟಿಕ್ಕರ್ ಬಳಸುವುದನ್ನು ಐಸಿಸಿ ಆಕ್ಷೇಪಿಸಿದೆ. ವಿಶ್ವ ಕ್ರಿಕೆಟ್​ನಲ್ಲಿ 'ಯುನಿವರ್ಸ್ ಬಾಸ್' ಎಂದೇ ಖ್ಯಾತಿ ಪಡೆದಿರುವ ಗೇಲ್ ಇದನ್ನೇ ತಮ್ಮ ಬ್ಯಾಟ್​ ಮೇಲೆ ಬರೆಸಿಕೊಳ್ಳಲು ಮುಂದಾಗಿದ್ದರು.

ಧೋನಿಯ ಕೈ ಗ್ಲೌಸು ಭಾರೀ ಚರ್ಚೆಗೆ ಗ್ರಾಸವಾಗಿದ್ದರಿಂದ ಕ್ರಿಸ್ ಗೇಲ್ ಐಸಿಸಿಯಿಂದ 'ದಿ ಯುನಿವರ್ಸ್ ಬಾಸ್' ಲೋಗೋಗೆ ಅನುಮತಿಯನ್ನು ಕೇಳಿದ್ದರು. ಆದರೆ ತಮ್ಮ ಬಿರುದನ್ನು ಬಳಸಬಾರದೆಂದು ಐಸಿಸಿ ವಿಂಡೀಸ್ ದಾಂಡಿಗನಿಗೆ ಸ್ಪಷ್ಟ ಸೂಚನೆ ನೀಡಿದೆ.

ತಮ್ಮದೇ ಬ್ರ್ಯಾಂಡ್ ಹುಟ್ಟು ಹಾಕುವ ಯೋಚನೆಯಲ್ಲಿದ್ದ ಕ್ರಿಸ್ ಗೇಲ್ ಅವರ ಕೋರಿಕೆಗೆ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು,  ವೈಯುಕ್ತಿಕ ಸಂದೇಶಗಳಿಗಾಗಿ ಬ್ಯಾಟ್ ಅಥವಾ ಕ್ರೀಡಾ ಬಟ್ಟೆಯನ್ನು ಬಳಸುವಂತಿಲ್ಲ. ಈ ರೀತಿಯಾಗಿ ಸಂದೇಶಗಳನ್ನು ಕ್ರಿಕೆಟ್ ಮೂಲಕ ನೀಡಲು ಅವಕಾಶವಿಲ್ಲ ಎಂದು ಕ್ರಿಕೆಟ್ ಕೌನ್ಸಿಲ್ ಸ್ಪಷ್ಟಪಡಿಸಿದೆ.

ಈ ಹಿಂದೆ ಟೀಂ ಇಂಡಿಯಾ ಆಟಗಾರ ಎಂ ಎಸ್ ಧೋನಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇರುವ ಗ್ಲೌವ್ಸ್ ಧರಿಸಲು  ಐಸಿಸಿ ನಿರಾಕರಿಸಿದೆ. ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್​ ಧೋನಿ ತೊಟ್ಟಿದ್ದ ಗ್ಲೌವ್ಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಹೊಂದಿತ್ತು.

ಈ ಬಗ್ಗೆ ಅಪಸ್ವರ ಎತ್ತಿದ ಐಸಿಸಿ, ಬಿಸಿಸಿಐಗೆ ವರದಿ ನೀಡುವಂತೆ ಕೇಳಿಕೊಂಡಿತ್ತು. ಈ ವೇಳೆ ಧೋನಿ ಗ್ಲೌವ್ಸ್​ನಲ್ಲಿನ ಚಿನ್ಹೆ ತೆಗೆದು ಹಾಕುವಂತೆ  ತಿಳಿಸಿದ ಕ್ರಿಕೆಟ್ ಕೌನ್ಸಿಲ್, ಈ ರೀತಿ ಚಿಹ್ನೆ ಧರಿಸಬೇಕಾದರೆ ತಂಡ ಅಥವಾ ಆಟಗಾರ ಐಸಿಸಿಯಿಂದ ಅನುಮತಿ ಪಡೆಯಬೇಕು. ಧೋನಿ ಧರಿಸಿರುವುದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಕ್ರೀಡಾ ಸ್ಪೂರ್ತಿ ಹೊರತು ಪಡಿಸಿ ಯಾವುದೇ ಸಂದೇಶಗಳಿಗೂ ಕ್ರಿಕೆಟ್​ನಲ್ಲಿ ಅವಕಾಶವಿಲ್ಲ. ಮುಂದಿನ ಪಂದ್ಯಕ್ಕೆ ಗ್ಲೌವ್ಸ್ ಬಳಸದಂತೆ ಸೂಚಿಸಿದೆ.

ಇದನ್ನೂ ಓದಿ: ಡಾ.ರಾಜ್ ಕುಟುಂಬದಿಂದ ಮತ್ತೊಬ್ಬ ಹೀರೋ ಎಂಟ್ರಿಗೆ ಭರ್ಜರಿ ತಯಾರಿ..!

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...