• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ವಿರಾಟ್ ಕೊಹ್ಲಿ, ವಿಲಿಯಮ್ಸನ್ ಹಿಂದಿಕ್ಕಿ ದಶಕದ ಟೆಸ್ಟ್ ಕ್ರಿಕೆಟಿಗ ಎನಿಸಿಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್

ವಿರಾಟ್ ಕೊಹ್ಲಿ, ವಿಲಿಯಮ್ಸನ್ ಹಿಂದಿಕ್ಕಿ ದಶಕದ ಟೆಸ್ಟ್ ಕ್ರಿಕೆಟಿಗ ಎನಿಸಿಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್

Virat-Kane

Virat-Kane

ದಶಕದ ಟೆಸ್ಟ್ ಆಟಗಾರರ ನಾಮನಿರ್ದೇಶೀತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (ಭಾರತ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್), ರಂಗನಾ ಹೆರಾತ್ (ಶ್ರೀಲಂಕಾ), ಮತ್ತು ಯಾಸಿರ್ ಷಾ (ಪಾಕಿಸ್ತಾನ್) ಹೆಸರುಗಳು ಕಾಣಿಸಿಕೊಂಡಿದ್ದವು.

 • Share this:

  ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಶಕದ ಕ್ರಿಕೆಟಿಗರ ಹೆಸರುಗಳನ್ನು ಪ್ರಕಟಿಸಿದೆ. ದಶಕದ ಏಕದಿನ ಕ್ರಿಕೆಟಿಗನ ಗೌರವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಾದರೆ, ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ದಶಕದ ಟೆಸ್ಟ್​ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸದ್ಯ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್ ಕಳೆದ ಒಂದು ದಶಕದಲ್ಲಿ 26 ಟೆಸ್ಟ್ ಶತಕಗಳನ್ನು ಬಾರಿಸಿದ್ದರು.


  ಕಳೆದ 10 ವರ್ಷಗಳಲ್ಲಿ ಸ್ಟೀವ್ ಸ್ಮಿತ್ 74 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 62.32ರ ಸರಾಸರಿಯಲ್ಲಿ 7229 ರನ್ ಕಲೆಹಾಕಿದ್ದಾರೆ. ಇದೇ ವೇಳೆ 26 ಶತಕ, 29 ಅರ್ಧ ಶತಕ, 3 ದ್ವಿಶತಕಗಳನ್ನು ಸಿಡಿಸಿದ್ದರು ಎಂಬುದು ವಿಶೇಷ. ಇದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಕ್ರಿಕೆಟ್​ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಇದಾಗ್ಯೂ ಕಂಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಕಳೆದ ಒಂದು ವರ್ಷದಿಂದ ಟೆಸ್ಟ್ ರ್ಯಾಕಿಂಗ್​ನಲ್ಲಿ ಅಗ್ರ ಬ್ಯಾಟ್ಸ್​ಮನ್​ಗಳಲ್ಲಿ ಗುರುತಿಸಿಕೊಂಡಿದ್ದಾರೆ.
  ಇನ್ನು ದಶಕದ ಟೆಸ್ಟ್ ಆಟಗಾರರ ನಾಮನಿರ್ದೇಶೀತ ಪಟ್ಟಿಯಲ್ಲಿದ್ದ ವಿರಾಟ್ ಕೊಹ್ಲಿ (ಭಾರತ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್), ರಂಗನಾ ಹೆರಾತ್ (ಶ್ರೀಲಂಕಾ), ಮತ್ತು ಯಾಸಿರ್ ಷಾ (ಪಾಕಿಸ್ತಾನ್) ಅವರನ್ನು ಹಿಂದಿಕ್ಕಿ ಸ್ಟೀವ್ ಸ್ಮಿತ್ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

  Published by:zahir
  First published: