ಮಾರಕ ಕೊರೋನಾ ವೈರಸ್ ಮಧ್ಯೆ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಿತ್ತು ಅಮೋಘ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ವೃತ್ತೀ ಜೀವನದಲ್ಲಿ ಇದೇ ಮೊದಲ ಬಾರಿಗೆ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಯಾವುದೇ ವೆಸ್ಟ್ ಇಂಡೀಸ್ ಆಟಗಾರ ಮಾಡಿರದ ವಿಶೇಷ ಸಾಧನೆ ಇದಾಗಿದೆ.
ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೊದಲ ಟೆಸ್ಟ್ ಪಂದ್ಯದ ನಂತರ ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಜೊತೆಗೆ 20 ವರ್ಷಗಳ ಬಳಿಕ ವಿಂಡೀಸ್ ಪರ ಎರಡನೇ ಅತಿ ಹೆಚ್ಚು ರೇಟಿಂಗ್ ಅಂಕ ಸಂಪಾದಿಸಿ ದಾಖಲೆ ಬರೆದಿದ್ದಾರೆ.
Rishabh Pant: ಕೊಹ್ಲಿ, ಧೋನಿ ಹಾಗೂ ರೋಹಿತ್: ಈ ಮೂವರಲ್ಲಿ ಪಂತ್ ಬ್ಯಾಟಿಂಗ್ ಪಾರ್ಟನರ್ ಯಾರಂತೆ ಗೊತ್ತಾ?
ಮಂಗಳವಾರ ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಹೋಲ್ಡರ್ ಕಿವೀಸ್ ಬೌಲರ್ ನೀಲ್ ವ್ಯಾಗ್ನರ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಾಗ್ನರ್ 843 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹೋಲ್ಡರ್ 862 ಅಂಕಹೊಂದಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೊದಲ ಸ್ಥಾನದಲ್ಲಿ 904 ರೇಟಿಂಗ್ನೊಂದಿಗೆ ಆಸ್ಟ್ರೇಲಿಯಾ ಬೌಲರ್ ಪ್ಯಾಟ್ ಕಮಿನ್ಸ್ ಇದ್ದಾರೆ.
ಇನ್ನೂ ಬೌಲರ್ಗಳ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ಟಾಪ್ 10 ರಲ್ಲಿ ಏಕೈಕ ಭಾರತೀಯ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. 779 ಪಾಯಿಂಟ್ ಹೊಂದಿ ಜಸ್ಪ್ರೀತ್ ಬುಮ್ರಾ 7ನೇ ಸ್ಥಾನದಲ್ಲಿದ್ದಾರೆ.
Bhuvneshwar Kumar: ತಮ್ಮ ವೃತ್ತಿ ಜೀವನದಲ್ಲಿ ಭುವನೇಶ್ವರ್ ಪಡೆದ ಮೊದಲ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!
ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆಯುವುದರ ಜೊತೆಗೆ ಹೋಲ್ಡರ್ 862 ರೇಟಿಂಗ್ ಅಂಕಗಳನ್ನು ಪಡೆಯುವ ಮೂಲಕ ಕರ್ಟ್ನಿ ವಾಲ್ಸ್ ಬಳಿಕ ಇಷ್ಟು ಅಂಕ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2000ನೇ ಇಸವಿಯಲ್ಲಿ ಕರ್ಟ್ನಿ ವಾಲ್ಸ್ 866 ಅಂಕಗಳನ್ನು ಸಂಪಾದಿಸಿದ್ದರು. ಇದು ವೆಸ್ಟ್ ಇಂಡೀಸ್ ಬೌಲರ್ ಒಬ್ಬರ ಶ್ರೇಷ್ಠ ಸಾಧನೆಯಾಗಿದೆ. ಜೊತೆಗೆ ಹೋಲ್ಡರ್ ಆಲ್ರೌಂಡರ್ ಶ್ರೇಯಾಂಕದಲ್ಲಿ ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ಟೋಕ್ಸ್ 2 ಹಾಗೂ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ.
ಕೋವಿಡ್-19ನಿಂದಾಗಿ ಕಳೆದ ಮಾರ್ಚ್ ನಿಂದ ಮೈದಾನಕ್ಕಿಳಿಯದ ಭಾರತೀಯ ಕ್ರಿಕೆಟಿಗರು, ಬ್ಯಾಟ್ಸ್ ಮನ್ ಮತ್ತು ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ ಹತ್ತರಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಚೇತೇಶ್ವರ ಪೂಜಾರ ಮತ್ತು ರಹಾನೆ ಕ್ರಮವಾಗಿ ಏಳು ಮತ್ತು 9ನೇ ಸ್ಥಾನ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ